Namratha Gowda: ಇಂಡಸ್ಟ್ರಿಗೆ ಬಂದು 20 ವರ್ಷ ಆಯ್ತು ಎನ್ನುವ ನಮ್ರತಾ ಗೌಡ ನಿಜವಾದ ವಯಸ್ಸೆಷ್ಟು?
ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮ ಪಾತ್ರದ ಮೂಲಕ ನಮ್ರತಾ ಗೌಡ ಖ್ಯಾತಿ ಪಡೆದರು.
ಆ ಬಳಿಕ ನಾಗಿಣಿ 2 ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ನಮ್ರತಾ ಗೌಡ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ನಮ್ರತಾ ಗೌಡ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುತ್ತಾ ತಾನು 21 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದೇನೆ ಎಂದಿದ್ದಾರೆ.
ನನ್ನ ಸ್ವಂತ ಶ್ರಮದಿಂದ ಮೇಲೆ ಬಂದಿದ್ದಾಗಿ ನಮ್ರತಾ ಗೌಡ ಹೇಳಿದ್ದಾರೆ. ಈ ವಿಚಾರ ಈಗ ಚರ್ಚೆಯಾಗುತ್ತಿದೆ. ಇದು ನಿಜವೇ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.
ನಮ್ರತಾ ಗೌಡ 21 ವರ್ಷಗಳಿಂದ ಇಂಡಸ್ಟ್ರಿಯಲ್ಲಿರುವುದು ಸುಳ್ಳಲ್ಲ. ನಮೃತಾ ಅವರು 1993 ಏಪ್ರಿಲ್ 14 ರಂದು ಹುಟ್ಟಿಜನಿಸಿದರು.
ನಮ್ರತಾ ಗೌಡ ಅವರಿಗೆ ಈಗ 30 ವರ್ಷ ವಯಸ್ಸಾಗಿದೆ. ಬಾಲಕಲಾವಿದೆಯಾಗಿ ನಮ್ರತಾ ಗೌಡ ಸಿನಿ ಜರ್ನಿ ಶುರುವಾಯಿತು.
ನಮ್ರತಾ ಗೌಡ ಎಕ್ಸ್‌ಕ್ಯೂಸ್ ಮಿ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದಾರೆ. ಮಿಲನ ಸಿನಿಮಾದಲ್ಲಿಯೂ ಬಾಲಕಲಾವಿದೆಯಾಗಿ ನಟಿಸಿದ್ದಾರೆ.