ಫ್ರೀ ವೆಡ್ಡಿಂಗ್‌ ಫೋಟೋ ಶೂಟ್‌ನಲ್ಲೇ ವಧುಗೆ ಕಿಸ್‌ ಮಾಡಿದ ಸಿರಿಯಲ್‌ ನಟಿ..!

Sat, 27 Apr 2024-7:09 pm,

ಪ್ರೀ ವೆಡ್ಡಿಂಗ್ ಫೋಟೋಶೂಟ್ ಟ್ರೆಂಡ್ ಜೋರಾಗುತ್ತಿದೆ. ಸಿನಿಮಾ ರೇಂಜ್‌ನಲ್ಲಿ ಜನಸಾಮಾನ್ಯರು ಸಹ ಫೊಟೋಶೂಟ್‌ ಮಾಡಿ ಅವುಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.  

ಮದುವೆಗೂ ಮೊದಲು ಫೋಟೋಶೂಟ್ ಮಾಡಿಸಿ ನವ ವಧುವರರು ಖುಷಿ ಪಡುತ್ತಾರೆ. ಇದಕ್ಕೆ ಕಿರುತೆರೆ ನಟಿ ಕೌಸ್ತುಭಾ ಮಣಿ ಕೂಡ ಹೊರತಾಗಿಲ್ಲ.  

ಕಲರ್ಸ್ ಕನ್ನಡ ‘ನನ್ನರಸಿ ರಾಧೆ’ ಧಾರಾವಾಹಿ ಖ್ಯಾತಿಯ ನಟಿ ಕೌಸ್ತುಭಾ ಅವರು ಹಸೆಮಣೆ ಏರಲು ರೆಡಿಯಾಗಿದ್ದು,  ವಿವಾಹ ಪೂರ್ವ ಫೋಟೋಶೂಟ್‌ ಮಾಡಿದ್ದಾರೆ.  

ʼನನ್ನರಸಿ ರಾಧೆʼ ಸೀರಿಯಲ್‌ನಲ್ಲಿ ಇಂಚರಾ ಹೆಸರಿನ ಪಾತ್ರ ಮಾಡಿ ಫೇಮಸ್ ಆಗಿದ್ದ ಕೌಸ್ತುಭಾ ಜನಮನ ಈ ಪಾತ್ರದ ಮೂಲಕ ಅವರು ಎಲ್ಲರಿಗೂ ಇಷ್ಟ ಆಗಿದ್ದರು.  

ಸಧ್ಯ ಕೌಸ್ತುಭಾ ಅವರು ಸಿದ್ಧಾಂತ್ ಸತೀಶ್ ಅವರ ಕೈ ಹಿಡಿಯಲಿದ್ದು, ವಿವಾಹ ಪೂರ್ವ ಕಾರ್ಯಗಳು ನೆರವೇರಿವೆ. ಇದರ ಜೊತೆಗೆ ಅವರ ಪ್ರೀ-ವೆಡ್ಡಿಂಗ್ ಫೋಟೋ ಕೂಡ ಗಮನ ಸೆಳೆದಿದೆ.    

ಕೌಸ್ತುಭಾ ಹಾಗೂ ಸಿದ್ಧಾಂತ್ ಸಖತ್ ಸ್ಟೈಲಿಶ್ ಆಗಿ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿದ್ದು, ಫೋಟೋ ಶೂಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.   

ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಏಪ್ರಿಲ್ 26ರಂದು ಸಿದ್ಧಾಂತ್ ಸತೀಶ್-ಕೌಸ್ತುಭಾ ವಿವಾಹ ನಡಯಲಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link