ನಟನ ಜೊತೆ ಲವ್.. ಕ್ರಿಕೆಟಿಗನ ಜೊತೆ ಸಂಬಂಧ.. ಮಗ ಹುಟ್ಟಿದ ಮೇಲೆ ಮದುವೆ.. ಯಾರು ಈ ನಟಿ?

Mon, 29 Apr 2024-9:04 am,

Hardik Pandya Love Story: ನತಾಶಾ ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.

ಬಾಲಿವುಡ್ ಡ್ಯಾನ್ಸರ್ ಮತ್ತು ಮಾಡೆಲ್ ನಟಿ ನತಾಶಾ ಸ್ಟಾಂಕೋವಿಕ್ ಸರ್ಬಿಯಾ ನಿವಾಸಿ. ತನ್ನ ದೇಶವನ್ನು ತೊರೆದು ಭಾರತಕ್ಕೆ ಬಂದ ನಟಿ ನತಾಶಾ ಬಾಲಿವುಡ್‌ನಲ್ಲಿ ನೆಲೆಕಂಡರು. ನತಾಶಾ ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ. 

ನಟಿ ನತಾಶಾ ಸ್ಟಾಂಕೋವಿಕ್ 2013 ರಲ್ಲಿ ಪ್ರಕಾಶ್ ಝಾ ಅವರ ಸತ್ಯಾಗ್ರಹಂ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಅಜಯ್ ದೇವಗನ್, ಕರೀನಾ ಕಪೂರ್, ಅಮಿತಾಬ್ ಬಚ್ಚನ್, ಮನೋಜ್ ಬಾಜಪೇಯಿ, ಅರ್ಜುನ್ ರಾಂಪಾಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ನತಾಶಾ ಅವರು ರಣವೀರ್ ಸಿಂಗ್ ಅವರೊಂದಿಗೆ ಹಲವಾರು ಜಾಹೀರಾತು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮತ್ತು ಡ್ಯಾನ್ಸ್ ಗಿಂತ ಆಕೆಯ ವೈಯಕ್ತಿಕ, ಪ್ರೇಮ ವಿಚಾರಗಳೇ ಹೆಚ್ಚು ಚರ್ಚೆಯಾಗುತ್ತವೆ. ನತಾಶಾ ಸ್ಟಾಂಕೋವಿಕ್ ತನ್ನ ಮಾಜಿ ಗೆಳೆಯ ಅಲಿ ಗೋನಿಯೊಂದಿಗೆ ನಚ್ ಬಲಿಯೆ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು

ನಚ್ ಬಲಿಯೆ ಶೋನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ನತಾಶಾ ಮತ್ತು ಅಲಿ ಗೋನಿ ಬೇರ್ಪಟ್ಟರು. ವಿಭಿನ್ನ ಸಂಸ್ಕೃತಿಗೆ ಸೇರಿದವರಾಗಿರುವುದರಿಂದ ಬೇರ್ಪಟ್ಟಿದ್ದೇವೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಆ ನಂತರ ನತಾಶಾ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರನ್ನು ಭೇಟಿಯಾದರು. ನತಾಶಾ ಮತ್ತು ಹಾರ್ದಿಕ್ ಪಾಂಡ್ಯ 30 ಜುಲೈ 2020 ರಂದು ತಮ್ಮ ಮಗನಿಗೆ ಮದುವೆಗೂ ಮುನ್ನವೇ ಜನ್ಮ ನೀಡಿದರು. ಬಳಿಕ ಮಗನ ಎದುರೇ ಇವರಿಬ್ಬರು ಮದುವೆಯಾದರು. 

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಉದಯಪುರದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ಇವರಿಬ್ಬರ ಮದುವೆಯಲ್ಲಿ ಕ್ರೀಡಾ ಲೋಕದ ಹಲವು ತಾರೆಯರು ಪಾಲ್ಗೊಂಡಿದ್ದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link