ವಿಚ್ಛೇದನದ ನಂತರವೂ ಅವಳತ್ತ ಸೆಳೆದಿದೆ ʻಹೃದಯʼ..ನತಾಶ ಪೋಸ್ಟ್‌ಗೆ ಕಾಮೆಂಟ್ ಮಾಡಿದ ಪಾಂಡ್ಯ
![](https://kannada.cdn.zeenews.com/kannada/sites/default/files/2024/07/25/425620-3884815-untitled-54-copy.jpg?im=FitAndFill=(500,286))
ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಬಾಲಿವುಡ್ ಬೆಡಗಿ ನತಾಶಾ ಸ್ಟಾಂಕೋವಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಚ್ಛೇದನದ ನಂತರ ಮುಂಬೈ ತೊರೆದು ತನ್ನ ಹುಟ್ಟೂರಾದ ಸರ್ಬಿಯಾಕ್ಕೆ ತೆರಳಿದ್ದ ನತಾಶಾ, ಮಗ ಅಗಸ್ತ್ಯನೊಂದಿಗೆ ಥೀಮ್ ಪಾರ್ಕ್ ಗೆ ತೆರಳಿದ್ದರು. ಸಂಬಂಧಿತ ಫೋಟೋಗಳನ್ನು ಇನ್ಸ್‌ಟಾಗ್ರಂನಲ್ಲಿ ಹಂಚಿಕೊಂಡಿದ್ದಾರೆ.
![](https://kannada.cdn.zeenews.com/kannada/sites/default/files/2024/07/25/425621-hardiknatas-atnail2020-7-20-8-57-19thumbnail.jpg?im=FitAndFill=(500,286))
ಈ ಪೋಸ್ಟ್‌ಗೆ ಹಾರ್ದಿಕ್ ಪಾಂಡ್ಯ ನೀಡಿರುವ ಪ್ರತಿಕ್ರಿಯೆ ಚರ್ಚೆಗೆ ಗ್ರಾಸವಾಗಿದೆ. ಹಾರ್ದಿಕ್ ಪಾಂಡ್ಯ ರೆಡ್ ಹಾರ್ಟ್ ಎಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿವೆ. ಬೇರ್ಪಟ್ಟ ನಂತರವೂ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿಯ ಬಗ್ಗೆ ಅದೇ ಗೌರವ ಮತ್ತು ಪ್ರೀತಿ ತೋರಿಸಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಜೊತೆಗಿನ ವಿಚ್ಛೇದನದ ನಂತರ, ನತಾಶಾ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟ್ರೋಲ್ ಆಗುತ್ತಿದ್ದಾರೆ. ಆಕೆಯಿಂದ ಹಾರ್ದಿಕ್ ತುಂಬಾ ಕಷ್ಟಪಟ್ಟಿದ್ದಾರೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಈ ಕ್ರಮದಲ್ಲಿ ಹಾರ್ದಿಕ್ ಪಾಂಡ್ಯ, ನತಾಶ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿರುವುದು ಈ ಟೀಕೆಗಳಿಗೆ ಕಡಿವಾಣ ಹಾಕಿದಂತಾಗಿದೆ.
![](https://kannada.cdn.zeenews.com/kannada/sites/default/files/2024/07/25/425622-hardik-natasha.jpg?im=FitAndFill=(500,286))
ಪರಸ್ಪರ ಒಪ್ಪಿಗೆ ಮೇರೆಗೆ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆಯುತ್ತಿದ್ದೇವೆ ಎಂದು ಹಾರ್ದಿಕ್ ಹೇಳಿದ್ದಾರೆ. "ನಾಲ್ಕು ವರ್ಷಗಳ ನಂತರ, ನತಾಶಾ ಮತ್ತು ನಾನು ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ಒಟ್ಟಿಗೆ ಇರಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಇಬ್ಬರ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇವೆ. ಅನೇಕ ಮಧುರ ಕ್ಷಣಗಳ ನಂತರ, ಕುಟುಂಬವನ್ನು ರೂಪಿಸಿದ ನಂತರ ಒಡೆಯುವುದು ಕಠಿಣ ನಿರ್ಧಾರ ಅಗಸ್ತ್ಯ ನಮ್ಮಿಬ್ಬರ ಜೊತೆ ಇರುತ್ತಾನೆ. ಸಹ-ಪೋಷಕರಾಗಿ, ನಾವು ಅವನ ಸಂತೋಷಕ್ಕಾಗಿ ಅವನೊಂದಿಗೆ ನಿಲ್ಲುತ್ತೇವೆ. ಈ ಕಷ್ಟದ ಸಮಯದಲ್ಲಿ ನಿಮ್ಮ ಗೌಪ್ಯತೆ ಮತ್ತು ಬೆಂಬಲವನ್ನು ನಾವು ಬಯಸುತ್ತೇವೆ' ಎಂದು ಹಾರ್ದಿಕ್ ಮತ್ತು ನತಾಶಾ ಇನ್ಸ್ಟಾಗ್ರಾಮ್ನಲ್ಲಿ ಟ್ಯಾಗ್ ಲೈನ್ನೊಂದಿಗೆ ಹಂಚಿಕೊಂಡಿದ್ದಾರೆ.
ಏಳು ವರ್ಷಗಳ ಹಿಂದೆ ಮುಂಬೈನ ಹೋಟೆಲ್ ಒಂದರಲ್ಲಿ ಹಾರ್ದಿಕ್-ನತಾಶಾ ಭೇಟಿಯಾಗಿದ್ದರು. ಆ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಪ್ರೀತಿಗೆ ತಿರುಗಿತ್ತು. 2018 ರಲ್ಲಿ, ಹಾರ್ದಿಕ್ ಪಾಂಡ್ಯ ಅವರ ಹುಟ್ಟುಹಬ್ಬದ ಪಾರ್ಟಿಯ ನಂತರ, ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ವದಂತಿಗಳಿವೆ. ಒಂದು ವರ್ಷದ ನಂತರ, ನತಾಶಾ ಸಾಮಾಜಿಕ ಮಾಧ್ಯಮದಲ್ಲಿ ಹಾರ್ದಿಕ್ ತನ್ನ ಉತ್ತಮ ಸ್ನೇಹಿತ ಎಂದು ಹೇಳಿದ್ದಾರೆ. ಹಾರ್ದಿಕ್ ಅವರನ್ನು ಹೊಗಳಿ ಪೋಸ್ಟ್ ಮಾಡಿದ್ದಾರೆ. 1 ಜನವರಿ 2020 ರಂದು, ಹಾರ್ದಿಕ್ ಅವರು ನತಾಶಾ ಅವರ ಪ್ರೀತಿಯನ್ನು ಗೆದ್ದಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು.
ಆ ವರ್ಷ ಲಾಕ್‌ಡೌನ್ ಸಮಯದಲ್ಲಿ ಅವರು ಪೋಷಕರಾದರು ಎಂದು ಅವರು ಹೇಳಿದರು. ಅಗಸ್ತ್ಯ ಜುಲೈ 2020 ರಲ್ಲಿ ಜನಿಸಿದರು. ಆದರೆ ತಡವಾಗಿ ಮದುವೆಯಾದರು. ಫೆಬ್ರವರಿ 13, 2023 ರಂದು ವಿವಾಹವಾದರು.