31,608 ಎಸೆತದಲ್ಲಿ ಒಂದೇ ಒಂದು ನೋ ಬಾಲ್ ಎಸೆಯದೆ 500 ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ?
ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆಯುವುದೆಂದರೆ ಸುಲಭದ ಮಾತಲ್ಲ. ಇಲ್ಲಿಯವರೆಗೆ ಕೆಲವೇ ಕೆಲವರು ದಿಗ್ಗಜ ಬೌಲರ್‌ಗಳು ಈ ಸಾಧನೆಯನ್ನು ಮಾಡಿದ್ದಾರೆ. ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಜೇಮ್ಸ್ ಆಂಡರ್ಸನ್, ಅನಿಲ್ ಕುಂಬ್ಳೆ, ಸ್ಟುವರ್ಟ್ ಬ್ರಾಡ್, ಗ್ಲೆನ್ ಮೆಕ್‌ಗ್ರಾತ್, ಕೌರ್ಟ್ನಿ ವಾಲ್ಷ್, ನಾಥನ್ ಲಿಯಾನ್ ಮತ್ತು ರವಿಚಂದ್ರನ್ ಅಶ್ವಿನ್ ಈ ಸಾಧನೆ ಮಾಡಿರುವವರು
ಆದರೆ ಈ ಪಟ್ಟಿಯಲ್ಲಿ ನಾಥನ್ ಲಿಯಾನ್ ಹೆಸರು ಕೊಂಚ ಭಿನ್ನವಾಗೇ ನಿಲ್ಲುತ್ತದೆ. ಪಾಕಿಸ್ತಾನ ವಿರುದ್ಧ ನಡೆದೆ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪರ್ತ್‌ನಲ್ಲಿ 5 ವಿಕೆಟ್ ಪಡೆಯುವ ಮೂಲಕ ನಾಥನ್ ಲಿಯಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ಕ್ಕೂ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಡಿದ್ದರು.
ಆದರೆ ಇಂಥಾ ಮಹಾನ್ ಸಾಧನೆ ಮಾಡಿರುವ ನಾಥನ್ ಲಿಯಾನ್ ಟೆಸ್ಟ್‌ನಲ್ಲಿ ಒಂದೇ ಒಂದು ನೋ ಬಾಲ್ ಎಸೆಯದೆ 500 ವಿಕೆಟ್ ಕಬಳಿಸಿರುವುದು ಅದ್ಭುತವೇ ಸರಿ.
ಬೌಲಿಂಗ್ ಎಂದಾಕ್ಷಣ ನೋ ಬಾಲ್ ಆಗುವುದು ಸಾಮಾನ್ಯ. ಆದರೆ ನಾಥನ್ ಅವರು ಎಷ್ಟರ ಮಟ್ಟಿಗೆ ಬೌಲಿಂಗ್‌ನಲ್ಲಿ ಸ್ಥಿರತೆ ಹೊಂದಿದ್ದರು ಎಂದರೆ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್ ಎಸೆದಿರಲಿಲ್ಲ.
ನಾಥನ್ ಲಿಯಾನ್ ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 31,608 ಎಸೆತಗಳನ್ನು ಬೌಲ್ ಮಾಡಿದ್ದಾರೆ. ಅದರಲ್ಲಿ 500 ವಿಕೆಟ್ಗಳನ್ನು ಪಡೆದಿದ್ದಾರೆ
ಲಿಯಾನ್ 123 ಟೆಸ್ಟ್ ಪಂದ್ಯಗಳಲ್ಲಿ 500 ವಿಕೆಟ್ ಪಡೆದಿದ್ದು, ಪ್ರಸ್ತುತ 500-ವಿಕೆಟ್ ಕ್ಲಬ್‌ನಲ್ಲಿರುವ ಎಲ್ಲಾ ನಾಲ್ಕು ಸ್ಪಿನ್ ಬೌಲರ್‌ಗಳಲ್ಲಿ, ಲಿಯಾನ್ ಅತಿ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.
ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್‌ನಲ್ಲಿ ಅತಿವೇಗವಾಗಿ 500 ವಿಕೆಟ್‌ಗಳ ಸಾಧನೆ ಮಾಡಿದ ಬೌಲರ್. ಕೇವಲ 87 ಇನ್ನಿಂಗ್ಸ್‌ಗಳಲ್ಲಿ 500 ವಿಕೆಟ್‌ಗಳನ್ನು ಪಡೆದಿದ್ದರು.