ʻನಾನು ಮದುವೆ ಆಗುವ ಹುಡುಗನ ಇವನೇ..ʼ ಸಾಯಿ ಪಲ್ಲವಿ ಕೈ ಹಿಡಿಯುವ ವರ ಇವರೇ !
Sai Pallavi Marriage: ನಟಿ ಸಾಯಿ ಪಲ್ಲವಿ ಮೊದಲ ಬಾರಿಗೆ ತಾವು ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ್ದಾರೆ.
ಸಾಯಿ ಪಲ್ಲವಿ ಸದ್ಯ ತೆಲುಗಿನ ಸ್ಟಾರ್ ನಟಿ. ಕೀರ್ತಿ ಸುರೇಶ್ ಮದುವೆ ಬಳಿಕ ಸಾಯಿ ಪಲ್ಲವಿ ಮದುವೆ ವಿಚಾರ ಚರ್ಚೆ ಆಗುತ್ತಿದೆ.
ಸಾಯಿ ಪಲ್ಲವಿ ಮೇಲೂ ಮದುವೆ ಒತ್ತಡ ಹೆಚ್ಚಾಗುತ್ತಿದೆಯಂತೆ ಎನ್ನಲಾಗಿದೆ. ಇದರಲ್ಲಿ ಎಷ್ಟು ಸತ್ಯವೋ ಗೊತ್ತಿಲ್ಲ.
ಕೆಲವು ವರದಿಗಳ ಪ್ರಕಾರ, ಸಾಯಿ ಪಲ್ಲವಿ ಮದುವೆ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಸೋದರಿಯರ ಮದುವೆಯೂ ಮುಗಿದಿದ್ದು, ಸಾಯಿ ಪಲ್ಲವಿಗೆ ಇನ್ನೂ ಮದುವೆಯಾಗಿಲ್ಲ.
ಕೊರೊನಾ ಸಮಯದಲ್ಲಿ ಅವರ ಪೋಷಕರು ಮದುವೆ ಆಗುವಂತೆ ಒತ್ತಾಯಿಸಿದ್ದರಂತೆ. ಆಗ ತಾನು ಇನ್ನೂ ಬಯಸಿದ್ದನ್ನು ಸಾಧಿಸಿಲ್ಲ ಎಂದು ಸಾಯಿ ಪಲ್ಲವಿ ವಾದಿಸಿದರಂತೆ.
ನಂತರ ಚಿತ್ರಗಳಲ್ಲಿ ಬ್ಯುಸಿ ಆದ ಕಾರಣ ಮದುವೆಯ ಪ್ರಸ್ತಾಪ ಬರಲಿಲ್ಲವಂತೆ. ಗುರಿ ತಲುಪುವವರೆಗೂ ಮದುವೆ ಆಗುವುದಿಲ್ಲ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ ಎನ್ನಲಾಗಿದೆ.
ಮದುವೆ ಆದರೂ ಅದು ಹೆತ್ತವರು ನೋಡಿದ ಹುಡುಗನನ್ನೇ ನಾನು ಮದುವೆಯಾಗುತ್ತೇನೆ ಎಂದಿದ್ದಾರಂತೆ ನಟಿ ಸಾಯಿ ಪಲ್ಲವಿ.