ಮೊಸರಿನೊಂದಿಗೆ ಈ ಹಣ್ಣನ್ನು ಹಿಸುಕಿ ಹಚ್ಚಿದರೆ ಅದೇ ನ್ಯಾಚ್ಯುರಲ್ ಡೈ !ಹಚ್ಚಿ ಕೈ ತೆಗೆಯುತ್ತಿದ್ದಂತೆಯೇ ಬಿಳಿ ಕೂದಲು ಕಪ್ಪಾಗುವುದು
ಬಿಳಿ ಕೂದಲು ಯುವಕ ಯುವತಿಯರು ಕೂಡಾ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಬಿಳಿ ಕೂದಲು. ಸಣ್ಣ ವಯಸ್ಸಿನಲ್ಲಿಯೇ ಬಿಳಿ ಕೂದಲು ಮೂಡಲು ಬೇರೆ ಬೇರೆ ಕಾರಣಗಳು ಇರಬಹುದು.
ಹಾಗಂತ ಬಿಳಿ ಕೂದಲು ಕಂಡ ಕೂಡಲೇ ಕಲರ್ ಹಚ್ಚಿಕೊಳ್ಳುವ ಅವಶ್ಯಕತೆ ಇಲ್ಲ. ನಾವು ಹೇಳುವ ಮನೆ ಮದ್ದನ್ನು ಸರಿಯಾದ ವಿಧಾನದಲ್ಲಿ ಬಳಸಿದರೆ ನೈಸರ್ಗಿಕವಾಗಿಯೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಬಿಳಿ ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿಸಲು ಒಂದು ಕಪ್ ಮೊಸರು ಸಾಕು. ಒಂದು ಕಪ್ ಮೊಸರಿನೊಂದಿಗೆ ಒಂದು ಟೊಮೇಟೊ ಹಣ್ಣನ್ನು ಚೆನ್ನಾಗಿ ಕಿವುಚಿ ಹಚ್ಚಿದರೆ ಬಿಳಿ ಕೂದಲಿನ ಸಮಸ್ಯೆ ಬುಡದಿಂದಲೇ ನಿವಾರಣೆಯಾಗುತ್ತದೆ.
ಕೂದಲು ಬೇರಿನಿಂದಲೇ ಗಟ್ಟಿ ಮಾಡಲು ಮೊಸರು ಸಹಾಯ ಮಾಡುತ್ತದೆ. ಜೊತೆಗೆ ನೈಸರ್ಗಿಕವಾಗಿ ಕೂದಲಿಗೆ ಕಪ್ಪು ಬಣ್ಣ ನೀಡುವಲ್ಲಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಆಸಿಡ್ ಗುಣಗಳನ್ನು ಹೊಂದಿರುವ ಟೊಮೇಟೊ ಕೂದಲಿನ PH ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ನೆತ್ತಿಯ ಮೇಲೆ ಹೆಚ್ಚುವರಿ ಎಣ್ಣೆ ಉತ್ಪಾದನೆಯನ್ನು ತಡೆದು, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
ಮೊಸರು ಮತ್ತು ಟೊಮೇಟೊ ಹಣ್ಣನ್ನು ಸರಿಯಾಗಿ ಮಿಶ್ರಣ ಮಾಡಿ ಅದಕ್ಕೆ ಅರ್ಧ ಚಮಚ ನೀಲಗಿರಿ ಎಣ್ಣೆಯನ್ನು ಸೇರಿಸಬೇಕು, ಈಗ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಿ.ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.