ಹೇರ್ ಫಾಲ್ ಸಮಸ್ಯೆಗೆ ನೈಸರ್ಗಿಕ, ಪರಿಣಾಮಕಾರಿ ಮನೆಮದ್ದು
ಕೂದಲು ಉದುರುವಿಕೆ ಸಮಸ್ಯೆಗೆ ಆಲೋವೆರಾ ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ. ಆಲೋವೆರಾದ ಮಧ್ಯದ ಲೋಳೆಯನ್ನು ತೆಗೆದು ಅದನ್ನು ಕೂದಲ ಬುಡಕ್ಕೆ ಹೆಚ್ಚಿ ಅರ್ಧಗಂಟೆ ಬಳಿಕ ಕೂದಲನ್ನು ತೊಳೆಯುವುದರಿಂದ ಕೂದಲಿನ ಹಲವು ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
ನಿಯಮಿತವಾಗಿ ಕ್ಯಾರೆಟ್ ಜ್ಯೂಸ್ ಸೇವಿಸುತ್ತಾ ಬಂದರೆ ಅದು ದೃಷ್ಟಿಯನ್ನು ವೃದ್ಧಿಸುವುದರ ಜೊತೆಗೆ ಕೂದಲು ಉದುರುವಿಕೆ ಸಮಸ್ಯೆಗೂ ಪರಿಹಾರ ನೀಡುತ್ತದೆ.
ವಾರದಲ್ಲಿ ಒಂದೆರಡು ಬಾರಿಯಾದರೂ ಕೂದಲಿಗೆ ಚೆನ್ನಾಗಿ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ, ಮರುದಿನ ಬೆಳಿಗ್ಗೆ ತಲೆಗೆ ಸ್ನಾನ ಮಾಡುವುದರಿಂದ ಕೂದಲು ಉದುರುವಿಕೆ, ತಲೆಹೊಟ್ಟು ಸೇರಿದಂತೆ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ನೆಲ್ಲಿಕಾಯಿಯಲ್ಲಿ ಕೂದಲಿನ ಆರೋಗ್ಯಕ್ಕೆ ಬೇಕಾದ ಹಲವು ಅಂಶಗಳು ಅಡಕವಾಗಿರುವುದರಿಂದ ನಿಯಮಿತವಾಗಿ ಇದರ ಸೇವನೆಯು ಕೂದಲುದುರುವಿಕೆ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ನೀಡಬಲ್ಲದು.
ಭೃಂಗರಾಜ್ ಕೂದಲು ಉದುರುವಿಕೆ ಚಿಕಿತ್ಸೆಯಲ್ಲಿ ಅತ್ಯಂತ ಪರಿಣಾಮಕಾರಿ ಆಯುರ್ವೇದ ಗಿಡಮೂಲಿಕೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.