ಈ ಹಣ್ಣನ್ನು ಕಿವುಚಿ ಕೂದಲಿಗೆ ಹಚ್ಚಿದರೆ ಉದ್ದನೆ ಬೆಳೆಯುವುದು ಕೇಶರಾಶಿ! ಕೂದಲಿನ ಪ್ರತೀ ಸಮಸ್ಯೆಗೆ ಇದೇ ಪರಿಹಾರ
ಕೂದಲು ಉದುರದಂತೆ ತಡೆಯಬೇಕಾದರೆ ಕೂದಲಿಗೆ ಬುಡದಿಂದ ತುದಿಯವರೆಗೆ ಪೌಷ್ಟಿಕಾಂಶ ನೀಡಬೇಕಾಗುತ್ತದೆ. ಕೂದಲನ್ನು ಬುಡದಿಂದಲೇ ಸದೃಢವಾಗಿ ಮಾಡಲು ಬಾಳೆಹಣ್ಣಿನ ಹೇರ್ ಮಾಸ್ಕ್ ಅನ್ನು ಹಚ್ಚಬಹುದು. ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದಲ್ಲದೆ, ಕೂದಲನ್ನು ಹೊಳೆಯುವಂತೆ ಮಾಡುತ್ತದೆ.
ಮೊಸರಿನ ಹೇರ್ ಮಾಸ್ಕ್ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ.ಇದು ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಒಮ್ಮೆ ತಲೆಹೊಟ್ಟು ಕಡಿಮೆಯಾದರೆ ಕೂದಲು ಬೆಳವಣಿಗೆ ಕೂಡಾ ಆರಂಭವಾಗುತ್ತದೆ.
ಈರುಳ್ಳಿ ಹೇರ್ ಮಾಸ್ಕ್ ನಿಮ್ಮ ಕೂದಲನ್ನು ಸರಿಯಾಗಿ ಪೋಷಿಸಲು ಸಹಾಯ ಮಾಡುತ್ತದೆ. ಇದನ್ನು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಕೂದಲಿಗೆ ಹಚ್ಚಬಹುದು.
ವಾರಕ್ಕೆ ಎರಡು ಬಾರಿ ನಿಮ್ಮ ಕೂದಲಿಗೆ ಮೊಟ್ಟೆಯ ಹೇರ್ ಮಾಸ್ಕ್ ಹಚ್ಚಬೇಕು. ಹೀಗೆ ಮಾಡುವುದರಿಂದ ಕೂದಲಿಗೆ ಅಗತ್ಯ ಪ್ರೊಟೀನ್ ಸಿಗುತ್ತದೆ.ಕೂದಲು ಬುಡದಿಂದ ತುದಿಯವರೆಗೂ ಬಲಗೊಳ್ಳುತ್ತದೆ
ಅಲೋವೆರಾ ಮತ್ತು ಮೊಟ್ಟೆಯ ಹೇರ್ ಮಾಸ್ಕ್ ನಿಮ್ಮ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ವಾರಕ್ಕೊಮ್ಮೆ ಈ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿದರೆ ಹಲವಾರು ರೀತಿಯ ಪ್ರಯೋಜನಗಳಾಗುವುದು. (ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಲು ಮರೆಯದಿರಿ. Zee Media ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)