ಚಳಿಗಾಲದ ಒಣ ಕೆಮ್ಮಿಗೆ ಇಲ್ಲಿದೆ 5 ಬೆಸ್ಟ್ ಮನೆಮದ್ದು: ರಾತ್ರಿ ಕುಡಿದರೆ ಬೆಳಗಾಗುವುದರಲ್ಲೇ ಗೋಚರಿಸುತ್ತೆ ಪರಿಣಾಮ!
ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತದ, ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಕರಿಮೆಣಸಿನ ಜೊತೆಗೆ ಸೇವಿಸಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ. ಒಂದು ಚಮಚ ಅರಿಶಿನ ಮತ್ತು ಕಾಲು ಚಮಚ ಕಾಳುಮೆಣಸಿನ ಪುಡಿ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಮಾಡುವುದು ಒಣ ಕೆಮ್ಮಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಗಂಟಲಿನ ಸೋಂಕು ಬೇಗನೆ ಕಡಿಮೆಯಾಗುತ್ತದೆ.
ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಗಂಟಲು ನೋವನ್ನು ಕಡಿಮೆ ಮಾಡುತ್ತದೆ. ಒಣ ಕೆಮ್ಮಿನಿಂದ ಬಳಲುತ್ತಿದ್ದರೆ ಒಂದು ಚಮಚ ಜೇನುತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ದಿನಕ್ಕೆ 3-4 ಬಾರಿ ತೆಗೆದುಕೊಳ್ಳಿ
ಶುಂಠಿಯು ಸೂಕ್ಷ್ಮಜೀವಿ ವಿರೋಧಿ ಗುಣಗಳನ್ನು ಹೊಂದಿದೆ. ಒಣ ಕೆಮ್ಮನ್ನು ನೈಸರ್ಗಿಕವಾಗಿ ತೊಡೆದುಹಾಕಲು ಶುಂಠಿ ಉಪಯುಕ್ತವಾಗಿದೆ. ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಸ್ವಲ್ಪ ಉಪ್ಪು ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ಜಗಿದು ರಸ ನುಂಗಬೇಕು.
ಒಣ ಕೆಮ್ಮು ಗಂಟಲು ನೋವನ್ನು ಉಂಟುಮಾಡುತ್ತದೆ. ಒಂದು ಚಿಟಿಕೆ ಕಾಳುಮೆಣಸಿನ ಪುಡಿಯೊಂದಿಗೆ ಅರ್ಧ ಚಮಚ ತುಪ್ಪವನ್ನು ಬೆರೆಸಿ ಸೇವಿಸಿ. ಇದನ್ನು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.