ಡೈ ಮಾಡುವುದು ಬೇಕಿಲ್ಲ..! ಕೇವಲ ಎರಡು ವಾರ ಈ ಎಣ್ಣೆ ಬಳಸಿದರೆ ಬೆಳ್ಳಗಾಗಿರುವ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತೆ...!
ಬದಲಾದ ಜೀವನಶೈಲಿ, ಕಳಪೆ ಆಹಾರದಿಂದಾಗಿ ಚಿಕ್ಕ ವಯಸ್ಸಿನಲ್ಲೇ ನೆರೆ ಕೂದಲಿನ ಸಮಸ್ಯೆ ಹಲವರನ್ನು ಕಾಡುತ್ತದೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಸಾಮಾನ್ಯವಾಗಿ ಹೆಚ್ಚಿನ ಜನರು ಹೇರ್ ಡೈ ಅನ್ನು ಬಳಸುತ್ತಾರೆ.
ಆದರೆ, ಹೇರ್ ಡೈ ಅನ್ನು ಉಪಯೋಗಿಸದೆ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ನೀವು ಮನೆಯಲ್ಲಿಯೇ ತಯಾರಿಸಬಹುದಾದ ಒಂದು ವಿಶೇಷ ಹೇರ್ ಆಯಿಲ್ ಸಹಾಯದಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
ಈ ಹೋಮ್ ಮೇಡ್ ಹೇರ್ ಆಯಿಲ್ ತಯಾರಿಸಲು ಬೇಕಾಗುವ ಪದಾರ್ಥಗಳೆಂದರೆ:- ಒಣಗಿದ ನೆಲ್ಲಿಕಾಯಿ, ಮೆಂತ್ಯ ಕಾಳುಗಳು, ಕಾಫಿ ಪುಡಿ, ಕಾಲೊಂಜಿ, ಆಲಿವ್ ಆಯಿಲ್
ಸಮ ಪ್ರಮಾಣದಲ್ಲಿ ಒಣಗಿದ ನೆಲ್ಲಿಕಾಯಿ, ಮೆಂತ್ಯ ಕಾಳುಗಳು, ಕಾಫಿ ಪುಡಿ, ಕಾಲೊಂಜಿಯನ್ನು ತೆಗೆದುಕೊಂಡು ಎಲ್ಲವನ್ನೂ ನುಣ್ಣಗೆ ಪುಡಿಮಾಡಿಕೊಳ್ಳಿ.
ಒಂದು ಬಾಣಲೆಯನ್ನು ಕಾಯಿಸಿ ಅದರಲ್ಲಿ ಆಲಿವ್ ಎಣ್ಣೆಯನ್ನು ಹಾಕಿ ಕಾಯಿಸಿ ಬಳಿಕ ಇದರಲ್ಲಿ ಒಣಗಿದ ನೆಲ್ಲಿಕಾಯಿ, ಮೆಂತ್ಯ ಕಾಳುಗಳು, ಕಾಫಿ ಪುಡಿ, ಕಾಲೊಂಜಿ ಪುಡಿ ಮಿಶ್ರಣವನ್ನು ಹಾಕಿ 5-10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಒಲೆಯನ್ನು ಆರಿಸಿ.
ಕಾಯಿಸಿಟ್ಟ ಎಣ್ಣೆ ತಣ್ಣಗಾದ ಬಳಿಕ ಅದನ್ನು ಶೋಧಿಸಿ ಒಂದು ಬಾಟಲಿಯಲ್ಲಿ ಶೇಖರಿಸಿ ಇಡಿ.
ನಿತ್ಯ ರಾತ್ರಿ ಮಲಗುವ ಮೊದಲು ಈ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ನಿರಂತರ ಎರಡು ವಾರ ಹೀಗೆ ಮಾಡಿದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.