ಬಿಳಿ ಕೂದಲನ್ನು ತಕ್ಷಣವೇ ಕಪ್ಪಾಗಿಸಲು ಇಲ್ಲಿದೆ ಸುಲಭ ಮನೆ ಮದ್ದು! ಸಿಗುವುದು ಗ್ಯಾರಂಟಿ ಪರಿಹಾರ

Fri, 04 Aug 2023-4:03 pm,

ಮೆಲೆನಿನ್ ಮತ್ತು ನ್ಯೂ ಮೆಲೆನಿನ್ ಎನ್ನುವ ಅಂಶಗಳು ಕೂದಲಿನ ಬಣ್ಣಕ್ಕೆ ಕಾರಣವಾಗುತ್ತದೆ. ಮೆಲಿನಿನ್ ಕೂದಲಿಗೆ ಕಪ್ಪು ಬಣ್ಣ ನೀಡುತ್ತದೆ. ಮೆಲೆನಿನ್ ಕೊರತೆಯಾದರೆ ಕೂದಲು ಬಿಳಿಯಾಗುವುದಕ್ಕೆ ಆರಂಭವಾಗುತ್ತದೆ.   ಕೆಲವು ಸಂದರ್ಭಗಳಲ್ಲಿ, ಕೂದಲು ಬಿಳಿಯಾಗುವುದರ ಹಿಂದೆ ಆನುವಂಶಿಕ ಕಾರಣಗಳಿರಬಹುದು. ಅನಿಯಮಿತ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಕೂಡಾ ಬಿಳಿ ಕೂದಲಿಗೆ ಕಾರಣವಾಗಿರುತ್ತದೆ. 

ಕರಿಬೇವಿನ ಎಲೆಗಳನ್ನು ಬಹುತೇಕ ಎಲ್ಲಾ ರೀತಿಯ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಪ್ರೋಟೀನ್ ನಂತಹ ಪೋಷಕಾಂಶಗಳು ಹೇರಳವಾಗಿವೆ. ಇದಲ್ಲದೆ, ಕರಿಬೇವಿನ ಎಲೆಗಳಲ್ಲಿ ವಿಟಮಿನ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಮತ್ತು ಫೋಲಿಕ್ ಆಮ್ಲವಿದೆ. ಈ ಎಲೆಯ ಪೇಸ್ಟ್ ಅನ್ನು ಸಾಮಾನ್ಯ ಕೂದಲಿಗೆ ಹಚ್ಚುವುದರಿಂದ   ಬಿಳಿ ಕೂದಲು ಮತ್ತೆ ಕಪ್ಪಾಗುತ್ತದೆ.   

ನೆಲ್ಲಿಕಾಯಿ ಮತ್ತು ಗೋರಂಟಿಗಳ ಔಷಧೀಯ ಗುಣಗಳು ನಮಗೆಲ್ಲರಿಗೂ ತಿಳಿದಿದೆ. ಪ್ರತಿದಿನ ಒಂದು ಲೋಟ ನೆಲ್ಲಿಕಾಯಿ ರಸವನ್ನು ಕುಡಿದರೆ, ಕೂದಲು ಬುಡದಿಂದಲೇ ಕಪ್ಪಾಗಳು ಆರಂಭವಾಗುತ್ತದೆ. ಇದಲ್ಲದೇ ನೆಲ್ಲಿಕಾಯಿ ಪುಡಿಯನ್ನು ಗೋರಂಟಿಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಉತ್ತಮಗೊಳ್ಳುತ್ತದೆ.

 ಸಿಟ್ರಸ್ ಹಣ್ಣುಗಳು : ಕೂದಲು ಬಿಳಿ ಮತ್ತು ದುರ್ಬಲ ಕುದಳಲಿನ ಸಮಸ್ಯೆ ಹೋಗಲಾಡಿಸಲು ದೈನಂದಿನ ಆಹಾರದಲ್ಲಿ ಸಿಟ್ರಸ್ ಹಣ್ಣುಗಳನ್ನು ಸೇರಿಸುವುದು ಮುಖ್ಯ. ನಿಂಬೆ, ಕಿತ್ತಳೆ, ದ್ರಾಕ್ಷಿಯಂತಹ ಹಣ್ಣುಗಳನ್ನು ಸೇವಿಸಬಹುದು. ಇದರ ಪರಿಣಾಮ ಕೆಲವೇ ದಿನಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

ಮೆಂತ್ಯೆ ಬೀಜಗಳು :ಆರೋಗ್ಯಕರ, ಬಲವಾದ ಮತ್ತು ಕಪ್ಪು ಕೂದಲು ಪಡೆಯಲು, ಮೆಂತ್ಯೆ ಬೀಜಗಳನ್ನು ಬಳಸಿ. ಇದರಲ್ಲಿರುವ ಪೋಷಕಾಂಶಗಳು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಮೆಂತ್ಯೆ ಬೀಜಗಳನ್ನು ನೀರಿನಲ್ಲಿ ನೆನೆಸಿ ನಂತರ ಅವುಗಳನ್ನು ಪೇಸ್ಟ್ ಆಗಿ ಪುಡಿಮಾಡಿ. ಈ ಪೇಸ್ಟ್ ಅನ್ನು ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಸ್ವೀಕರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link