Nautapa 2021: ಕೊರೊನಾ ಮಧ್ಯೆ ಬರುತ್ತಿವೆ ಸುಡುಬಿಸಿಲಿನ 9 ದಿನಗಳು, ನೀವೂ ಸಿದ್ಧರಾಗಿ
1. ನೌತಪಾ ಯಾವಾಗ ಹಾಗೂ ಏಕೆ ಸಂಭವಿಸುತ್ತದೆ (Significance Of Nautapa 2021) - ಸೂರ್ಯ ರೋಹಿಣಿ ನಕ್ಷತ್ರದ ಮೂಲಕ ಹಾದು ವೃಷಭ ರಾಶಿಯಲ್ಲಿ 10 ರಿಂದ 20 ಅಂಶಗಳವರೆಗೆ ಇದ್ದರೆ ಅದನ್ನು ನೌತಪಾ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಸೂರ್ಯ ಭೂಮಿಗೆ ತುಂಬಾ ಹತ್ತಿರದಲ್ಲಿರುತ್ತಾನೆ. ಈ ನಕ್ಷತ್ರದಲ್ಲಿ ಸೂರ್ಯ ಸುಮಾರು 15 ದಿನಗಳವರೆಗೆ ಇರುತ್ತಾನೆ. ಆದರೆ ಆರಂಭಿಕ 9 ದಿನಗಳವರೆಗೆ ತಾಪಮಾನ ತುಂಬಾ ಏರಿಕೆಯಾಗುತ್ತದೆ. ಹೀಗಾಗಿ ಈ ಒಂಬತ್ತು ದಿನಗಳನ್ನು ನೌತಪಾ ಎಂದು ಕರೆಯಲಾಗುತ್ತದೆ.
2. ಈ ಅವಧಿಯಲ್ಲಿ ಸೂರ್ಯ ರೋಹಿಣಿ ನಕ್ಷತ್ರ ಪ್ರವೆಶಿಸಲಿದ್ದಾನೆ - ಮಾಹಿತಿಗಳ ಪ್ರಕಾರ ಮೇ 25 ರ ಬೆಳಗ್ಗೆ 8 ಗಂಟೆ 16 ನಿಮಿಷಕ್ಕೆ ರೋಹಿಣಿ ನಕ್ಷಂತ್ರವನ್ನು ಪ್ರವೆಶಿಸಲಿದ್ದಾನೆ ಹಾಗೂ ಜೂನ್ 8ರ ಬೆಳಗ್ಗೆ 6ಗಂಟೆ 40 ನಿಮಿಷಗಳವರೆಗೆ ಅಲ್ಲಿಯೇ ಇರಲಿದ್ದಾನೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಈ ಬಾರಿಯ ನೌತಪಾ ಅವಧಿಯಲ್ಲಿ ಸುಡುಬಿಸಿಲಿನ ಜೊತೆಗೆ ಬಿರುಗಾಳಿ ಹಾಗೂ ಮಳೆ ಕೂಡ ಸಂಭವಿಸಲಿದೆ.
3. ಆರಂಭಿಕ 3 ದಿನಗಳಲ್ಲಿ ಭೀಕರ ಬಿಸಿಲು ಬೀಳಲಿದೆ - ಮೇ 25 ರಿಂದ ಆರಂಭಿಕ ಮೂರು ದಿನಗಳಲ್ಲಿ ಭೀಕರ ಬಿಸಿಲು ಬೀಳಲಿದೆ ಎಂದು ಜ್ಯೋತಿಷ್ಯ ವಿದ್ವಾಂಸರು ಹೇಳಿದ್ದಾರೆ. ಆದರೆ, ನೌತಪಾ ಕೊನೆಯ ದಿನಗಳಲ್ಲಿ ಮಳೆ ಸಂಭವಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಹೀಗಾಗಿ ಈ ಬಾರಿಯ ಮಾನ್ಸೂನ್ ಸಾಮಾನ್ಯಕ್ಕಿಂತ ಉತ್ತಮವಾಗಿರುವ ಸಾಧ್ಯತೆ ಇದೆ. ಅಂದರೆ ಈ ಬಾರಿ ಸಾಮಾನ್ಯಕ್ಕಿಂತ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
4. ಈ 9 ದಿನಗಳ ಅವಧಿಯಲ್ಲಿ ಏನ್ ಮಾಡ್ಬೇಕು ಅಥವಾ ಏನ್ ಮಾಡಬಾರದು? - ಈ 9 ದಿನಗಳ ಅವಧಿಯಲ್ಲಿ ಮಹಿಳೆಯರು ಕೈ ಮತ್ತು ಕಾಲುಗಳಿಗೆ ಮೆಹಂದಿ ಹಾಕಿಕೊಳ್ಳುತ್ತಾರೆ. ಏಕೆಂದರೆ ಮೆಹಂದಿ ಗುಣಧರ್ಮ ತಂಪಾಗಿರುತ್ತದೆ. ಈ ಒಂಬತ್ತು ದಿನಗಳಲ್ಲಿ ಸಾಕಷ್ಟು ನೀರು ಸೇವಿಸಬೇಕು ಹಾಗೂ ಜಲದಾನ ಕೂಡ ಮಾಡಬೇಕು. ಏಕೆಂದರೆ ನೀರಿನ ಕೊರತೆಯಿಂದ ಜನರು ಅನಾರೋಗ್ಯಕ್ಕೆ ಒಳಗಾಗಬಾರದು ಎಂಬುದು ಇದರ ಹಿಂದಿನ ಉದ್ದೇಶ.
5. ನೌತಪಾ 9 ದಿನಗಳ ವಿಶೇಷತೆ ಏನು? - ಹಿಂದೂ ಧರ್ಮಶಾಸ್ತ್ರಗಳಲ್ಲಿ ಸೂರ್ಯದೇವನಿಗೆ ವಿಶೇಷ ಮಹತ್ವವಿದೆ. ಈ ನೌತಪಾ ವರ್ಣನೆಯನ್ನು ಶ್ರೀಮದ್ಭಗವದ್ಗೀತೆಯಲ್ಲಿಯೂ ಕೂಡ ಮಾಡಲಾಗಿದೆ. ಜೋತಿಷ್ಯಶಾಸ್ತ್ರದ ರಚನೆಯಾದಾಗಿನಿಂದ ನೌತಪಾ ನಡೆದುಕೊಂಡು ಬರುತ್ತಿದೆ ಎಂಬುದನ್ನು ಪುರಾಣಗಳಲ್ಲಿ ಹೇಳಲಾಗಿದೆ.
6. ಇದರ ವೈಜ್ಯಾನಿಕ ದೃಷ್ಟಿಕೋನ ಏನು? (Scientific Facts About Nautapa 2021) - ಖಗೋಳ ವಿಜ್ಞಾನದ ಪ್ರಕಾರ ಈ ಒಂಬತ್ತು ದಿನಗಳ ಅವಧಿಯಲ್ಲಿ ಸೂರ್ಯನ (Sun) ಕಿರಣಗಳು ನೇರವಾಗಿ ಭೂಮಿಯ (Earth) ಮೇಲೆ ಬೀಳುತ್ತವೆ. ಇದರಿಂದ ತಾಪಮಾನದಲ್ಲಿ ಭಾರಿ ಹೆಚ್ಚಳವಾಗುತ್ತದೆ. ಇದರಿಂದ ಬಯಲು ಪ್ರದೇಶದಲ್ಲಿ ಕಡಿಮೆ ಒತ್ತಡದ ಕ್ಷೇತ್ರ ನಿರ್ಮಾಣಗೊಳ್ಳುತ್ತದೆ. ಈ ಕಡಿಮೆ ಒತ್ತಡದ ಕ್ಷೇತ್ರ ಸಮುದ್ರದಲ್ಲಿ ಅಲೆಗಳನ್ನು ಆಕರ್ಷಿಸುತ್ತದೆ. ಇದರಿಂದ ತಂಪಾದ ಗಾಳಿ, ಬಿರುಗಾಳಿ ಹಾಗೂ ಮಳೆ ಬೀಳುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ಅವಧಿಯಲ್ಲಿ ವೇಗವಾಗಿ ಗಾಳಿ ಬೀಸಬಹುದು ಆದರೆ, ಮಳೆ ಬೀಳಬಾರರು. ಏಕೆಂದರೆ ಮಳೆ ಮಾನ್ಸೂನ್ ಚಟುವಟಿಕೆಗಳನ್ನು ಕಡಿಮೆ ಮಾಡುತ್ತದೆ. ಆದರೆ, ಒಂದು ವೇಳೆ ಮಲೆಯಾಗದೇ ಹೋದಲ್ಲಿ ಮಾನ್ಸೂನ್ ಉತ್ತಮವಾಗಿರುತ್ತದೆ.