ನವಪಂಚಮ ಯೋಗದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಬಂಪರ್ ಧನಲಾಭ, ಮುಟ್ಟಿದ್ದೆಲ್ಲಾ ಚಿನ್ನವಾಗುವ ಪರ್ವಕಾಲ!

Wed, 04 Dec 2024-7:10 am,

ಡಿಸೆಂಬರ್ 02ರಂದು ಶುಕ್ರ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಈಗಾಗಲೇ ಗುರು ವೃಷಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದಾಗಿ ಶುಕ್ರನು ವೃಷಭ ರಾಶಿಯ ಒಂಬತ್ತನೇ ಮನೆಯಲ್ಲಿಯೂ, ಗುರು ಮಕರ ರಾಶಿಯ ಐದನೇ ಮನೆಯಲ್ಲಿ ಉಪಸ್ಥಿತರಿದ್ದಾರೆ.   

ಗುರು-ಶುಕ್ರರ ಈ ಸಂಯೋಜನೆಯಿಂದ ಶುಭ ಯೋಗಗಳಲ್ಲಿ ಒಂದಾದ ನವಪಂಚಮ ರಾಜಯೋಗ ನಿರ್ಮಾಣವಾಗಿದೆ. ಇದರಿಂದ ಕೆಲವು ರಾಶಿಯವರಿಗೆ ಸಾಕ್ಷಾತ್ ಐಶ್ವರ್ಯ ಲಕ್ಷ್ಮಿಯೇ ಒಲಿಯಲಿದ್ದಾಳೆ ಎನ್ನಲಾಗುತ್ತಿದೆ. 

ವೃಷಭ ರಾಶಿ: ನವಪಂಚಮ ರಾಜಯೋಗವು ಈ ರಾಶಿಯವರಿಗೆ ಹೊಸ ಉದ್ಯೋಗಾವಕಾಶವನ್ನು ನೀಡಲಿದೆ. ದೀರ್ಘ ಸಮಯದಿಂದ ಸ್ಥಗಿತಗೊಂಡಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣಗಳು ಲಾಭದಾಯಕವಾಗಿರಲಿದೆ. 

ಕರ್ಕಾಟಕ ರಾಶಿ: ಗುರುವಿನೊಂದಿಗೆ ಶುಕ್ರನಾ ಸಂಯೋಜನೆ ಈ ರಾಶಿಯವರಿಗೆ ಎಲ್ಲಾ ಆಯಾಮಗಳಲ್ಲೂ ಲಾಭವನ್ನೇ ನೀಡಲಿದೆ. ಇದರಿಂದ ಹಣಕಾಸಿನ ಸ್ಥಿತಿಯಲ್ಲಿ ಪ್ರಗತಿಯನ್ನು ಕಾಣಬಹುದು. ವೈವಾಹಿಕ ಸುಖವನ್ನು ಕಾಣುವಿರಿ. ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಏರುವಿರಿ. 

ಕನ್ಯಾ ರಾಶಿ: ನವಪಂಚಮ ರಾಜಯೋಗವು ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ನೀಡಲಿದ್ದು ಮುಟ್ಟಿದ್ದೆಲ್ಲಾ ಬಂಗಾರವಾಗುವ ಸುವರ್ಣ ಸಮಯ ಇದಾಗಿರಲಿದೆ. ವೃತ್ತಿ-ವ್ಯವಹಾರದಲ್ಲಿ ಬಂಪರ್ ಧನಲಾಭವನ್ನು ಕಾಣುವಿರಿ. ಭವಿಷ್ಯದ ದೃಷ್ಟಿಯಿಂದ ಹೆಚ್ಚಿನ ಹಣ ಉಳಿಸುವಲ್ಲಿ ಯಶಸ್ವಿಯಾಗುವಿರಿ. 

ಕುಂಭ ರಾಶಿ: ನವಪಂಚಮ ರಾಜಯೋಗದ ಫಲವಾಗಿ ಈ ರಾಶಿಯವರು ಆಧ್ಯಾತ್ಮಿಕ ಪ್ರವಾಸವನ್ನು ಕೈಗೊಳ್ಳಬಹುದು. ಉನ್ನತ ವಿದ್ಯಾಭ್ಯಾಸ, ವೃತ್ತಿ ಸಂಬಂಧಿತ ವಿದೇಶಕ್ಕೆ ತೆರಳಲು ಬಯಸುವವರಿಗೆ ನಿಮ್ಮ ಕನಸು ನನಸಾಗುವ ಸಮಯ. ಹೊಸ ಆಸ್ತಿ, ವಾಹನ ಖರೀದಿ ಯೋಗವೂ ಇದೆ. 

ಮೀನ ರಾಶಿ: ಗುರು-ಶುಕ್ರರಿಂದ ನಿರ್ಮಾಣವಾದ ನವಪಂಚಮ ರಾಜಯೋಗವು ಈ ರಾಶಿಯವರಿಗೆ ದಿಢೀರ್ ಧನಲಾಭವನ್ನು ನೀಡಲಿದೆ. ಪೂರ್ವಜರ ಆಸ್ತಿಯಿಂದ ಲಾಭವಾಗಲಿದೆ. ವ್ಯವಹಾರದಲ್ಲೂ ಯಶಸ್ಸನ್ನು ಗಳಿಸುವಿರಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link