50 ವರ್ಷಗಳ ಬಳಿಕ ನವಪಂಚಮ ರಾಜಯೋಗ ! ಈ ರಾಶಿಯವರ ಜೀವನದಲ್ಲಿ ಧನಲಕ್ಷ್ಮೀ ಪ್ರವೇಶ, ಹೆಜ್ಜೆ ಹೆಜ್ಜೆಗೂ ವಿಜಯ ಮಾಲೆ
50 ವರ್ಷಗಳ ನಂತರ ಇದೀಗ ಅಪರೂಪದ ಯೋಗ ರೂಪುಗೊಂಡಿದೆ. ಈ ಸಮಯದಲ್ಲಿ ಜ್ಯೋತಿಷ್ಯದ ಪ್ರಕಾರ ಪ್ರಸ್ತುತ ಮಂಗಳ ಮತ್ತು ಗುರು ಸಿಂಹ ರಾಶಿಯಲ್ಲಿ ಒಟ್ಟಿಗೆ ಸೇರಿಕೊಂಡಿದೆ. ಈ ಎರಡು ಗ್ರಹಗಳ ಒಗ್ಗೂಡುವಿಕೆಯಿಂದ , ಅಪರೂಪದ 'ನವಪಂಚಮ ರಾಜ ಯೋಗ ನಿರ್ಮಾಣವಾಗಿದೆ. ಈ ಅಪರೂಪದ ರಾಜಯೋಗದ ರಚನೆಯಿಂದ ಅದೃಷ್ಟವು 4 ರಾಶಿಯವರ ಕೈ ಹಿಡಿಯಲಿದೆ
ಧನು ರಾಶಿ : 'ನವಪಂಚಮ ರಾಜಯೋಗದ ಪರಿಣಾಮ ನಿಮ್ಮ ಅದೃಷ್ಟ ಬೆಳಗುವುದು. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳ ಕನಸು ನನಸಾಗಬಹುದು. ಕೈ ಸೇರದೇ ಹೊರಗೆ ಉಳಿದಿರುವ ಹಣ ಕೈ ಸೇರುವುದು. ವೃತ್ತಿಜೀವನದಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗುವುದು. ಇಲ್ಲಿಯವರೆಗೆ ಅನುಭವಿಸಿದ ಕಷ್ಟಗಳೆಲ್ಲಾ ಕಳೆದು ಸಂತಸದ ಹೊನಲು ಕಾಣಿಸುವುದು.
ಕಟಕ ರಾಶಿ : ಈ ಅಪರೂಪದ ರಾಜ್ಯಯೋಗದ ಪರಿಣಾಮದಿಂದಾಗಿ ಉದ್ಯೋಗಿಗಳು ಪ್ರಗತಿ ಹೊಂದಬಹುದು. ಸಾಲದ ಬಲೆಯಿಂದ ಹೊರಬರುತ್ತೀರಿ. ಹಣಕಾಸಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುವುದು. ಈ ಸಮಯದಲ್ಲಿ, ಮಂಗಳನು ಸಂಪತ್ತಿನ ಸ್ಥಳದಲ್ಲಿ ಕುಳಿತಿದ್ದಾನೆ. ಈ ಕಾರಣದಿಂದಾಗಿ ನೀವು ವ್ಯಾಪಾರದಲ್ಲಿ ಲಾಭವನ್ನು ಪಡೆಯುತ್ತೀರಿ.
ಸಿಂಹ ರಾಶಿ : ಮಂಗಳನ ಪ್ರಭಾವದಿಂದ ನಿಮ್ಮ ಜಾತಕದಲ್ಲಿ ತ್ರಿಕೋನ ರಾಜಯೋಗ ರೂಪುಗೊಂಡಿದೆ. ಅದರ ಪರಿಣಾಮದಿಂದಾಗಿ, ಅದೃಷ್ಟ ನಿಮ್ಮ ಬೆನ್ನಿಗಿರುತ್ತದೆ. ಕೈ ಹಾಕಿದ ಕೆಲಸದಲ್ಲಿ ಯಶಸ್ಸು ನಿಮ್ಮದಾಗುವುದು. ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ.
ಮೇಷ ರಾಶಿ : ನಿಮ್ಮ ರಾಶಿಯ ಅಧಿಪತಿ ಮಂಗಳ. ಪ್ರಸ್ತುತ ಮಂಗಳ ಪ್ರಸ್ತುತ ಸಿಂಹರಾಶಿಯಲ್ಲಿದೆ. ಅದರ ಪರಿಣಾಮದಿಂದ, ನೀವು ದೊಡ್ಡ ಮಟ್ಟದ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ನವಪಂಚಮ ರಾಜ ಯೋಗದ ಮೂಲಕ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಯೊಂದಿಗೆ ಬಡ್ತಿ ಪಡೆಯುವ ಸಾಧ್ಯತೆ ಇದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)