ಮೂರು ಗ್ರಹಗಳು ಸೇರಿ ನವಪಂಚಮ ರಾಜಯೋಗ! ಈ ರಾಶಿಯವರ ಜೀವನದಲ್ಲಿ ಹರಿದು ಬರುವುದು ಧನರಾಶಿ !
ಸೂರ್ಯ, ಮಂಗಳ ಮತ್ತು ಗುರು ಬಹಳ ವಿಶೇಷ ಸ್ಥಾನದಲ್ಲಿದ್ದು, ನವಪಂಚಮ ರಾಜಯೋಗವನ್ನು ರೂಪಿಸುತ್ತಿದ್ದಾರೆ. ಜ್ಯೋತಿಷಿಗಳ ಪ್ರಕಾರ ಈ 3 ಗ್ರಹಗಳಿಂದ ಹಲವು ವರ್ಷಗಳ ನಂತರ ಇಂತಹ ಶಕ್ತಿಶಾಲಿ ನವಪಂಚಮ ರಾಜಯೋಗ ಸೃಷ್ಟಿಯಾಗುತ್ತಿದೆ. ಇದು ಕೆಲವು ರಾಶಿಯ ಜನರಿಗೆ ಉದ್ಯೋಗ-ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಮತ್ತು ಹಣವನ್ನು ನೀಡುತ್ತದೆ. ನವಪಂಚಮ ರಾಜಯೋಗವು ಯಾವ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ ನೋಡೋಣ.
ಮೇಷ ರಾಶಿ : ನವಪಂಚಮ ರಾಜಯೋಗವು ಮೇಷ ರಾಶಿಯವರಿಗೆ ಬಹಳ ಶುಭ ಫಲವನ್ನು ನೀಡಲಿದೆ. ವಿಶೇಷವಾಗಿ ವೃತ್ತಿಯ ವಿಷಯದಲ್ಲಿ, ಈ ರಾಶಿಯವರು ಬಲವಾದ ಪ್ರಯೋಜನಗಳನ್ನು ಪಡೆಯುತ್ತಾರೆ. ಉದ್ಯೋಗ ಅಥವಾ ವ್ಯವಹಾರ ಎರಡರಲ್ಲೂ ಪ್ರಗತಿ ಇರಲಿದೆ. ಆದಾಯವೂ ಹೆಚ್ಚಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಹಣಕಾಸಿನ ಪ್ರಯೋಜನವಾಗಲಿದೆ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.
ಮಿಥುನ ರಾಶಿ : ಮಿಥುನ ರಾಶಿಯವರು ಈ ಹಿಂದೆ ಅನುಭವಿಸುರುವ ಎಲ್ಲಾ ಕಷ್ಟದಿಂದ ಮುಕ್ತಿ ಸಿಗಲಿದೆ. ವೃತ್ತಿಜೀವನದಲ್ಲಿ ಹೊಸ ಯುಗ ಪ್ರಾರಂಭವಾಗುತ್ತದೆ. ಆದಾಯದಲ್ಲಿ ಹೆಚ್ಚಳವಾಗುವ ಮೂಲಕ ಮನಸ್ಸಿಗೆ ಸಮಾಧಾನ ಸಿಗುವುದು. ಈ ರಾಶಿಯವರ ಕೌಟುಂಬಿಕ ಜೀವನವೂ ಉತ್ತಮವಾಗಿರುತ್ತದೆ.
ಕರ್ಕಾಟಕ ರಾಶಿ: ಈ ನವಪಂಚಮ ರಾಜಯೋಗವು ಕರ್ಕಾಟಕ ರಾಶಿಯ ಜನರ ವ್ಯಕ್ತಿತ್ವದಲ್ಲಿ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ವರ್ಚಸ್ಸು ಉತ್ತುಂಗದಲ್ಲಿರಲಿದೆ. ಮನಸ್ಸಿನ ದೊಡ್ಡ ಆಸೆಗಳು ಈಡೇರುವ ಸಮಯ. ವೃತ್ತಿಯಲ್ಲಿ ವಿತ್ತೀಯ ಲಾಭ ಮತ್ತು ಪ್ರಗತಿಯನ್ನು ಪಡೆಯುವ ಬಲವಾದ ಅವಕಾಶಗಳಿವೆ.
ಕನ್ಯಾ: ಈ ನವಪಂಚಮ ರಾಜಯೋಗವು ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಮಟ್ಟದ ಸುಧಾರಣೆಯನ್ನು ತರುತ್ತದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಕ್ರಮಗಳು ನಡೆಯಬಹುದು.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)