Navpancham Rajyog 2024: ಶೀಘ್ರದಲ್ಲೇ ಕೇತು-ಗುರುವಿನ ಕೃಪೆಯಿಂದ ನವಪಂಚಮ ಯೋಗ ರಚನೆ, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ!

Thu, 29 Feb 2024-9:19 pm,

Navpancham Rajyog 2024 In Leo: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಕೇತು ಮತ್ತು ಗುರು ಸೇರಿ ನವಪಂಚಮ ರಾಜಯೋಗ ರಚಿಸಲಿದ್ದಾರೆ, ಈ ಯೋಗ ರಚನೆಯಿಂದ ಕೆಲ ರಾಶಿಗಳ ಜನರಿಗೆ ವಿಶೇಷ ಲಾಭಗಳಾಗಳಿದ್ದು, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಜೀವನದಲ್ಲಿ ಅಪಾರ ಧನಸಂಪತ್ತು ಹರಿದುಬರಲಿದೆ  Spiritual News In Kannada  

ಸಿಂಹ ರಾಶಿ: ನಿಮ್ಮ ಜಾತಕದ ದಶಮ ಭಾವದಲ್ಲಿ ಗುರು ಸಂಚರಿಸಲಿದ್ದು, ಕೇತುವಿನ ಜೊತೆಗೆ ಆತನ ನವಪಂಚಮ ಯೋಗ ರಚನೆಯಾಗುತ್ತಿದೆ. ಇದರಿಂದ ನಿಮಗೆ ವಿಶೇಷ ಲಾಭಗಳು ಸಿಗಲಿವೆ. ದೀರ್ಘ ಕಾಲದಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ಆಕಸ್ಮಿಕ ಧನಲಾಭ ಸಿಗಲಿದೆ. ಕೌಟುಂಬಿಕ ಕಲಹಗಳಿಂದ ಮುಕ್ತಿ ಸಿಗಲಿದೆ. ಹೊಸ ವಾಹನ ಆಸ್ತಿ-ಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಸಣ್ಣಪುಟ್ಟ ಯಾತ್ರೆಗಳು ಸಂಭವಿಸಲಿದ್ದು, ಯಾತ್ರೆಗಳು ನಿಮಗೆ ಲಾಭವನ್ನು ತಂದುಕೊಡಲಿವೆ.   

ಕನ್ಯಾ ರಾಶಿ: ನವಪಂಚಮ ಯೋಗ ನಿರ್ಮಾಣದಿಂದ ನಿಮಗೆ ಮಾನಸಿಕ ಹಾಗೂ ಶಾರೀರಿಕ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ. ಅರ್ಧಕ್ಕೆ ನಿಂತ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಇದರ ಜೊತೆಗೆ ಅಪಾರ ಧನಲಾಭವಾಗಲಿದೆ. ಉನ್ನತ ವ್ಯಾಸಂಗ ಪಡೆಯಲು ಬಯಸುವವರಿಗೆ ಇದು ಸಕಾಲವಾಗಿದೆ. ಬುದ್ಧಿ, ಏಕಾಗ್ರತೆ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಮಕ್ಕಳ ಕಡೆಯಿಂದ ನಿಮಗೆ ಹಲವು ಗುಡ್ ನ್ಯೂಸ್ ಸಿಗಲಿವೆ. ಲವ್ ಲೈಫ್ ಕೂಡ ಉತ್ತಮವಾಗಿರಲಿದೆ. ಷೇರುಮಾರುಕಟ್ಟೆಯಿಂದ ನಿಮಗೆ ಲಾಭ ಸಿಗಲಿದೆ.   

ಮಿಥುನ ರಾಶಿ: ನವಪಂಚಮ ಯೋಗ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಅದರಲ್ಲಿಯೂ ವಿಶೇಷವಾಗಿ ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಅದ್ಭುತ ಲಾಭ ಸಿಗಲಿದೆ, ಎಫ್ಡಿ, ಷೇರು ಮಾರುಕಟ್ಟೆಗಳಂತಹ ಹೂಡಿಕೆಗಳಿಂದ ನಿಮಗೆ ಲಾಭ ಸಿಗಲಿದೆ. ಇದಲ್ಲದೆ ಜೀವನದಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನಲಾಭ ನಿಮ್ಮದಾಗಲಿದೆ, ಇದರಿಂದ ನಿಮ್ಮ ಧನ ಸಂಪತ್ತಿನಲ್ಲಿ ಅಪಾರ ವೃದ್ಧಿಯನ್ನು ನೀವು ಕಾಣಬಹುದು. ಗುಪ್ತಧನ ಕೂಡ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಎರವಲು ಕೊಟ್ಟ ಹಣ ವಾಪಸ್ ಬರಲಿದೆ. ಪಿತ್ರಾರ್ಜಿತ ಸಂಪತ್ತು, ಲಾಟರಿ, ರಿಯಲ್ ಎಸ್ಟೇಟ್ ಗಳಿಂದ ಲಾಭ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದ್ದು, ನೌಕರಿಯಲ್ಲಿ ಲಾಭದ ಎಲ್ಲಾ ಸಾಧ್ಯತೆಗಳಿವೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link