Navratri 2023: ನವರಾತ್ರಿಯ ಶುಭ ದಿನಗಳಲ್ಲಿ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ

Sat, 14 Oct 2023-2:18 pm,

ಶರದ್ ನವರಾತ್ರಿ ಅಥವಾ ಶರಧೀಯ ನವರಾತ್ರಿಯು ಮಳೆಗಾಲದ ಅಂತ್ಯ ಮತ್ತು ಚಳಿಗಾಲದ ಆರಂಭವನ್ನು ಸೂಚಿಸುತ್ತದೆ. ಅಂದರೆ ಇದು ಋತುವಿನ ಬದಲಾವಣೆಯನ್ನು ಸೂಚಕ. ನವರಾತ್ರಿಯ ಸಮಯದಲ್ಲಿ ಮಾಡುವ ಉಪವಾಸವು ಭಕ್ತಿಯ ಸಾರವನ್ನು ಹೊಂದಿದ್ದರೂ, ಅದು ನಮ್ಮ ಆರೋಗ್ಯಕ್ಕೂ ಅತ್ಯಂತ ಪ್ರಯೋಜನಕಾರಿಯಾಗಿದೆ.

ಇನ್ನು ನಾವಿಂದು ಈ ಲೇಖನದ ಮೂಲಕ ನವರಾತ್ರಿಯ ಸಮಯದಲ್ಲಿ ಮಾಡಬಾರದದಾದ ಕೆಲವೊಂದು ಕೆಲಸಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಲಿದ್ದೇವೆ.

ಉಪವಾಸವನ್ನು ಆಚರಿಸುವವರು ಯಾವುದೇ ಐಷಾರಾಮಿ ಬದುಕನ್ನು ಅನುಸರಿಸಬಾರದು. ನವರಾತ್ರಿಯು ಉಪವಾಸ ಮತ್ತು ಪ್ರಾರ್ಥನೆಯ ಪವಿತ್ರ ಹಬ್ಬವಾಗಿರುವುದರಿಂದ ಈ ಸಂದರ್ಭದಲ್ಲಿ ನೆಲದ ಮೇಲೆ ಮಲಗಿದರೆ ಉತ್ತಮ. ಹೀಗೆ ಮಾಡಿದರೆ, ನಮ್ಮ ಮೂಳೆಗಳು ಸಹ ಬಲಗೊಳ್ಳುತ್ತದೆ, ಜೊತೆಗೆ ಬೆನ್ನುನೋವಿನ ಸಮಸ್ಯೆಗಳು ಕೂಡ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತಿದೆ.

ನಂಬಿಕೆಯ ಪ್ರಕಾರ ಹಬ್ಬಗಳ ಸಂದರ್ಭದಲ್ಲಿ ದೇವಾನುದೇವತೆಗಳು ಭಕ್ತರ ಮನೆಗೆ ಭೇಟಿ ನೀಡುತ್ತಾರೆ.ಇನ್ನು ನವರಾತ್ರಿಯ ಸಂದರ್ಭದಲ್ಲಿ ಮನೆಯಲ್ಲಿ ವಾದಗಳು, ಜಗಳಗಳು ಅಥವಾ ಹಿಂಸೆ ನಡೆಯುತ್ತಿದ್ದರೆ, ದೇವರು ಕೋಪಗೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.  

ಅನೇಕ ಜನರು ಒಂಬತ್ತು ದಿನಗಳಲ್ಲಿ ಉಪವಾಸವನ್ನು ಆಚರಿಸುವ ಮೂಲಕ ಮತ್ತು ದೀಪವನ್ನು  ಬೆಳಗಿಸುವ ಮೂಲಕ ನವರಾತ್ರಿ ಪೂಜೆಯನ್ನು ಮಾಡುತ್ತಾರೆ. ಅಖಂಡ ಜ್ಯೋತಿ ಬೆಳಗಿದರೆ ಯಾರಾದರೂ ಮನೆಯಲ್ಲಿಯೇ ಇರಬೇಕು. ಈ ಸಂದರ್ಭದಲ್ಲಿ ಮನೆಯನ್ನು ಖಾಲಿಬಿಡಬಾರದು,

ನವರಾತ್ರಿ ಪೂಜಾ ವಿಧಿಗಳನ್ನು ಆಚರಿಸುವಾಗ ಬ್ರಹ್ಮಚರ್ಯ ಪಾಲಿಸುವುದು ಅಗತ್ಯ. ಹಾಗೆ ಮಾಡುವುದರಿಂದ ಇಂದ್ರಿಯಗಳು ಮತ್ತು ಅಂಗಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ. ಜೊತೆಗೆ ಮನೋಬಲ ವೃದ್ಧಿಸುತ್ತದೆ.

ನವರಾತ್ರಿಯ ಒಂಬತ್ತು ದಿನಗಳಲ್ಲಿ ಮಾಂಸಾಹಾರಿ ಆಹಾರ ಮತ್ತು ಯಾವುದೇ ರೀತಿಯ ಶ್ರೀಮಂತ ಆಹಾರವನ್ನು ಸೇವಿಸಬೇಡಿ..

ಉಪವಾಸವನ್ನು ಆಚರಿಸುವ ಭಕ್ತರು ನವರಾತ್ರಿಯ ಸಮಯದಲ್ಲಿ ಕೂದಲು ಮತ್ತು ಉಗುರುಗಳನ್ನು ಕಟ್ ಮಾಡುವುದು,  ಶೇವಿಂಗ್ ಮಾಡುವುದು ಸರಿಯಲ್ಲ. ಈ ಪ್ರಕ್ರಿಯೆಗಳು ನವರಾತ್ರಿ ಪೂಜೆಯ ಉದ್ದೇಶದಿಂದ ವಿಮುಖವಾಗಿದೆ. ಈ ತೆಗೆದುಕೊಳ್ಳಬಹುದು.

ಭಕ್ತಾದಿಗಳು ವಿಶೇಷವಾಗಿ ಮಹಿಳೆಯರು, ನವರಾತ್ರಿಯ ಸಮಯದಲ್ಲಿ ಮೌನದ ಪ್ರತಿಜ್ಞೆಯನ್ನು ಅಥವಾ ಮೌನವ್ರತ ಆಚರಿಸುತ್ತಾರೆ. ಇದು ಮಾತೆ ದುರ್ಗೆಯ ಭಕ್ತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. ಜೊತೆಗೆ ರಾಕ್ಷಸ ಮಹಿಷಾಸುರನನ್ನು ಸೋಲಿಸುವಲ್ಲಿ ಆಕೆಯ ಶೌರ್ಯ ಮತ್ತು ಚೈತನ್ಯವನ್ನು ಗೌರವಿಸುತ್ತದೆ. ಹೀಗಾಗಿ ಮನಸ್ಸು ಮತ್ತು ಮಾತಿನ ಮೇಲೆ ನಿಯಂತ್ರಣವನ್ನು ಸಾಧಿಸಬೇಕು.

ನವರಾತ್ರಿಯ ಅಷ್ಟಮಿ ಅಥವಾ ನವಮಿಯ ಸಮಯದಲ್ಲಿ ಕನ್ಯಾ ಪೂಜನವನ್ನು (ಪುಟ್ಟ ಹುಡುಗಿಯರನ್ನು ಪೂಜಿಸುವುದು) ಸಹ ಆಚರಿಸಲಾಗುತ್ತದೆ. ಅಲ್ಲಿ ಒಂಬತ್ತು ಹುಡುಗಿಯರನ್ನು ಭಕ್ತರು ತಮ್ಮ ಮನೆಗಳಿಗೆ ಆಹ್ವಾನಿಸುತ್ತಾರೆ. ಆಹಾರ ಮತ್ತು ಉಡುಗೊರೆಗಳನ್ನು ದಾನ ನೀಡುತ್ತಾರೆ. ಜನರು ದಾನದ ನಂತರವೇ ಆಹಾರ ಸೇವಿಸಬೇಕು, ಅಥವಾ ಪೂಜೆಗಳ ಬಳಿಕವಷ್ಟೇ ಆಹಾರ ಸೇವಿಸಬೇಕು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link