Amitabh Bachchan Grand Daughter: ಅಂದಕ್ಕೆ ಮತ್ತೊಂದು ಹೆಸರೇ ‘ನಂದಾ’: ಬಚ್ಚನ್ ಮೊಮ್ಮಗಳ ಸೌಂದರ್ಯಕ್ಕೆ ಫಿದಾ ಆದ ಪಡ್ಡೆಹೈಕ್ಳು

Sun, 19 Feb 2023-10:53 pm,

ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು, ಅಂದರೆ ಅವರ ಮಗಳು ಶ್ವೇತಾ ಬಚ್ಚನ್ ನಂದಾ ಅವರ ಮಗಳು ನವ್ಯಾ ನಂದಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಇತ್ತೀಚೆಗೆ ಅವರು ಹೊಸ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಈ ಫೋಟೋದಲ್ಲಿ ನೀವು ನವ್ಯಾ ಅವರ ಮುಖವನ್ನು ನೋಡಲಾಗುವುದಿಲ್ಲ. ಆದರೆ ಅವರು ಕ್ಯಾಮರಾಗೆ ಬೆನ್ನುಹಾಕಿ ಫೋಟೋ ತೆಗೆಸಿಕೊಂಡಿದ್ದು, ಸಖತ್ ಸುಂದರವಾಗಿದೆ.

ನವ್ಯಾ ನಂದಾ ಈ ಫೋಟೋದಲ್ಲಿ ಸೈಡ್ ಪೋಸ್ ನೀಡುತ್ತಿದ್ದು, ಮುಖದ ಮೇಲೆ ಬೀಳುವ ಸೂರ್ಯನ ಬೆಳಕು ಆಕೆಯ ಅಂದವನ್ನು ಹೆಚ್ಚಿಸುತ್ತಿದೆ.

ಈ ಫೋಟೋಗಳನ್ನು ನೋಡಿದರೆ ನವ್ಯಾ ಅವರು ಅಮಿತಾಭ್ ಬಚ್ಚನ್ ಅವರ ಬಂಗಲೆಯಲ್ಲಿ ನಿಂತುಕೊಂಡಿದ್ದಾರೆ ಎಂದೆನಿಸುತ್ತದೆ. ಡಿಸೈನರ್ ಅಬುಜಾನಿ-ಸಂದೀಪ್ ಖೋಸ್ಲಾ ತಯಾರಿಸಿರುವ ಈ ಡ್ರೆಸ್ ನಲ್ಲಿ ಅಪ್ಸರೆಯಂತೆ ಕಾಣುತ್ತಿದ್ದಾರೆ.

ಕೆಲ ಸಮಯದವರೆಗೆ ನವ್ಯಾ ನಂದಾ ಅವರ ಹೆಸರು ನಟ ಸಿದ್ಧಾಂತ್ ಚತುರ್ವೇದಿಯೊಂದಿಗೆ ಕೇಳಿಬಂದಿತ್ತು. ಈ ಫೋಟೋ ಪಾರ್ಟಿಯದ್ದಾಗಿದ್ದು, ಅದರಲ್ಲಿ ಸಿದ್ದಾಂತ್ ಮತ್ತು ನವ್ಯಾ ಒಟ್ಟಿಗೆ ಬರುತ್ತಿರುವುದು ಕಂಡುಬಂದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link