ಜವಾನ್‌ ನಿರ್ದೇಶಕ ಅಟ್ಲೀ ವಿರುದ್ಧ ನಯನತಾರಾ ಕಿಡಿ..! ಶಾರುಖ್ ಏನ್ ಹೇಳಿದ್ರು ಗೊತ್ತಾ?

Sat, 23 Sep 2023-4:20 pm,

ಜವಾನ್‌ ಚಿತ್ರದಲ್ಲಿ ನಯನತಾರಾ ಅವರ ಪಾತ್ರ ಸಖತ್‌ ಪವರ್‌ಫುಲ್‌ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ದೀಪಿಕಾ ಸಹ ಈ ಚಿತ್ರದಲ್ಲಿ ನಟಿಸಿರುವುದರಿಂದ ಅವರ ಪಾತ್ರಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ ಎಂದು ನಯನತಾರಾ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿತ್ತು..  

ಈ ವಿಚಾರವಾಗಿ ನಯನತಾರಾ ಚಿತ್ರದ ನಿರ್ದೇಶಕ ಅಟ್ಲಿ ಮೇಲೆ ಕೋಪಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು ಆದರೆ ನಂತರ ಚಿತ್ರತಂಡ ಒಟ್ಟಾಗಿ ಇರುವುದನ್ನು ನೋಡಿ ಅಂಥದ್ದೇನೂ ವೈಮನಸ್ಯೆವಿಲ್ಲವೆಂದು ಹೇಳಲಾಗಿತ್ತು.  

ಆದರೆ ಇದೀಗ ಈ ವಿಚಾರವಾಗಿ ಚಿತ್ರದ ನಾಯಕ ಮತ್ತು ನಿರ್ಮಾಪಕ ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದು, ನಯನತಾರಾ ಅವರಿಗೆ ಸ್ಕ್ರೀನ್‌ ಮೇಲೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ‘ನರ್ಮದಾ ಪಾತ್ರಕ್ಕೆ ಸಿಗಬೇಕಾದ ಮನ್ನಣೆ ತೆರೆಯಲ್ಲಿ ಸಿಕ್ಕಿಲ್ಲ’ ಎಂದು ಬರೆದುಕೊಂಡಿದ್ದಾರೆ.   

ಈ ಜವಾನ್‌ ಚಿತ್ರದ ಕಲೆಕ್ಷನ್‌ ವಿಚಾರವಾಗಿ ಸಾಕಷ್ಟು ವರದಿಗಳು ಹೊರಬೀಳುತ್ತಿದ್ದವು..ಆದರೆ ಅದರಲ್ಲಿ ಯಾವುದು ನಿಜ ಯಾವುದು ಸುಳ್ಳು ಎಂಬುದನ್ನು ತಿಳಿಯುವುದು ಕಷ್ಟವಾಗಿತ್ತು. ಆದ್ದರಿಂದ ಇದೀಗ ಜವಾನ್‌  ಚಿತ್ರದ ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ಕಲೆಕ್ಷನ್ ವಿವರವನ್ನು ಹಂಚಿಕೊಂಡಿದೆ  

ಇನ್ನು ಜವಾನ್‌ ಚಿತ್ರ 15 ದಿನಕ್ಕೆ ವಿಶ್ವದಾದ್ಯಂತ ಬರೋಬ್ಬರಿ 937.61 ಕಲೆಕ್ಷನ್‌ ಮಾಡಿ ಗೆದ್ದು ಬೀಗುತ್ತಿದೆ. ಇದಲ್ಲದೇ ಶೀಘ್ರದಲ್ಲೇ ಸಾವಿರ ಕೋಟಿ ರೂಪಾಯಿಯನ್ನು ಈ ಸಿನಿಮಾ ಬಾಚಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link