Nayanthara Divorce: ವಿಚ್ಛೇದನಕ್ಕೆ ಇದೇ ಕಾರಣ.. ನಯನತಾರಾ - ವಿಘ್ನೇಶ್‌ ಶಿವನ್‌ ಸಂಸಾರದಲ್ಲಿ ಬಿರುಕು ಮೂಡಿದ್ದು ಇಲ್ಲಿಂದಲೇ !?

Wed, 06 Mar 2024-3:51 pm,

ಖ್ಯಾತ ನಟಿ ನಯನತಾರಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಇದೀಗ ನಯನತಾರಾ ಮತ್ತು ವಿಘ್ನೇಶ್‌ ಶಿವನ್‌ ಡಿವೋರ್ಸ್‌ ವದಂತಿ ಚರ್ಚೆಗೆ ಗ್ರಾಸವಾಗಿದೆ.   

ನಯನತಾರಾ ಸೋಶಿಯಲ್ ಮೀಡಿಯಾದಲ್ಲಿ ಪತಿ ವಿಘ್ನೇಶ್ ಶಿವನ್ ಅವರನ್ನು ಅನ್‌ಫಾಲೋ ಮಾಡಿದ ಕಾರಣಕ್ಕೆ ಈ ಡಿವೋರ್ಸ್‌ ವದಂತಿ ಶುರುವಾಯ್ತು.

ಪತಿ ವಿಘ್ನೇಶ್ ಶಿವನ್ ಅವರಿಂದ ನಯನತಾರಾ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಹಬ್ಬಿತು. ನಯನತಾರಾ ಮತ್ತು ವಿಘ್ನೇಶ್ ಶಿವನ್‌ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾದ್ರೂ ಏನು ಎಂದು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. 

ನಯನತಾರಾ ಇತ್ತೀಚೆಗೆ ವಿಘ್ನೇಶ್‌ ಶಿವನ್‌ ನಿರ್ದೇಶನದ ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗಿತ್ತು. ಸಂಭಾವನೆ ವಿಚಾರವಾಗಿ ಪತಿಯ ಸಿನಿಮಾದಿಂದಲೇ ನಯನತಾರಾ ಹಿಂದೆ ಸರಿದಿದ್ದರು. 

ಇದಾದ ಕೆಲವೇ ದಿನಕ್ಕೆ ಇವರಿಬ್ಬರ ವಿಚ್ಛೇದನ ಸುದ್ದಿ ಶುರುವಾಯ್ತು. ಇದೇ ವಿಚಾರ ನಯನತಾರಾ ಹಾಗೂ ವಿಘ್ನೇಶ್‌ ಶಿವನ್‌ ನಡುವೆ ಮುನಿಸಿಗೆ ಕಾರಣವಾಯ್ತಾ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಆದರೆ ನಯನತಾರಾ ಮತ್ತು ವಿಘ್ನೇಶ್‌ ಶಿವನ್‌ ವಿಚ್ಛೇದನ ಪಡೆಯುತ್ತಿಲ್ಲ. ಇಬ್ಬರೂ ಒಟ್ಟಿಗೆ ಸುಖ ಸಂಸಾರ ನಡೆಸುತ್ತಿರುವುದಕ್ಕೆ ವಿಘ್ನೇಶ್‌ ಶಿವನ್‌ ಅವರ ಇತ್ತೀಚಿನ ಪೋಸ್ಟ್‌ ಸಾಕ್ಷಿಯಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link