ಪ್ರಭುದೇವ ಜೊತೆ ಮದುವೆಯಾಗಲು ನಯನತಾರಾ ʻಈ ಧರ್ಮʼ ತೊರೆದು ಹಿಂದೂ ಮತಾಂತರಗೊಂಡರೇ!!
ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಇಂದು ಏಪ್ರಿಲ್ 3 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರಭುದೇವ ಅನೇಕ ಸ್ಟಾರ್ ನಟ - ನಟಿಯರಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
ಪ್ರಭುದೇವ ಹುಟ್ಟು ಹಬ್ಬದ ದಿನ ಒಂದು ವಿಚಾರ ಎಲ್ಲೆಡೆ ಸುದ್ದಿಯಾಗುತ್ತಿದೆ. ನಯನತಾರಾ ಮತ್ತು ಪ್ರಭುದೇವ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.
ತಮಿಳಿನ 'ವಿಲ್ಲು' ಸಿನಿಮಾದಲ್ಲಿ ನಯನತಾರಾ ಅವರಿಗೆ ಪ್ರಭುದೇವ ನೃತ್ಯ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿತು.
2008 ರಲ್ಲಿ ನಯನತಾರಾ ಮತ್ತು ಪ್ರಭುದೇವ ಡೇಟಿಂಗ್ ಮಾಡುತ್ತಿದ್ದರು.
ಎರಡು ವರ್ಷಗಳ ನಂತರ 2010 ರಲ್ಲಿ ಪ್ರಭುದೇವ ಮತ್ತು ನಯನತಾರಾ ಲಿವ್ ಇನ್‌ನಲ್ಲಿರಲು ಆರಂಭಿಸಿದರು
ಪ್ರಭುದೇವ ಅವರ ಪತ್ನಿ ರಮಲತಾ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಪ್ರಭುದೇವ ಅವರನ್ನು ಮದುವೆಯಾಗಲೆಂದೇ ಕ್ರಿಶ್ಚಿಯನ್ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ವದಂತಿ ಕೂಡ ಹಬ್ಬಿತ್ತು.
ನಯನತಾರಾ ಮೂಲತಃ ಬೆಂಗಳೂರಿನ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದವರು. ಅವರ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್ ಆಗಿತ್ತು.
ಆದರೆ ಬಳಿಕ ನಯನತಾರಾ ಮತ್ತು ಪ್ರಭುದೇವ ಸಂಬಂಧ ಮುರಿದುಬಿದ್ದಿತು. ಇಬ್ಬರೂ ದೂರವಾದರು.