“100 ಕೋಟಿ ಕೊಟ್ಟರೂ ಆ ನಟನ ಜೊತೆ ಮಾತ್ರ ನಟಿಸಲ್ಲ” ಎಂದ ನಯನತಾರಾ! ಅಷ್ಟಕ್ಕೂ ಆ ಹೀರೋ ಯಾರು?
ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ನಟಿ ನಯನತಾರಾ ಸಿನಿಮಾದ ಹೊರತಾಗಿ ಕೆಲವೊಂದು ಬ್ಯುಸಿನೆಸ್ ಮೂಲಕವೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದ ಬಿಡುವಿಲ್ಲದ ಸಮಯದ ನಡುವೆಯೂ ವ್ಯಾಪಾರದ ಮೇಲೆ ಗಮನ ಕೊಡುವ ನಯನತಾರಾಗೆ, ಅವರ ಪತಿ ವಿಘ್ನೇಶ್ ಶಿವನ್ ಕೂಡ ಬೆಂಬಲ ನೀಡುತ್ತಾರೆ. ಇನ್ನು ಸಿನಿಮಾ ಮತ್ತು ವ್ಯಾಪಾರದಿಂದ ನಯನತಾರಾ ಕೋಟಿಗಟ್ಟಲೆ ಆದಾಯ ಹೊಂದಿದ್ದಾರೆ.
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಕೂಡ ಒಬ್ಬರು. ಆದರೆ ದುಪ್ಪಟ್ಟು ಸಂಭಾವನೆ ಕೊಡುತ್ತೇವೆ ಎಂದರೂ ಕೆಲವೊಂದು ಸಿನಿಮಾಗಳನ್ನು ನಟಿ ನಿರಾಕರಿಸಿದ ಉದಾಹರಣೆ ಇದೆ.
ಇದಕ್ಕೆ ಉದಾಹರಣೆ ಎಂಬಂತೆ, ತಮಿಳುನಾಡಿನ ಬ್ಯುಸಿನೆಸ್ ಲೆಜೆಂಡ್ ಸರವಣನ್ ಅವರ ಸಿನಿಮಾವನ್ನು ನಯನತಾರಾ ತಿರಸ್ಕರಿಸಿದ್ದಾರೆ. 2022 ರಲ್ಲಿ ಬಿಡುಗಡೆಯಾದ ಚಿತ್ರ ದಿ ಲೆಜೆಂಡ್ ಇದರಲ್ಲಿ ಅವರು ನಾಯಕನಾಗಿ ನಟಿಸಿದ್ದಾರೆ.
ಈ ಚಿತ್ರವನ್ನು ಸರವಣನ್ ಅವರೇ ನಿರ್ಮಿಸಿದ್ದು, ಚಿತ್ರದ ನಾಯಕಿಯಾಗಿ ನಟಿ ಊರ್ವಶಿ ರೌಟೆಲಾ ನಟಿಸಿದ್ದಾರೆ. ಆದರೆ ಲೆಜೆಂಡ್ ಸರವಣನ್ ಅವರು ನಯನತಾರಾ ಅವರನ್ನು ನಾಯಕಿಯನ್ನಾಗಿ ಮಾಡಲು ಪ್ರಯತ್ನಿಸಿದ್ದಾರೆ ಎಂಬ ಸುದ್ದಿ ಈಗ ಗಮನ ಸೆಳೆಯುತ್ತಿದೆ.
ಈ ಬಗ್ಗೆ ತಮಿಳು ಮಾಧ್ಯಮವೊಂದರಲ್ಲಿ ಸಿನಿಮಾ ಪತ್ರಕರ್ತ ಚೆಯ್ಯರು ಬಾಲು ಮಾತನಾಡಿದ್ದಾರೆ. ಲೆಜೆಂಡ್ ಸರವಣನ್ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಆ್ಯಂಕರ್ ಪ್ರಸ್ತಾಪಿಸಿದಾಗ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
“ನಯನತಾರಾ ಫ್ಲಾಟ್ ಮುಂದೆ ಯಾವಾಗಲೂ ರೋಲ್ಸ್ ರಾಯ್ಸ್ ಕಾರೊಂದು ನಿಲ್ಲುತ್ತಿತ್ತು. ಆಗ ನಾನು, ಆ ಕಾರು ಯಾರದ್ದು ಎಂದು ಆಶ್ಚರ್ಯಪಟ್ಟಿದ್ದೆ. ನಂತರ ಅದೇ ಕಾರು ಮದುವೆಯೊಂದರಲ್ಲಿ ಕಾಣಿಸಿಕೊಂಡಿತು. ಆಗ ತಿಳಿಯಿತು ಅದು ಲೆಜೆಂಡ್ ಸರವಣನ ಕಾರು ಎಂದು” ಅಂತ ಹೇಳಿದ್ದಾರೆ.
“ಅಪಾರ್ಟ್ಮೆಂಟ್ ಪ್ರದೇಶವು ವಿವಿಐಪಿಗಳಿಗೆ. ಅಷ್ಟೊಂದು ಭದ್ರತಾ ವ್ಯವಸ್ಥೆ ಇದೆ. ಇನ್ನು ಲೆಜೆಂಡ್ ಸಿನಿಮಾದಲ್ಲಿ ನಯನತಾರಾ ನಟಿಸಲು ದುಪ್ಪಟ್ಟು ಸಂಭಾವನೆ ನೀಡುವುದಾಗಿ ಹೇಳಿದ್ದರಂತೆ. ಆದರೆ 10 ಕೋಟಿ ಬದಲು 100 ಕೋಟಿ ಕೊಟ್ಟರೂ ನಾನು ನಟಿಸುವುದಿಲ್ಲ ಎಂದು ನಯನತಾರಾ ಖಡಕ್ ಆಗಿ ಹೇಳಿದ್ದರು” ಎಂದಿದ್ದಾರೆ.
“ಆ ಸಿಟ್ಟಿನಲ್ಲೇ ಬಾಲಿವುಡ್ ನಟಿಯನ್ನು ಕರೆತಂದಿದ್ದರು. ಲೆಜೆಂಡ್ ಸರವಣನ್ ಕೂಡ ಒಂದು ಫ್ಲ್ಯಾಟ್ ಹೊಂದಿದ್ದು, ಅಲ್ಲಿಯೇ ನಯನತಾರಾ ಫ್ಲಾಟ್ ಹೊಂದಿದ್ದಾರೆ. ಆಗಾಗ ನಟಿಯನ್ನು ಭೇಟಿ ಮಾಡಿ ಚಿತ್ರದ ಬಗ್ಗೆ ಮಾತನಾಡುವುದು ಕಷ್ಟ ಎಂಬ ಕಾರಣಕ್ಕೆ ಲೆಜೆಂಡ್ ಫ್ಲಾಟ್ ಖರೀದಿಸಿರಬಹುದು” ಎಂದಿದ್ದಾರೆ.
“ನಯನತಾರಾ ಸಿನಿಮಾ ರಿಜೆಕ್ಟ್ ಮಾಡಿದ ನಂತರ ಅವರಿಗೆ ಸರಿಸಾಟಿಯಾಗುವ ನಾಯಕಿಯನ್ನು ಹುಡುಕಿದರು. ನಯನತಾರಾ ಅವರಂತಹ ನಟಿಗಾಗಿ ಆಡಿಷನ್ ನಡೆಯಿತು. ಆದರೆ ಊರ್ವಶಿ ರೌಟೆಲಾ ನಾಯಕಿಯಾಗಿ ನಟಿಸಿದರು. ಬಾಲಿವುಡ್’ನಲ್ಲಿ ಕಡಿಮೆ ಸಂಭಾವನೆ ಪಡೆಯುವ ನಟಿ ಆಕೆ. ಆದರೆ ಆಕೆಗೆ ದೊಡ್ಡ ಮೊತ್ತವನ್ನು ನೀಡಲಾಗಿದೆ’’ ಎಂದು ಹೇಳಿದರು.