Nayanthara Wedding: ನಯನತಾರಾ ವಿಘ್ನೇಶ್ ಶಿವನ್ ವೆಡ್ಡಿಂಗ್

Thu, 09 Jun 2022-1:00 pm,

ಸ್ಟಾರ್ ಜೋಡಿ ವಿಘ್ನೇಶ್ ಶಿವನ್ ಮತ್ತು ನಯನತಾರಾ ಇಂದು ಜೂನ್ 9 ರಂದು ಮಹಾಬಲಿಪುರಂನ ಜನಪ್ರಿಯ ಖಾಸಗಿ ಹೋಟೆಲ್‌ನಲ್ಲಿ ಪ್ರಮುಖ  ಸೆಲೆಬ್ರಿಟಿಗಳು ಮತ್ತು ನಿಕಟ ಕುಟುಂಬ ಸದಸ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಭಾರೀ ಭದ್ರತೆ ಹಾಗೂ ನಿರ್ಬಂಧಗಳೊಂದಿಗೆ ನಡೆಯುತ್ತಿರುವ ಈ ಮದುವೆಗೆ ಹಲವು ಪ್ರಮುಖ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಅವರ ಮದುವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.

ನಯನತಾರಾ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಂಪ್ರದಾಯಿಕ ತಮಿಳು ಜೋಡಿಯಂತೆ ಕಾಣುವ ಅನಿಮೇಟೆಡ್ ಚಿತ್ರ ಇದಾಗಿದೆ.

ಮೊದಲಿಗೆ ತಿರುಪತಿ ದೇವಸ್ಥಾನದಲ್ಲಿ ಮದುವೆ ನಡೆಸಲು ನಿರ್ಧರಿಸಲಾಗಿತ್ತು.  ಆದರೆ ಕೊನೆಯ ಕ್ಷಣದಲ್ಲಿ ನಿರ್ಧಾರವನ್ನು ಬದಲಿಸಲಾಯಿತು ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಅವರು ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ವಿವಾಹವನ್ನು ಚಿತ್ರೀಕರಿಸಲಿದ್ದಾರೆ ಮತ್ತು ಜನಪ್ರಿಯ ಒಟಿಟಿ ಸೈಟ್ ಗೆ ಇದನ್ನು ಪ್ರಸಾರ ಮಾಡುವ ಹಕ್ಕನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ನಯನತಾರಾ ಮತ್ತು ವಿಘ್ನೇಶ್ ಮದುವೆಗೆ ಬಾಲಿವುಡ್ ತಾರೆಯರನ್ನು ಸಹ ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಅತಿಥಿಗಳ ಪಟ್ಟಿಯಲ್ಲಿ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸೇರಿದ್ದಾರೆ.

ಏಳು ವರ್ಷಗಳ ಸುದೀರ್ಘ ಪ್ರೇಮದ ನಂತರ ಈ ಜೋಡಿ ವಿವಾಹವಾದರು. ಇವರಿಬ್ಬರ ಮೊದಲ ಚಿತ್ರ ‘ನಾನಮ್ ರೌಡಿ ಥಾನ್’. ನಯನತಾರಾ ಚಿತ್ರದ ನಿರ್ಮಾಪಕಿಯೂ ಆಗಿದ್ದರು. 

ತೆರೆಯ ಮೇಲೆ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ನಯನತಾರಾ ಅವರ ಜೀವನ ಪಯಣವನ್ನು ನಿರ್ದೇಶಕರು ನಿಜವಾಗಿಯೂ ಸಿನಿಮಾ ಮಾಡಲು ಬಯಸಿದ್ದಾರೆ ಎನ್ನಲಾಗಿದೆ.  

ಸಾಮಾನ್ಯ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದ ನಾಯಕ ನಟಿಯಾಗಿ ಮೆರೆದಿರುವ ನಯನತಾರಾ ಅವರು ತಮ್ಮ ಜೀವನದಲ್ಲಿ ಸಾಗಿದ ಹಲವು ಸವಾಲಿನ ಮತ್ತು ಸಂಕೀರ್ಣ ಹಾದಿಗಳನ್ನು ದಾಖಲಿಸಲು ಹೊರಟಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link