BBK 10 : ವೋಟಿಂಗ್ ನಲ್ಲಿ ನೆಕ್ ಟು ನೆಕ್ ಫೈಟ್ ಕೊಡುತ್ತಿರುವ ಸ್ಪರ್ಧಿಗಳಿವರು!ಇವರಿಗೇ ಬಿಗ್ ಬಾಸ್ ಸೀಸನ್ 10 ರ ಕಿರೀಟ

Mon, 22 Jan 2024-12:04 pm,

ಬಹಳ ಕುತೂಹಲ ಕೆರಳಿಸಿದ್ದ ಬಿಗ್ ಬಾಸ್ 10 ಸೀಸನ್ ಮುಕ್ತಾಯದ ಹಂತ ತಲುಪಿದೆ. ಇನ್ನು ಕೇವಲ ಒಂದು ವಾರದಲ್ಲಿ ಬಿಗ್ ಬಾಸ್ ಸೀಸನ್ 10 ರ ಕಿರೀಟ ಯಾರಿಗೆ ಎನ್ನುವ ಕುತೂಹಲಕ್ಕೂ ತೆರೆ ಬೀಳಲಿದೆ.

ಸಾಮಾನ್ಯವಾಗಿ ಫಿನಾಲೆಗೆ ಐದು ಸ್ಪರ್ಧಿಗಳು ಕಾಲಿಡುತ್ತಾರೆ. ಆದರೆ, ಈ ಬಾರಿ ಫಿನಾಲೆ ವಾರಕ್ಕೆ ಆರು ಮಂದಿ ತಲುಪಿದ್ದಾರೆ. ಇವರಲ್ಲಿ ಒಬ್ಬರು ವಾರದ ಮಧ್ಯೆಯೇ ಮತ್ತೆ ಮನೆಯಿಂದ ಹೊರ ಬರುತ್ತಾರೆ. ಅಂದರೆ ಫಿನಾಲೆ ವೇಳೆಗೆ ಟಾಪ್ 5 ಸ್ಪರ್ಧಿಗಳು ಉಳಿದುಕೊಳ್ಳುತ್ತಾರೆ. 

ಈ ವಾರದ ಕೊನೆಯಲ್ಲಿ ನಮೃತಾ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.ಇದಾದ ನಂತರ ಮನೆಯಲ್ಲಿ ಈಗ ಸಂಗೀತಾ, ವಿನಯ್, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಪ್ರತಾಪ್ ಮತ್ತು ಕಾರ್ತಿಕ್ ಉಳಿದುಕೊಂಡಿದ್ದಾರೆ. 

ಈಗ ಮನೆಯಲ್ಲಿ ಉಳಿದುಕೊಂಡಿರುವ ಪೈಕಿ ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್ ಅತಿ ಹೆಚ್ಚು ಮತಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಕಾರ್ತಿಕ್ ಮೊದಲಿನಿಂದಲೂ ಸೋಶಿಯಲ್ ಮಿಡಿಯಾ ಟ್ರೆಂಡ್ ಆಗಿದ್ದಾರೆ. ಸಂಗೀತಾ, ಪ್ರತಾಪ್ ಕೂಡಾ ಅತಿ ಹೆಚ್ಚು ಫ್ಯಾನ್ ಫಾಲೋವರ್ ಹೊಂದಿದ್ದಾರೆ. 

ಈಶಾನಿ,  ಪ್ರತಾಪ್ ಬಗ್ಗೆ ನೀಡಿದ ಹೇಳಿಕೆ ಬಳಿಕ ಪ್ರತಾಪ್ ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.ಈ ಬೆಂಬಲವನ್ನು ಗಮನಿಸುತ್ತಿದ್ದರೆ ಪ್ರತಾವ್ ಗೆ ಸಿಗುವ ಮತಗಳ ಅಂದಾಜು ಮಾಡಬಹುದು. 

ಹಾಗಾಗಿ ಈ ಬಾರಿ ಮತಗಳ ಆಧಾರದಲ್ಲಿ ಫೈಟ್ ನೀಡುತ್ತಿರುವ ಸ್ಪರ್ಧಿಗಳು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್ ಎಂದು ಹೇಳಲಾಗುತ್ತಿದೆ.  ಅಂದರೆ ಈ ಮೂವರಲ್ಲಿ ಒಬ್ಬರು ಈ ಸೀಸನ್ ನ ಟ್ರೋಫಿ ಎತ್ತುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link