ನೀಚಭಂಗ ರಾಜಯೋಗದಿಂದ ಈ ಮೂರು ರಾಶಿಯವರಿಗೆ ಒಲಿದು ಬರುವುದು ದೊಡ್ಡ ಮಟ್ಟದ ಸಂಪತ್ತು

Wed, 29 Mar 2023-8:53 am,

ನೀಚ ಸ್ಥಿತಿಯಲ್ಲಿ ಬುಧ ಗ್ರಹ ಅಸ್ತವಾಗಿರುವ ಕಾರಣ ಕೆಲವು ರಾಶಿಯವರ ಜಾತಕದಲ್ಲಿ ನೀಚ ಭಂಗ ರಾಜಯೋಗವು ರೂಪುಗೊಳ್ಳುತ್ತದೆ. ಅಪರೂಪದ ರಾಜಯೋಗವು 50 ವರ್ಷಗಳ ನಂತರ ಈ ರಾಶಿಗಳಲ್ಲಿ ರೂಪುಗೊಂಡಿದೆ. ಇದು ಈ ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. ಈ ನೀಚಭಂಗ ರಾಜಯೋಗದ ಪರಿಣಾಮ ಈ ರಾಶಿಯವರಿಗೆ ದೊಡ್ಡ ಮಟ್ಟದ ಸಂಪತ್ತು ಒಲಿದು ಬರಲಿದೆ. ಈ ರಾಜಯೋಗವು ಯಾವ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ  ನೋಡೋಣ.   

ಮಿಥುನ ರಾಶಿ : ಈ ನೀಚ ಭಂಗ ರಾಜಯೋಗವು ಮಿಥುನ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಅದರಲ್ಲೂ ಈ ಬಾರಿ ಉದ್ಯಮಿಗಳಿಗೆ ಭರ್ಜರಿ ಲಾಭವಗಾಲಿದೆ. ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಾಣಲಿದೆ. ಮತ್ತೊಂದೆಡೆ, ಉದ್ಯೋಗದಲ್ಲಿರುವವರ ಕೆಲಸಕ್ಕೂ ಮನ್ನಣೆ ಸಿಗುವುದು. 

ಕನ್ಯಾ ರಾಶಿ : ಬುಧ ಗ್ರಹದ ನೀಚ ರಾಜಯೋಗವು ಕನ್ಯಾ ರಾಶಿಯವರ ಉದ್ಯೋಗದಲ್ಲಿ ಪ್ರಗತಿಯನ್ನು ನೀಡುತ್ತದೆ. ಉದ್ಯೋಗದಲ್ಲಾಗಲಿ, ವ್ಯವಹಾರದಲ್ಲಾಗಲಿ ಇಬ್ಬರಿಗೂ ಲಾಭದ ಸಮಯವಿದು. ನಿಮ್ಮ ಯಿಗದ ಫಲವಾಗಿ ನಿಮ್ಮ ಜೀವನ ಸಂಗಾತಿಯೂ ಸಾಧನೆ ಮಾಡಬಹುದು. ಆಸ್ತಿ ಖರೀದಿಸುವ ಯೋಗವಿದೆ. ನಿಮ್ಮ ಕೆಲಸಗಳಲ್ಲಿ ನೀವು ಅದೃಷ್ಟವನ್ನು ಪಡೆಯುತ್ತೀರಿ.   

ಧನು ರಾಶಿ: ಬುಧಗ್ರಹ ಅಸ್ತವಾಗುವುದರೊಂದಿಗೆ ರೂಪುಗೊಂಡ ನೀಚಭಂಗ ರಾಜಯೋಗವು ಧನು ರಾಶಿಯವರ ವೃತ್ತಿ ಮತ್ತು ವೈವಾಹಿಕ ಜೀವನದಲ್ಲಿ ಉತ್ತಮ ಲಾಭವನ್ನು ನೀಡುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಹಣಕಾಸಿನ  ಪ್ರಯೋಜನಕಾರಿಯಾಗಲಿದೆ. ಆದಾಯ ಹೆಚ್ಚಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link