Neechbhang Yoga 2024: ನೀಚಭಂಗ ರಾಜಯೋಗದಿಂದ ಈ 3 ರಾಶಿಯವರಿಗೆ ಅಪಾರ ಹಣ & ಖ್ಯಾತಿ ಸಿಗಲಿದೆ!
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಂದು ಜಾತಕದಲ್ಲಿ ಕ್ಷೀಣಗೊಂಡ ಗ್ರಹವು ತನ್ನ ಕ್ಷೀಣ ಸ್ಥಿತಿಯನ್ನು ಕೊನೆಗೊಳಿಸಿ ಬಲಿಷ್ಠ ಗ್ರಹವಾಗುವ ಸ್ಥಾನದಲ್ಲಿದ್ದರೆ, ಅದು ನೀಚಭಂಗ ರಾಜಯೋಗದಂತಹ ಪ್ರಬಲ ರಾಜಯೋಗವನ್ನು ರೂಪಿಸುತ್ತದೆ. ನೀಚಭಂಗ ರಾಜಯೋಗವನ್ನು ಅತ್ಯಂತ ಶಕ್ತಿಶಾಲಿ & ಶಕ್ತಿಯುತ ರಾಜಯೋಗವೆಂದು ಪರಿಗಣಿಸಲಾಗಿದೆ. ಈ ಯೋಗವು ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಕೈಗೆತ್ತಿಕೊಂಡ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಶಕ್ತಿ ನೀಡುತ್ತದೆ. ಯಾವುದೇ ಸವಾಲಿನ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ನೀಡುತ್ತದೆ. ಇದು ನಿಮ್ಮ ಯಶಸ್ಸುಗಳು ಸುಲಭವಾಗುತ್ತವೆ.
ಧನು ರಾಶಿಯ 10ನೇ ಮನೆಯಲ್ಲಿ ಶುಕ್ರನು ನೀಚಭಂಗ ರಾಜಯೋಗವನ್ನು ರೂಪಿಸಲಿದ್ದಾನೆ. ಹೀಗಾಗಿ ಈ ರಾಶಿಗಳ ಎಲ್ಲಾ ಬಾಕಿ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಕೆಲಸ ಮಾಡುವವರಿಗೆ ಈ ಸಮಯ ಅದ್ಭುತವಾಗಿರುತ್ತದೆ. ಉದ್ಯಮಿಗಳು ಹೊಸ ಒಪ್ಪಂದ ಮಾಡಿಕೊಳ್ಳಲಿದ್ದು, ಅದನ್ನು ವಿಸ್ತರಿಸಲು ಅವಕಾಶ ಪಡೆಯುವರು. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳ ಸಾಧ್ಯತೆ ಇದೆ. ಆರ್ಥಿಕವಾಗಿ ಇದು ನಿಮಗೆ ತುಂಬಾ ಅದ್ಭುತ ಸಮಯವಾಗಿರುತ್ತದೆ.
ಮಕರ ರಾಶಿಯ 9ನೇ ಮನೆಯಲ್ಲಿ ಶುಕ್ರನು ನೀಚಭಂಗ ರಾಜಯೋಗವನ್ನು ರೂಪಿಸಿದ್ದಾನೆ. ಹೀಗಾಗಿ ಈ ರಾಶಿಯ ಸ್ಥಳೀಯರಿಗೆ ಅದೃಷ್ಟದ ಬೆಂಬಲ ಇರುತ್ತದೆ. ಪ್ರತಿಯೊಂದು ಕೆಲಸದಲ್ಲೂ ನಿಮಗೆ ಯಶಸ್ಸು ಸಿಗಲಿದೆ. ಆದಾಯದಲ್ಲಿ ಅನಿರೀಕ್ಷಿತ ಸುಧಾರಣೆ ಕಾಣಬಹುದು. ನಿಮ್ಮ ಹಣಕಾಸಿನ ಸ್ಥಿತಿಯು ಸಾಮಾನ್ಯಕ್ಕಿಂತ ಬಲವಾಗಿರುತ್ತದೆ. ನೀವು ಸಾಕಷ್ಟು ಹಣ ಗಳಿಸುವ ಅವಕಾಶ ಪಡೆಯುತ್ತೀರಿ. ಬಾಕಿ ಇರುವ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣವಾಗುತ್ತವೆ. ನೀವು ಬಹಳಷ್ಟು ಕೆಲಸಕ್ಕೆ ಸಂಬಂಧಿಸಿದ ಪ್ರಯಾಣ ಕೈಗೊಳ್ಳಬೇಕಾಗುತ್ತದೆ. ಈ ಪ್ರವಾಸವು ನಿಮಗೆ ತುಂಬಾ ಪ್ರಯೋಜನಕಾರಿಯಾಗಲಿದೆ.
ಕನ್ಯಾ ರಾಶಿಯ ಮೊದಲ ಮನೆಯಲ್ಲಿ ಶುಕ್ರನಿಂದ ನೀಚಭಂಗ ರಾಜಯೋಗ ರೂಪುಗೊಳ್ಳುತ್ತದೆ. ಹೀಗಾಗಿ ಈ ರಾಶಿಯವರು ಅದ್ಭುತ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ವ್ಯಕ್ತಿತ್ವದಲ್ಲಿ ಉತ್ತಮ ಸುಧಾರಣೆ ಕಂಡುಬರುವುದು. ನಿಮ್ಮ ವೈವಾಹಿಕ ಜೀವನವು ತುಂಬಾ ಮಧುರವಾಗಿರುತ್ತದೆ. ಕುಟುಂಬಸ್ಥರಲ್ಲಿ ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ ಸಿಗಲಿದೆ. ಬಹುಕಾರ್ಯಕವನ್ನು ಪರಿಣಾಮಕಾರಿಯಾಗಿ ಮಾಡುವ ಸಾಮರ್ಥ್ಯ ಲಭ್ಯವಾಗಲಿದೆ. ಅವಿವಾಹಿತರಿಗೆ ಉತ್ತಮ ಸಂಗಾತಿ ಸಿಗುವ ಸಾಧ್ಯತೆಯಿದೆ.