ದಿನಪೂರ್ತಿ ಆಕ್ಟಿವ್ ಆಗಿರಬೇಕಾ? ನಟಿ ಅದಿತಿ ಪ್ರಭುದೇವ ಅನುಸರಿಸ್ತಾರಂತೆ ಈ ಸಲಹೆಗಳನ್ನು, ನೀವು ಪಾಲಿಸಿ..!
ದಿನಪೂರ್ತಿ ಚುರುಕಾಗಿರಬೇಕಾ ಹಾಗಿದ್ರೆ ನಟಿ ಅದಿತಿ ಪ್ರಭುದೇವ ಕೆಲವು ಸಲಹೆಗಳನ್ನು ಅನುಸರಿಸುತ್ತಾರಂತೆ, ಈ ಸಲಹೆಗಳನ್ನು ನೀವು ಅನುಸರಿಸಿದರೆ ದಿನ ಪೂರ್ತಿ ಆಕ್ಟಿವ್ ಆಗಿರಬಹುದು.
ಯಾವಾಗಲು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ನಟಿ, ಗರ್ಭಿಣಿಯಾಗಿದ್ದರೂ ಆಕ್ಟಿವ್ ಆಗಿಯೇ ಇದ್ದರು, ಹೆಣ್ಣು ಮಗುವಿಗೆ ಜನ್ಮ ಕೊಟ್ಟ ನಟಿ, ಇದೀಗ ರಿಯಾಲಿಟಿ ಷೋನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚಿಗಷ್ಟೇ ತಮ್ಮ ಚುರುಕತನದ ಕುರಿತು ಟಿಪ್ಸ್ ಕೆಲವೊಂದನ್ನು ಹಂಚಿಕೊಂಡಿದ್ದಾರೆ, ತಾವು ದಿನನಿತ್ಯ ಯಾವಾಗಲೂ ಅಷ್ಟೊಂದು ಆಕ್ಟಿವ್ ಆಗಿರಲು ಕಾರಣ ಯಾಕೆ ಎನ್ನುವುದರ ಕುರಿತು ಹಂಚಿಕೊಂಡಿದ್ದಾರೆ. ಅದಕ್ಕೆಲ್ಲ ಬೇವು, ನಿಂಬೆ, ಜೇನುತುಪ್ಪದ ಗುಟ್ಟು ಎಂದು ಬಹಿರಂಗಪಡಿಸಿದ್ದಾರೆ.
ನೀರನ್ನು ಬೆಚ್ಚಗೆ ಮಾಡಿಕೊಂಡು ಅದಕ್ಕೆ ನಿಂಬೆ ರಸ, ಜೇನುತುಪ್ಪ ಅಥವಾ ಅರಿಶಿಣ ಹಾಕಿಕೊಂಡು ಕುಡಿಯುವುದು ಒಂದು ಸಿಂಪಲ್ ಟಿಪ್ಸ್, ಅದರ ಜೊತೆಗೆ ಇದಕ್ಕೂ ಮುನ್ನ ಖಾಲಿ ಹೊಟ್ಟೆಯಲ್ಲಿ ಕರಿಬೇವು ಎಲೆ ತಿಂದರೆ ತುಂಬಾ ಒಳ್ಳೆಯದು
ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ 5-10 ಕರಿಬೇವನ್ನು ತಿಂದರೆ ಕೂದಲಿಗೆ ಪೋಷಣೆ ಸಿಗುತ್ತದೆ ಮತ್ತು ಇದಾದ ನಂತರ ನಿಂಬೆ, ಜೇನುತಪ್ಪದ ನೀರು ಸೇವಿಸಿದರೆ ತುಂಬಾ ಒಳ್ಳೆಯದು, ದೇಹದ ಫ್ಯಾಟ್ ಕರಗಿಸಲು ಅರಿಶಿಣ ಮತ್ತು ನಿಂಬೆ ತುಂಬಾ ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಗೆ ನಿಂಬೆ ಹಣ್ಣು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.