ಹಬ್ಬದ ಸಮಯದಲ್ಲಿ ಊರಿಗೆ ತೆರಳಬೇಕೇ? ಆನ್‌ಲೈನ್‌ನಲ್ಲಿ ಈ ರೀತಿ ರೈಲು ಟಿಕೆಟ್‌ಗಳನ್ನು ತ್ವರಿತವಾಗಿ ಬುಕ್ ಮಾಡಿ
ಹಬ್ಬದ ಸಮಯದಲ್ಲಿ ಸಾಲು ಸಾಲು ರಜೆಗಳು ದೊರೆಯುವ ಕಾರಣ ಪ್ರತಿಯೊಬ್ಬರೂ ಸಹ ತಮ್ಮ ಊರುಗಳಿಗೆ ತೆರಳಲು ಯೋಜನೆ ರೂಪಿಸುತ್ತಾರೆ. ದೂರದ ಊರುಗಳಿಗೆ ಆರಾಮದಾಯಕ ಪ್ರಯಾಣಕ್ಕೆ ರೈಲು ಪ್ರಯಾಣ ಅತ್ಯುತ್ತಮ ಆಯ್ಕೆ. ಕೇವಲ ಆರಾದಾಯಕ ಪ್ರಯಾಣಕ್ಕಷ್ಟೇ ಅಲ್ಲ, ಆರ್ಥಿಕ ದೃಷ್ಟಿಯಿಂದಲೂ ಇದು ಪ್ರಯೋಜನಕಾರಿ ಆಗಿದೆ.
ರೈಲು ಪ್ರಯಾಣ ಆರಾಮದಾಯಕವಾದರೂ ಹಬ್ಬಗಳ ಸೀಸನ್ ನಲ್ಲಿ ಸಾಮಾನ್ಯಕ್ಕಿಂತ ಅತಿ ಹೆಚ್ಚು ಜನರು ಪ್ರಯಾಣಿಸುವುದರಿಂದ ರೈಲ್ವೆ ಟಿಕೆಟ್ ಕೌಂಟರ್‌ನಲ್ಲೂ ಉದ್ದನೆಯ ಸಾಲುಗಳು ಕಂಡುಬರುತ್ತವೆ. ಅಷ್ಟೇ ಅಲ್ಲ, ಕೊನೆ ಕ್ಷಣದಲ್ಲಿ ರೈಲ್ವೇ ಕನ್ಫರ್ಮ್ ಟಿಕೆಟ್ ಪಡೆಯಲು ಜನರು ಪರದಾಡಬೇಕಾಗುತ್ತದೆ. ಇದರಿಂದ ಪರಿಹಾರಕ್ಕಾಗಿ ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಮೊದಲನೆಯದಾಗಿ ರೈಲ್ವೆ ಟಿಕೆಟ್ ಕೌಂಟರ್‌ನಲ್ಲಿ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ. ಇದಲ್ಲದೆ, ಕನ್ಫರ್ಮ್ ಟಿಕೆಟ್ ಪಡೆಯುವ ಸಾಧ್ಯತೆಯೂ ಸಾಮಾನ್ಯಕ್ಕಿಂತ ಅಧಿಕವಾಗಿರುತ್ತದೆ.
ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಇಲ್ಲಿದೆ ಸುಲಭ ವಿಧಾನ:- ಮೊಬೈಲ್‌ನಿಂದ ಟಿಕೆಟ್‌ಗಳನ್ನು ಬುಕ್ ಮಾಡಲು ಮೊದಲಿಗೆ ಐಆರ್‌ಸಿಟಿಸಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ನೀವು ಈಗಾಗಲೇ ನೋಂದಾಯಿಸಿದ್ದರೆ ನಂತರ ಐಆರ್‌ಸಿಟಿಸಿ ಅಪ್ಲಿಕೇಶನ್ ನಲ್ಲಿ ಲಾಗಿನ್ ಮಾಡಿ. ಲಾಗಿನ್ ಆದ ನಂತರ, ನಿಮ್ಮ ಟಿಕೆಟ್ ಬುಕ್ ಮಾಡಲು ಬಯಸುವ ನಿಲ್ದಾಣ ಮತ್ತು ನೀವು ಪ್ರಯಾಣಿಸಲು ಬಯಸುವ ನಿಲ್ದಾಣ ಎರಡನ್ನೂ ಆಯ್ಕೆಮಾಡಿ. ಬಳಿಕ ನೀವು ಪ್ರಯಾಣಿಸಲು ಬಯಸುವ ದಿನಾಂಕ ಮತ್ತು ಯಾವ ಕೋಚ್‌ನಲ್ಲಿ ನಿಮಗೆ ಟಿಕೆಟ್ ಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಭರ್ತಿ ಮಾಡಿ.
ಮುಂದಿನ ಪರದೆಯಲ್ಲಿ ನೀವು ಪ್ರಯಾಣಿಸಲು ಬಯಸುವ ದಿನಾಂಕದಂದು ಲಭ್ಯವಿರುವ ರೈಲುಗಳು ಸಮಯದೊಂದಿಗೆ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತವೆ. ಬಳಿಕ ನೀವು ಯಾವ ರೈಲಿನಲ್ಲಿ ಪ್ರಯಾಣಿಸಲು ಬಯಸುತ್ತಿರೋ ಆ ರೈಲನ್ನು ಆಯ್ಕೆ ಮಾಡಿ. ಅದರಲ್ಲಿ ರೈಲಿನ ಕೋಚ್ ಅನ್ನು ಸಹ ಆರಿಸಿ. ನಂತರ ನೀವು ಟಿಕೆಟ್ ಬುಕ್ ಮಾಡಲು ಅಗತ್ಯ ಮಾಹಿತಿಗಳನ್ನು ನೀಡಿ. ಈ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ ನಿಮಗೆ ಪೇಮೆಂಟ್ ಆಯ್ಕೆ ಕಾಣಿಸುತ್ತದೆ. ಪೇಮೆಂಟ್ ಪೂರ್ಣಗೊಂಡ ಬಳಿಕ ನಿಮ್ಮ ಟಿಕೆಟ್ ಬುಕ್ ಆಗಲಿದೆ.