ಇನ್ನೊಂದು ವಾರದಲ್ಲಿ ಈ ರಾಶಿಯವರ ಭಾಗ್ಯೋದಯ ! ಒಲಿದು ಬರುವಳು ವಿಜಯಲಕ್ಷ್ಮೀ ! ತುಂಬಿ ತುಳುಕುವುದು ಸುಖ ಸಂಪತ್ತು

Mon, 17 Jul 2023-9:45 am,

ಸಂಪತ್ತು-ಐಶ್ವರ್ಯ, ಪ್ರೀತಿ, ಸೌಂದರ್ಯವನ್ನು ನೀಡುವ ಶುಕ್ರನ ಹಿಮ್ಮುಖ ಚಲನೆ ಇನ್ನೊಂದು ವಾರದಲ್ಲಿ ಆರಂಭವಾಗಲಿದೆ. ಇದು ಎಲ್ಲಾ ರಾಶಿಯವರ ಜಾತಕದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಆದರೆ ಮೂರು ರಾಶಿಯವರ ಮೇಲೆ ಶುಕ್ರನ ಚಲನೆಯಲ್ಲಿನ ಬದಲಾವಣೆ ದೊಡ್ಡ ಮಟ್ಟದಲ್ಲಿ ಕಾಣಬಹುದು. 

ಶುಕ್ರನ ಹಿಮ್ಮುಖ ಚಲನೆಯ ಪರಿಣಾಮವಾಗಿ  ಈ ಮೂರು ರಾಶಿಯವರ  ವೃತ್ತಿ ಬದುಕು ಎತ್ತರಕ್ಕೆ ಏರಲಿದೆ. ಆರ್ಥಿಕ ವಿಷಯಗಳಲ್ಲಿ ಬಹಳಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಅಸಾಧ್ಯ ಎನ್ನುವಂಥ ಕೆಲಸಗಳು ಕೂಡಾ ಬಹಳ ಸರಾಗವಾಗಿ ನೆರವೇರಿ ಬಿಡುತ್ತವೆ.

ವೃಷಭ: ಶುಕ್ರನ ಹಿಮ್ಮುಖ ಚಲನೆಯು ವೃಷಭ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ನಿಮ್ಮ ವ್ಯಕ್ತಿತ್ವ ಬೆಳಗುತ್ತದೆ. ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಕಷ್ಟಗಳು ಸರಿದು  ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಆದಾಯ ಹೆಚ್ಚಲಿದೆ. ಹಣ ಪಡೆಯಲು ಹೊಸ ಮಾರ್ಗಗಳು  ಹುಟ್ಟಿಕೊಳ್ಳುತ್ತವೆ.   

ಕರ್ಕಾಟಕ: ಶುಕ್ರವು ಕರ್ಕಾಟಕದಲ್ಲಿಯೇ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಶುಕ್ರನ ಹಿಮ್ಮುಖ ಚಲನೆಯು ಕರ್ಕಾಟಕ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಈ ರಾಶಿಯವರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಕುಟುಂಬದಲ್ಲಿ ಸಂತೋಷ ನೆಮ್ಮದಿ ಹೆಚ್ಚುತ್ತದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ.   

ಮಕರ: ಶುಕ್ರನ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ಕೂಡಾ ಬಹಳ ಶುಭ ಫಲಿತಾಂಶಗಳನ್ನು ನೀಡುತ್ತದೆ. ಪ್ರೇಮ ಜೀವನದಲ್ಲಿ ಯಶಸ್ಸು ಕಾಣುವಿರಿ. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರಲಿದೆ. ವೃತ್ತಿಜೀವನಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲು ಇದು ಉತ್ತಮ ಸಮಯ. ವ್ಯಾಪಾರಸ್ಥರು ಪ್ರಗತಿ ಹೊಂದುವರು. ವಿಶೇಷವಾಗಿ ವಿದೇಶಗಳೊಂದಿಗೆ ಸಂಬಂಧ ಹೊಂದಿರುವ ಜನರು ಬಹಳಷ್ಟು ಪ್ರಗತಿಯನ್ನು ಕಾಣುವರು.  

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link