ಹಿತ್ತಲಿನಲ್ಲಿ ಬೆಳೆಯುವ ಈ ಗಿಡದ ಎಲೆಯ ಸೇವನೆಯಿಂದ ಯೂರಿಕ್‌ ಆಸಿಡ್‌ ದೇಹದಿಂದ ಪತ್ತೆ ಇಲ್ಲದೆ ಮಾಯವಾಗುತ್ತದೆ..!

Tue, 05 Nov 2024-12:19 pm,

Uric Acid: ಬಿಡುವಿಲ್ಲದ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಕಾರಣದಿಂದಗಿ ಅನೇಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಹೆಚ್ಚಿನವರಲ್ಲಿ ಯೂರಿಕ್ ಆಸಿಡ್ ಸಮಸ್ಯೆ ತೀವ್ರವಾಗಿರುತ್ತದೆ.   

ಆಹಾರ ಮತ್ತು ಪಾನೀಯಗಳಲ್ಲಿ ಕಂಡುಬರುವ ಪ್ಯೂರಿನ್ ಎಂಬ ರಾಸಾಯನಿಕಗಳನ್ನು ದೇಹವು ವಿಭಜಿಸಿದಾಗ ಯೂರಿಕ್ ಆಮ್ಲವು ರೂಪುಗೊಳ್ಳುತ್ತದೆ.  

ಹೆಚ್ಚಿನ ಜಂಕ್ ಫುಡ್ ಸೇವನೆ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ಹೆಚ್ಚಿದ ಯೂರಿಕ್ ಆಮ್ಲವು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.  

ಯೂರಿಕ್‌ ಆಸಿಡ್‌ನ ಮುಖ್ಯ ಲಕ್ಷಣಗಳೆಂದರೆ ಅದು ಕೀಲು ನೋವು. ಯೂರಿಕ್ ಆಸಿಡ್ ಮಟ್ಟವು 7.0 mg/dl ಗಿಂತ ಹೆಚ್ಚಿದ್ದರೆ ಅದು ಕೀಲುಗಳಲ್ಲಿ ಸ್ಫಟಿಕಗಳ ರೂಪದಲ್ಲಿ ಸಂಗ್ರಹವಾಗುತ್ತದೆ.  

ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಅನೇಕ ಔಷಧಿಗಳನ್ನು ಬಳಸಲಾಗುತ್ತದೆ. ಜನರು ಹಲವಾರು ಆಸ್ಪತ್ರೆಗಳನ್ನು ಅತ್ತಿ ಇಳಿಯುತ್ತಾರೆ. ಆದರೆ ಯೂರಿಕ್‌ ಆಸಿಡ್‌ ಅನ್ನು ಕಡಿಮೆ ಮಾಡಲು ಕೆಲವು ನೈಸರ್ಗಿಕ ಪರಿಹಾರಗಳೊಂದಿಗೆ ಯೂರಿಕ್ ಆಮ್ಲವನ್ನು ನಿಯಂತ್ರಿಸಬಹುದು.   

ಬೇವಿನ ಎಲೆಗಳು ತಮ್ಮ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಬೇವಿನ ಎಲೆಗಳನ್ನು ಆಯುರ್ವೇದದಲ್ಲಿ ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.   

ಯೂರಿಕ್ ಆಮ್ಲವನ್ನು ನಿಯಂತ್ರಿಸುವಲ್ಲಿ ಬೇವಿನ ಎಲೆ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.   

ಮೊದಲು ತಾಜಾ ಬೇವಿನ ಎಲೆಗಳನ್ನು ತೊಳೆದು ರಸವನ್ನು ತೆಗೆಯಿರಿ. ಈ ಜ್ಯೂಸ್ ಅನ್ನು ದಿನಕ್ಕೆ ಒಂದು ಬಾರಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಒಳ್ಳೆಯದು.  

ಬೇವಿನ ಕಹಿ ರುಚಿಯು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ.   

ಬೇವಿನ ಎಲೆಯ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಯೂರಿಕ್ ಆಮ್ಲವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link