ಹರಳಿನಂತೆ ಕೀಲುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಅನ್ನು ಕರಗಿಸುವುದು ಈ ಎಲೆ ! ಸ್ಟೋನ್ ಅನ್ನು ಕೂಡಾ ಕಿಡ್ನಿಯಿಂದ ಹೊರ ತಳ್ಳುವುದು !
)
ಬೇವಿನ ಎಲೆಗಳು ಯೂರಿಕ್ ಆಸಿಡ್ ನಿಯಂತ್ರಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಬೇವಿನ ಎಲೆಗಳು ರಕ್ತವನ್ನು ಶುದ್ಧೀಕರಿಸುವ ಕೆಲಸ ಮಾಡುತ್ತವೆ. ಹೀಗಾಗಿ ಇದು ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ
)
ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು ಬೇವಿನ ಎಲೆಗಳನ್ನು ಹಲವು ರೀತಿಯಲ್ಲಿ ಬಳಸಬಹುದು.
)
ದೇಹದಲ್ಲಿ ಹೆಚ್ಚುತ್ತಿರುವ ಯೂರಿಕ್ ಆಸಿಡ್ ನಿಯಂತ್ರಿಸಲು,ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಅಗಿದು ತಿನ್ನಬಹುದು.
ಬೇವಿನ ಎಲೆಯ ಕಷಾಯ ಕೂಡಾ ಸೇವಿಸಬಹುದು. ಒಂದು ಲೋಟ ನೀರಿಗೆ 10-15 ಬೇವಿನ ಎಲೆಗಳನ್ನು ಹಾಕಿ ಕುದಿಸಿ.ನಂತರ,ಈ ನೀರನ್ನು ಫಿಲ್ಟರ್ ಮಾಡಿ ಕುಡಿಯಿರಿ.
ಬೇವಿನ ಸೊಪ್ಪು ಅಥವಾ ಬೇವಿನ ಕಷಾಯವನ್ನು ಸೇವಿಸಲು ಸಾಧ್ಯವಾಗದಿದ್ದರೆ ಬೇವಿನ ಮಾತ್ರೆಗಳನ್ನು ಸೇವಿಸಬಹುದು.ಬೇವಿನ ಸೊಪ್ಪನ್ನು ಅರೆದು ಚಿಕ್ಕ ಚಿಕ್ಕ ಮಾತ್ರೆಗಳನ್ನು ಮಾಡಿಕೊಳ್ಳಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಉತ್ತಮ ಸಹಾಯ ಮಾಡಬಹುದು.
ಯೂರಿಕ್ ಆಸಿಡ್ ಹೆಚ್ಚಳದಿಂದ ರೂಪುಗೊಳ್ಳುವ ಕಿಡ್ನಿ ಸ್ಟೋನ್ ಅನ್ನು ಕೂಡಾ ಕರಗಿಸಲು ಬೇವು ಸಹಕಾರಿಯಾಗಿದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.