Photo Gallery: ನೀರಜ್ ಚೋಪ್ರಾರ ‘ಚಿನ್ನ’ದ ಬೇಟೆಯ ಸಾಧನೆಗಳು
ನೀರಜ್ ಚೋಪ್ರಾ ಅವರು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 87.58 ಮೀಟರ್ ದೂರ ಭರ್ಜಿ ಎಸೆದು ಚಿನ್ನದ ಪದಕ ಗೆದ್ದು ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದ್ದರು. 20ರ ದಶಕದ ಆರಂಭದಲ್ಲಿ ಶೂಟರ್ ಅಭಿನವ್ ಬಿಂದ್ರಾ ನಂತರ ಸಮ್ಮರ್ ಗೇಮ್ಸ್ ಫೈನಲ್‍ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ನೀರಜ್ ಚೋಪ್ರಾ ಅವರು 2023ರ ಋತುವನ್ನು ‘ಚಿನ್ನ’ದ ಗೆಲುವಿನೊಂದಿಗೆ ಪ್ರಾರಂಭಿಸಿದರು. ದೋಹಾ ಡೈಮಂಡ್ ಲೀಗ್‍ನ ಮೊದಲ ಪ್ರಯತ್ನದಲ್ಲಿಯೇ 88.67 ಮೀಟರ್ ದೂರ ಜಾವೆಲನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
ಸ್ನಾಯು ಸೆಳೆತದ ಸಮಸ್ಯೆಯ ಕಾರಣ 3 ಸ್ಪರ್ಧೆಗಳಿಂದ ದೂರ ಉಳಿದಿದ್ದ 25ರ ಪ್ರಾಯದ ನೀರಜ್ ಚೋಪ್ರಾ, ಸ್ವಿಜರ್‌ಲೆಂಡ್‌ನ ಲಾಸೆನ್ ಡೈಮಂಡ್ ಲೀಗ್‌ನ 5ನೇ ಪ್ರಯತ್ನದಲ್ಲಿ 87.66 ಮೀಟರ್ ದೂರ ಜಾವೆಲನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಮೊದಲ ಪ್ರಯತ್ನದಲ್ಲಿ ಫೌಲ್ ಮಾಡಿದ್ದ ನೀರಜ್, 2ನೇ ಪ್ರಯತ್ನದಲ್ಲಿ 83.52 ಮೀಟರ್ ಮತ್ತು 3ನೇ ಪ್ರಯತ್ನದಲ್ಲಿ 85.04 ಮೀಟರ್ ಜಾವೆಲಿನ್ ಎಸೆದಿದ್ದರು. ಈ ಋತುವಿನಲ್ಲಿ ಇದು ಅವರ 2ನೇ ಚಿನ್ನವಾಗಿತ್ತು.
ನೀರಜ್ ಚೋಪ್ರಾ ಪೋಲೆಂಡ್‌ನ ಬೈಡ್‌ಗೋಸ್ಜ್‌ನಲ್ಲಿ ನಡೆದ 2016 IAAF World U20 Championshipsನಲ್ಲಿ ಚಿನ್ನದ ಪದಕವನ್ನು ಪಡೆದರು. 86.48 ಮೀಟರ್ ದೂರ ಜಾವೆಲನ್ ಎಸೆಯುವ ಮೂಲಕ ಅವರು 20 ವರ್ಷದೊಳಗಿನವರ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದರು. ಇದು ಚೋಪ್ರಾರಿಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ಸಿಗಲು ಸಹಕಾರಿಯಾಯಿತು.
ನೀರಜ್ ಚೋಪ್ರಾ ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದಿದ್ದರು. ಅವರು ಈ ಪ್ರಶಸ್ತಿಯನ್ನು ಪಡೆಯಲು 88.44 ಮೀಟರ್ ದೂರ ಜಾವೆಲಿನ್ ಎಸೆದಿದ್ದರು.