ಬಿಗ್ ಬಾಸ್ ನಲ್ಲಿ ಹಾರ್ಮೋನ್ ಇಂಜೆಕ್ಷನ್.. ಸತ್ಯ ಬಿಚ್ಚಿಟ್ಟ ನೀತು ವನಜಾಕ್ಷಿ

Mon, 04 Dec 2023-1:04 pm,

ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಯಾಗಿದ್ದ ಮಂಗಳಮುಖಿ ನೀತು ವನಜಾಕ್ಷಿ ಕೊಂಚ ನಿಧಾನವಾಗಿ ಆಟ ಆರಂಭಿಸಿದರು. ಇದು ನೀತು ಮೇಲೆ ಒಂದಷ್ಟು ಪರಿಣಾಮ ಬೀರಿತ್ತು. 

ಆರಂಭದಲ್ಲಿ ನೀತು ಸ್ಲೋ ಆಗಲು ಕಾರಣವೇನು ಎಂಬದುನ್ನು ಅವರೇ ಹೇಳಿದ್ದಾರೆ. ತಾವು ತೆಗೆದುಕೊಳ್ಳುತ್ತಿದ್ದ ಹಾರ್ಮೋನ್ ಇಂಜೆಕ್ಷನ್‌ಗಳ ಬಗ್ಗೆ ವಿವರಿಸಿದ್ದಾರೆ.

ದೇಹದಲ್ಲಿ ಆಗುವ ಬದಲಾವಣೆಗಳಿಂದ ಮಂಗಳಮುಖಿಯರು ಆಗಾಗ ಹಾರ್ಮೋನ್ಸ್‌ ತೆಗೆದುಕೊಳ್ಳಬೇಕು. ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮುನ್ನ ನೀತು ವನಜಾಕ್ಷಿ ಅವರು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದರಂತೆ.

ಹಾಮೋನ್‌ ಇಂಜೆಕ್ಷನ್ ತೆಗೆದುಕೊಂಡಿಲ್ಲ ಅಂದ್ರೆ ಎಲ್ಲರಂತೆ ಕಾಮ್ ಮತ್ತು ನಾರ್ಮಲ್ ಅಗಿ ಇರುತ್ತೀವಿ ಎಂದಿದ್ದಾರೆ ನೀತು. ಎಲ್ಲಾ ಮಂಗಳಮುಖಿಯರು SRS ಎಂಬ ಪ್ರೊಸೀಜರ್ ನ್ನು ಫಾಲೋ ಮಾಡುತ್ತಾರಂತೆ. 

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮುನ್ನವೇ ನೀತು ಈ ಇಂಜೆಕ್ಷನ್ ತೆಗೆದುಕೊಂಡಿದ್ದರು. ಹೀಗಾಗಿ ಕೊಂಚ ಗೊಂದಲದಲ್ಲಿದ್ದರು ಎಂದು ಹೇಳಿದ್ದಾರೆ.

ಆಗಾಗ ಹಾರ್ಮೋನ್‌ಗಾಗಿ ವಾರಕೊಮ್ಮೆ ಕನ್ಫೆಷನ್ ರೂಮ್‌ನಲ್ಲಿ ಇಂಜೆಕ್ಷನ್‌ ತೆಗೆದುಕೊಳ್ಳುತ್ತಿದ್ದ ಸತ್ಯವನ್ನು ನೀತು ಬಿಚ್ಚಿಟ್ಟಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link