ಮೂವರೊಂದಿಗೆ ಅಫೇರ್‌, ಮದುವೆಗೂ ಮುನ್ನ ಗರ್ಭಿಣಿ..44 ವರ್ಷಕ್ಕೆ ವಿವಾಹವಾದ ಈ ಸ್ಟಾರ್‌ ನಟಿ ಯಾರು ಗೊತ್ತಾ?

Wed, 28 Aug 2024-10:06 am,

ಸೇನೆಯ ಕುಟುಂಬದಲ್ಲಿ ಜನಿಸಿದ ಈ ನಟಿ ಮಿಸ್ ಇಂಡಿಯಾ ಪಟ್ಟವನ್ನು ಗೆದ್ದು ಚಿತ್ರರಂಗಕ್ಕೆ ಕಾಲಿಟ್ಟವರು. ಉತ್ತಮ ಎತ್ತರ ಮತ್ತು ಸುಂದರ ನೋಟ ಇದ್ದರೂ ಸಹ ಈ ನಟಿಗೆ ಸರಿಯಾದ ಯಶಸ್ಸು ಸಿಗಲೇ ಇಲ್ಲ.  

ಕೇವಲ ಚಲನಚಿತ್ರಗಳಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಸಹ, ಯಾವುದೇ ಹುಡುಗಿ ಮದುವೆಯ ಮೊದಲು ಗರ್ಭಿಣಿಯಾಗುವುದು ಅವಳ ಮತ್ತು ಅವಳ ಕುಟುಂಬಕ್ಕೆ ಹಲವಾರು ಸಮಸ್ಯೆಗಳನ್ನು ತಂದಿಡುತ್ತದೆ.   

ನಾಲ್ಕು ಜನ ಏನು ಹೇಳ್ತಾರೆ, ಸಮಾಜ ನಮ್ಮನ್ನು ಇನ್ನೂ ಮುಂದೆ ಹೇಗೆ ನೋಡುತ್ತೆ ಎನ್ನುವ ಕಟುವಾದ ಮಾತುಗಲು ಪ್ರತಿನಿತ್ಯ ಕೇಳಿಸಿಕೊಳ್ಳಬೇಕಾಗಿ ಬರುತ್ತದೆ.  

44 ವರ್ಷದ ನಟಿಯೊಬ್ಬರಿಗೂ ಇದೇ ರೀತಿಯ ಘಟನೆ ನಡೆದಿದೆ. ಗರ್ಭ ಧರಿಸಿರುವ ವಿಚಾರ ತಿಳಿದ ತಕ್ಷಣ ಕುಟುಂಬಸ್ಥರು ಕೂಡ ಅಚ್ಚರಿಗೊಂಡಿದ್ದಾರೆ.   

ಈಕೆ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ನಟಿಯ ಮನೆಯವರು ನಟಿಗೆ ಕಠಿನ ವಾದ ಷರತ್ತು ವಿದಿಸಿದ್ದರು, ಅಷ್ಟೆ ಅಲ್ಲ 78 ಕಾಲಗಲ ಒಳಗೆ ಇದಕ್ಕೆ ಕಾರನವಾದ ಆತನನ್ನು ಮದುವೆಯಾಗಲೇಬೆಕು ಎಂದಿದ್ದರು. ಅದರಂತೆಯೇ ನಟಿ ಕೇವಲ 78 ಗಂಟೆಗಳ ಒಳಗೆ ತನ್ನ ಗೆಳೆಯನನ್ನು ವರಿಸಿದ್ದಳು.  

ಅಷ್ಟಕ್ಕೂ ಆ ನಟಿ ಬೇರಾರು ಅಲ್ಲ ಹೊರತಾಗಿ ನೇಹಾ ಧೂಪಿಯಾ. ನೇಹಾ ಧೂಪಿಯಾ ಅವರು 27 ಆಗಸ್ಟ್ 1980 ರಂದು ಕೇರಳದ ಕೊಚ್ಚಿಯಲ್ಲಿ ಸೇನಾ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಪ್ರದೀಪ್ ಸಿಂಗ್ ಧೂಪಿಯಾ ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಯಾಗಿದ್ದರು ಮತ್ತು ಅವರ ತಾಯಿ ಮಣಿಪಿಂದರ್ ಧೂಪಿಯಾ ಗೃಹಿಣಿ.  

ಹಲಿಯ ನೇವಲ್ ಪಬ್ಲಿಕ್ ಸ್ಕೂಲ್‌ನಿಂದ ತಮ್ಮ ಶಾಲಾ ಶಿಕ್ಷಣವನ್ನು ಪಡೆದ ಇವರು, ನಂತರ ದೆಹಲಿ ವಿಶ್ವವಿದ್ಯಾಲಯದ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಇತಿಹಾಸದಲ್ಲಿ ಪದವಿ ಪಡೆದರು.   

ನೇಹಾ ಸೈನ್ಯದ ಕುಟುಂಬದಲ್ಲಿ ಜನಿಸಿದರು, ಆದ್ದರಿಂದ ಶಿಸ್ತು ಅವರ ವ್ಯಕ್ತಿತ್ವದ ಭಾಗವಾಗಿತ್ತು. ತಾನು ಓದುವ ಸಮಯದಲ್ಲಿ, ಅವರು ಮಾಡೆಲಿಂಗ್ ಜಗತ್ತನ್ನು ಪ್ರವೇಶಿಸಿದರು ಮತ್ತು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದರು ಮತ್ತು ಇದಕ್ಕಾಗಿ ಶ್ರಮಿಸಿದರು.   

ನೇಹಾ 'ಫೆಮಿನಾ ಮಿಸ್ ಇಂಡಿಯಾ' ಪ್ರಶಸ್ತಿಯನ್ನು ಗೆದ್ದರು ಮತ್ತು ಇದರೊಂದಿಗೆ ಅವರು ಮಿಸ್ ಯೂನಿವರ್ಸ್ 2002 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದರು, ಅಲ್ಲಿ ಅವರು ಅಗ್ರ 10 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.   

ಸಿಟಿ ಅಂಡರ್ ಥ್ರೆಟ್' ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು ಆದರೆ, ಅವರು 2004 ರ ಚಲನಚಿತ್ರ 'ಜೂಲಿ'ಯಿಂದ ನಿಜವಾದ ಮನ್ನಣೆ ಪಡೆದರು. ಈ ಚಿತ್ರದಲ್ಲಿ ಅವರ ಬೋಲ್ಡ್ ಪಾತ್ರವು ಸಾಕಷ್ಟು ಚರ್ಚೆಯನ್ನು ಗಳಿಸಿತು, ಆದರೆ ಅದರ ನಂತರ ಅವರು ಟೈಪ್‌ಕಾಸ್ಟ್ ಆಗಿದ್ದರು. ಆದಾಗ್ಯೂ, ನೇಹಾ ತನ್ನ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನದಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ.  

ನೇಹಾ ಧೂಪಿಯಾ 2018 ರಲ್ಲಿ ಅಂಗದ್ ಬೇಡಿ ಅವರನ್ನು ರಹಸ್ಯವಾಗಿ ವಿವಾಹವಾದರು ಮತ್ತು ಅದೇ ವರ್ಷದಲ್ಲಿ ಅವರ ಮಗಳು ಮೆಹರ್ ಬೇಡಿ ಕೂಡ ಜನಿಸಿದರು. ಮಗಳು ಹುಟ್ಟುವ ಮುನ್ನವೇ ನೇಹಾ ಗರ್ಭಿಣಿಯಾಗಿರುವ ಕಾರಣ ಅಂಗದ್ ಬೇಡಿ ಅವರನ್ನು ಮದುವೆಯಾಗಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ  

ZEENEWS TRENDING STORIES

By continuing to use the site, you agree to the use of cookies. You can find out more by Tapping this link