7 ಕೋಟಿಯ 2 ಮನೆ, 6 ಕೋಟಿಯ 2 ಕಾಂಪ್ಲೆಕ್ಸ್... ಜೈಲಿಂದ ಜಾಮೀನಿನ ಮೇಲೆ ಹೊರಬಂದ ನಟ ದರ್ಶನ್ ಎಷ್ಟು ಕೋಟಿ ಆಸ್ತಿಗೆ ʼಒಡೆಯʼ ಗೊತ್ತೇ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್, ಇದೀಗ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಅವರ ಸತತ ಪ್ರಯತ್ನಗಳಿಗೆ ಕೊನೆಗೂ ಫಲ ಸಿಕ್ಕಿದೆ ಎನ್ನಬಹುದು. ಇನ್ನೊಂದೆಡೆ ಇವರ ಆಸ್ತಿ ಬಗ್ಗೆ ಸದ್ಯ ಭಾರೀ ಚರ್ಚೆಯಾಗುತ್ತಿದೆ.
ದರ್ಶನ್ ಅವರ ನಿಜವಾದ ಹೆಸರು ಹೇಮಂತ್ ಕುಮಾರ್. ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ಬಳಿಕ ದರ್ಶನ್ ಎಂದು ಹೆಸರು ಬದಲಾಯಿಸಿಕೊಂಡ ಅವರು, ಚಲನಚಿತ್ರ ನಿರ್ಮಾಪಕ ಮತ್ತು ವಿತರಕರಾಗಿಯೂ ಕೆಲಸ ಮಾಡಿದ್ದಾರೆ.
ಅಂದಹಾಗೆ 2017 ರಲ್ಲಿ, ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದ ದರ್ಶನ್, ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು 2006 ರಲ್ಲಿ ಸ್ಥಾಪಿಸಿದರು. ಈ ಸಂಸ್ಥೆಯ ಮೊದಲ ಸಿನಿಮಾ ʼಜೊತೆ ಜೊತೆಯಲಿʼ
ದರ್ಶನ್ ಹುಟ್ಟಿದ್ದು ಕೊಡಗಿನ ಪೊನ್ನಂಪೇಟೆಯಲ್ಲಿ 16 ಫೆಬ್ರವರಿ 1977 ರಂದು. ದಿಗ್ಗಜ ನಟ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ದಂಪತಿಯ ಪುತ್ರನಾಗಿ ಜನಿಸಿದರು.
ಒಂದು ಕಾಲದಲ್ಲಿ ಅಸಿಸ್ಟೆಂಟ್ ಕ್ಯಾಮರಾಮ್ಯಾನ್ ಆಗಿದ್ದ ದರ್ಶನ್ ಇದೀಗ ಕೋಟ್ಯಾಧಿಪತಿಯಾಗಿದ್ದಾರೆ. ಆರ್ ಆರ್ ನಗರದಲ್ಲಿ 6 ರಿಂದ 7 ಕೋಟಿ ಬೆಲೆಬಾಳುವ 2 ಮನೆಗಳನ್ನು ಹೊಂದಿದ್ದಾರೆ ಎಂದು ಕೆಲ ವರದಿಗಳು ಹೇಳುತ್ತವೆ. ಅಷ್ಟೇ ಅಲ್ಲದೆ, ಚಂದ್ರ ಲೇಔಟ್ʼನಲ್ಲಿ 5-6ಕೋಟಿ ಬೆಲೆ ಬಾಳುವ ಕಾಂಪ್ಲೆಕ್ಸ್ ಕೂಡ ದರ್ಶನ್ ಹೆಸರಿನಲ್ಲಿದೆ ಎನ್ನಲಾಗಿದೆ.
ಇವೆಲ್ಲದರ ಜೊತೆಗೆ 4-5 ಕೋಟಿ ಬೆಲೆ ಬಾಳುವ ನಾಲ್ಕು ಐಷಾರಾಮಿ ಕಾರುಗಳ ಒಡೆಯ ದರ್ಶನ್. ಇನ್ನು ದರ್ಶನ್ ಅವರಿಗೆ ವಾಚ್‌ಗಳೆಂದರೆ ಬಲು ಇಷ್ಟ. ಈ ಕಾರಣದಿಂದ ಕೋಟಿ ಕೋಟಿ ಬೆಲೆ ಬಾಳುವ ವಾಚುಗಳನ್ನು ಖರೀದಿಸಿದ್ದಾರೆ. ಇನ್ನು ಮೈಸೂರು- ನರಸೀಪುರ ರಸ್ತೆಯಲ್ಲಿ 5 ಕೋಟಿ ಮೌಲ್ಯದ ನಾಲ್ಕು ಎಕರೆ ಫಾರ್ಮ್ ಹೌಸ್ ಕೂಡಾ ದರ್ಶನ್ ಹೆಸರಿನಲ್ಲಿದೆ ಎಂದು ಹೇಳಲಾಗುತ್ತಿದೆ.