ಹನಿ ತುಪ್ಪ ಕಣ್ಣಿನ ಸುತ್ತ ಸವರಿದ್ರೆ ಸಿಗುತ್ತೆ ಇಷ್ಟೆಲ್ಲಾ ಅದ್ಭುತ ಪ್ರಯೋಜನಗಳು..!
)
ತುಪ್ಪವನ್ನು ತಿನ್ನುವುದರಿಂದ ಮಾತ್ರವಲ್ಲ ಹನಿ ತುಪ್ಪವನ್ನು ಕಣ್ಣಿಗೆ ಸವರುವುದರಿಂದಲೂ ಹಲವು ಪ್ರಯೋಜನಗಳಿವೆ. ಆಯುರ್ವೇದದಲ್ಲಿ ಇದನ್ನು ನೇತ್ರ ತರ್ಪಣ ಎಂದು ಕರೆಯಲಾಗುತ್ತದೆ.
)
ತುಪ್ಪದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಹೆರಳವಾಗಿದ್ದು, ಇವು ಶಕ್ತಿಯುತ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ನಿತ್ಯ ರಾತ್ರಿ ಮಲಗುವ ಮೊದಲು ಒಂದೇ ಒಂದು ಹನಿ ತುಪ್ಪವನ್ನು ಕಣ್ಣಿನ ಸುತ್ತ ಸವರುವುದರಿಂದ ಕಣ್ಣಿನ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
)
ಕಣ್ಣಿಗೆ ತುಪ್ಪ ಸವರುವುದರಿಂದ ಕಣ್ಣಿನ ಆಯಾಸ, ದೂರ ದೃಷ್ಟಿ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತದೆ.
ತುಪ್ಪದಲ್ಲಿ ವಿಟಮಿನ್ ಎ ಹೇರಳವಾಗಿದ್ದು ಇದು ದೃಷ್ಟಿ ಸುಧಾರಣೆಗೆ ಸಹಕಾರಿ ಆಗಿದೆ.
ನೇತ್ರ ತರ್ಪಣವು ಕಣ್ಣಿನ ಆರೋಗ್ಯಕ್ಕೆ ಪರಿಣಾಮಕಾರಿ ಆಗಿದೆ. ಇದು ಕಣ್ಣಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದಲೂ ರಕ್ಷಿಸುತ್ತದೆ.
ನಿಯಮಿತವಾಗಿ ದೇಸೀ ತುಪ್ಪವನ್ನು ಕಣ್ಣುಗಳಿಗೆ ಸವರುವುದಾರಿಂದ ಡ್ರೈ ಐ ಸಿಂಡ್ರೋಮ್ ಕಡಿಮೆಯಾಗಿ ಕಣ್ಣುಗಳಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಕಾರಿ ಆಗಿದೆ.
ದೇಸಿ ತುಪ್ಪದಲ್ಲಿರುವ ವಿಟಮಿನ್ಗಳು ಮತ್ತು ಕೊಬ್ಬಿನಾಮ್ಲಗಳು ಕಣ್ಣುಗಳ ಸುತ್ತಲಿನ ಡಾರ್ಕ್ ಸರ್ಕಲ್ ನಿವಾರಿಸಲು ಸಹಕಾರಿ ಆಗುತ್ತದೆ.
ತುಪ್ಪದಲ್ಲಿರುವ ಆಂಟಿಆಕ್ಸಿಡೆಂಟ್ಗಳು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಕಣ್ಣುಗಳನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.