Vastu Tips: ಸೂರ್ಯಾಸ್ತದ ಬಳಿಕ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ, ಮಾಡಿದ್ರೆ ದಾರಿದ್ರ್ಯ ಒಕ್ಕರಿಸುವುದು ಪಕ್ಕಾ..!
ವಾಸ್ತು ಶಾಸ್ತ್ರದಲ್ಲಿ, ಮನೆಯ ಅಭಿವೃದ್ದಿ ಏಳ್ಗೆಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ.
ವಾಸ್ತು ಪ್ರಕಾರ, ಸೂರ್ಯಾಸ್ತದ ಬಳಿಕ ಕೆಲವು ಕೆಲಸಗಳನ್ನು ಮಾಡುವುದನ್ನಿ ನಿಷೇಧಿಸಲಾಗಿದ್ದು, ಈ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ದಾರ್ರಿದ್ಯ ಬರುತ್ತದೆ. ಅಂತಹ ಮನೆಯಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಕ್ಷಣಮಾತ್ರವೂ ನಿಲ್ಲುವುದಿಲ್ಲ ಎನ್ನಲಾಗುತ್ತದೆ.
ವಾಸ್ತು ಪ್ರಕಾರ, ಸಂಜೆ ಸೂರ್ಯ ಮುಳುಗಿದ ಬಳಿಕ ಉಗುರು ಕತ್ತರಿಸಬಾರದು. ಇದರಿಂದ ಲಕ್ಷ್ಮಿ ಕೋಪಗೊಳ್ಳುವಳು, ಮಾತ್ರವಲ್ಲ ಅಂತಹ ಮನೆಯಲ್ಲಿ ಬಡತನ ತಾಂಡವವಾಡುತ್ತದೆ ಎನ್ನಲಾಗುತ್ತದೆ.
ಕೆಲವರು ರಾತ್ರಿ ವೇಳೆ ಕಸ ಗುಡಿಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯ ಮುಳುಗಿದ ಬಳಿಕ ಕಸ ಗುಡಿಸುವುದರಿಂದ ಸಂಪತ್ತಿನ ಲಕ್ಷ್ಮಿ ಮನೆಯಿಂದ ಹೊರಹೋಗುತ್ತಾಳೆ. ಅಂತಹ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಪ್ರವೇಶಿಸುತ್ತಾಳೆ ಎನ್ನಲಾಗುತ್ತದೆ.
ವಾಸ್ತು ಪ್ರಕಾರ, ಸೂರ್ಯಾಸ್ತದ ಬಳಿಕ ತಾಯಿ ಲಕ್ಷ್ಮಿಗೆ ಸಂಬಂಧಿಸಿದ ಹಾಲು, ಸಕ್ಕರೆ, ಉಪ್ಪಿನಂತಹ ಬಿಳಿ ವಸ್ತುಗಳನ್ನು ಬೇರೆಯವರಿಗೆ ನೀಡಬಾರದು ಅಥವಾ ದಾನ ಮಾಡಬಾರದು. ಅಂತಹ ಮನೆಯಲ್ಲಿ ಹಣಕಾಸಿನ ಬಿಕ್ಕಟ್ಟು ತಲೆದೂರುತ್ತದೆ ಎನ್ನಲಾಗುತ್ತದೆ.
ಕೆಲವರು ರಾತ್ರಿ ಅಡುಗೆ ಮಾಡಿದ, ಊಟ ಮಾಡಿದ ಪಾತ್ರೆಗಳನ್ನು ಹಾಗೆಯೇ ಇತ್ತು ಮಲಗುತ್ತಾರೆ. ಆದರೆ, ವಾಸ್ತು ಪ್ರಕಾರ, ಈ ಅಭ್ಯಾಸವು ಮನೆಯಲ್ಲಿ ಋಣಾತ್ಮಕತೆಯನ್ನು ಆಕರ್ಷಿಸುತ್ತದೆ. ಇದು ಮನೆಯವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಮನೆಯ ಶಾಂತಿಗೂ ಭಂಗ ತರುತ್ತದೆ ಎನ್ನಲಾಗುತ್ತದೆ.
ಸೂರ್ಯಾಸ್ತದ ಬಳಿಕ ಯಾರಿಗೂ ಹಣವನ್ನು ನೀಡಬೇಡಿ. ವಾಸ್ತು ಪ್ರಕಾರ, ಇದು ತಾಯಿ ಲಕ್ಷ್ಮಿಗೆ ಮಾಡುವ ಅವಮಾನವಾಗಿದ್ದು, ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಇದರಿಂದ ಮನೆಯಲ್ಲಿ ದಾರಿದ್ರ್ಯ, ಬಡತನ ಬರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎನ್ನಲಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.