ದಾನ ಪುಣ್ಯದ ಕೆಲಸವೇ !ಈ ವಸ್ತುಗಳನ್ನು ತಪ್ಪಿಯೂ ದಾನ ಮಾಡಲು ಹೋಗಬೇಡಿ !ನೀವೇ ಬೇಡುವ ಸ್ಥಿತಿ ತಲುಪಬಹುದು
ಎಣ್ಣೆಯನ್ನು ಎಂದಿಗೂ ದಾನ ಮಾಡುವ ತಪ್ಪು ಮಾಡಬೇಡಿ.ಒಂದು ವೇಳೆ ಎಣ್ಣೆ ದಾನ ಮಾಡಿದರೆ ಅದು ನಿಮ್ಮನ್ನು ಪಾಪದ ಕೂಪಕ್ಕೆ ತಳ್ಳಿ ಬಿಡಬಹುದು.ಎಣ್ಣೆ ದಾನ ಮಾಡುವುದರಿಂದ ಶನಿದೇವನ ವಕ್ರ ದೃಷ್ಟಿಗೆ ಗುರಿಯಾಗಬೇಕಾಗುತ್ತದೆ.
ಸೂರ್ಯಾಸ್ತದ ನಂತರ ಅರಿಶಿನವನ್ನು ದಾನ ಮಾಡಬಾರದು.ಅರಿಶಿನವನ್ನು ದಾನ ಮಾಡುವುದರಿಂದ ಗುರು ಬಲ ಕಡಿಮೆಯಾಗುತ್ತದೆ.
ಹಾಗೆಯೇ ಉಪ್ಪನ್ನು ಎಂದೂ ದಾನ ಮಾಡಬಾರದು.ಉಪ್ಪನ್ನು ದಾನ ಮಾಡುವುದರಿಂದ ಲಕ್ಷ್ಮೀ ದೇವಿಯು ಕೋಪಗೊಂಡು ದೂರ ಹೋಗುತ್ತಾಳೆ.
ಪ್ಲಾಸ್ಟಿಕ್,ಸ್ಟೀಲ್,ಗಾಜು,ಅಲ್ಯೂಮಿನಿಯಂ ಪಾತ್ರೆಗಳನ್ನು ಎಂದಿಗೂ ದಾನ ಮಾಡಬಾರದು.ಇದು ಅತ್ಯಂತ ಅಶುಭ.ಈ ವಸ್ತುಗಳನ್ನು ದಾನ ಮಾಡುವುದರಿಂದ ಕುಟುಂಬದ ಶಾಂತಿ ಮತ್ತು ಸಂತೋಷವೂ ಅಪಾಯದಲ್ಲಿ ಸಿಲುಕುತ್ತದೆ.
ಅನೇಕ ಜನರು ಧಾರ್ಮಿಕ ಗ್ರಂಥಗಳನ್ನು ದಾನ ಮಾಡುತ್ತಾರೆ.ಅವುಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ದುರದೃಷ್ಟ ನೆಲೆಯಾಗುವುದು.