ನೋಟು ಎಣಿಸುವಾಗ ಈ ತಪ್ಪು ಮಾಡದಿರಿ ! ಶಾಶ್ವತವಾಗಿ ಮುನಿಸಿಕೊಂಡು ಹೊರತು ಬಿಡುತ್ತಾಳೆಯಂತೆ ಲಕ್ಷ್ಮೀ

Fri, 23 Aug 2024-5:37 pm,

ಸಂಪತ್ತಿನ ಅಧಿದೇವತೆ ಲಕ್ಷ್ಮೀಯ ಕೃಪೆಗೆ ಪಾತ್ರರಾದರೆ, ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಗೆ ಕೊರತೆಯಿರುವುದಿಲ್ಲ.ಆದರೆ ನಮ್ಮ ಮೇಲೆ ಮುನಿಸಿಕೊಂಡು    ಲಕ್ಷ್ಮೀ ಮನೆಯಿಂದ ನಿರ್ಗಮಿಸಿದರೆ ಜೀವನವಿಡೀ, ಬಡತನ ಅನುಭವಿಸಬೇಕಾಗುತ್ತದೆ.   

ನಾವು ಮಾಡುವ ಕೆಲವು ಕೆಲಸಗಳೇ ಮಹಾಲಕ್ಷ್ಮೀಯ ಕೋಪಕ್ಕೆ ಕಾರಣವಾಗುತ್ತದೆ.  ಅದರಲ್ಲಿಯೂ ನೋಟುಗಳನ್ನು ಎಣಿಸುವಾಗ ಮಾಡುವ ಕೆಲ ತಪ್ಪುಗಳಿಂದಾಗಿ  ಲಕ್ಷ್ಮೀ ಶಾಶ್ವತವಾಗಿ ದೂರವಾಗಿ ಬಿಡುತ್ತಾಳೆಯಂತೆ .    

ಅನೇಕ ಜನರು ನೋಟುಗಳನ್ನುಎಣಿಸುವಾಗ ಎಂಜಲು ಬಳಸುತ್ತಾರೆ.  ನೋಟು ಎಂದರೆ ಅದು ಲಕ್ಷ್ಮೀ (Godess Lakshmi). ಹಾಗಾಗಿ ನೋಟಿಗೆ ಎಂಜಲು ಬಳಸುವುದು ಎಂದರೆ ತಾಯಿ ಲಕ್ಷ್ಮೀ ಗೆ ಅಗೌರವ ತೋರಿದಂತೆ.

ಕೆಲವರು ಹಣವನ್ನು ಪಕ್ಕದಲ್ಲಿ ಇಟ್ಟುಕೊಂಡೇ ಮಲಗುತ್ತಾರೆ.ಇನ್ನು ಕೆಲವರು  ಹಣವನ್ನು ಹಾಸಿಗೆಯಡಿಯಲ್ಲಿ, ಡ್ರಾಯರ್ ಒಳಗೆ ಹರಡಿಕೊಂಡು ಇಡುತ್ತಾರೆ. ಹಣ ಮತ್ತು ಒಡವೆಗಳನ್ನು ಯಾವಾಗಲೂ ಬೀರು ಅಥವಾ ಸ್ವಚ್ಛ ಸ್ಥಳದಲ್ಲಿ ಇಡಬೇಕು.

ಇನ್ನು ಕೆಲವರು ಬೇರೆಯವರಿಗೆ ಹಣ ನೀಡುವಾಗ  ಎಸೆಯುವ ಮೂಲಕ   ನೀಡುತ್ತಾರೆ. ಈ ರೀತಿಯಲ್ಲಿ ಹಣ ಕೊಡಲೂ ಬಾರದು, ತೆಗೆದುಕೊಳ್ಳಲೂ ಬಾರದು.   

ಅಪ್ಪಿತಪ್ಪಿ ಹಣ ನೆಲದ ಮೇಲೆ ಬಿದ್ದರೆ, ಅದನ್ನು ಮೇಲಕ್ಕೆತ್ತಿ ಅದಕ್ಕೆ ನಮಸ್ಕರಿಸಬೇಕು.ನಂಬಿಕೆಗಳ ಪ್ರಕಾರ,ಲಕ್ಷ್ಮೀ ಹಣದಲ್ಲಿ ನೆಲೆಸಿರುತ್ತಾಳೆ ಈ ಕಾರಣಕ್ಕಾಗಿಯೇ ಲಕ್ಷ್ಮೀ ಪೂಜೆಯ ಸಂದರ್ಭಗಳಲ್ಲಿ ಹಣವನ್ನು ಇಟ್ಟು ಪೂಜಿಸಲಾಗುತ್ತದೆ.   

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link