ಅಮೆಜಾನ್ ಸೇಲ್‌ನಲ್ಲಿ ನೆಚ್ಚಿನ ಬ್ರ್ಯಾಂಡ್ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಡೀಲ್, ಮತ್ತೆ ಸಿಗಲ್ಲ ಈ ಅವಕಾಶ!
ಜನಪ್ರಿಯ ಇ-ಕಾಮರ್ಸ್ ಸೈಟ್ ಅಮೆಜಾನ್ ನಲ್ಲಿ ಇಂದಿನಿಂದ ಆಗಸ್ಟ್ 11 ರವರೆಗೆ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಡೆಯುತ್ತಿದೆ. ಈ ಸೇಲ್‌ನಲ್ಲಿ ಜನಪ್ರಿಯ ಟಿವಿಗಳ ಮೇಲೆ ಭರ್ಜರಿ 65% ವರೆಗೆ ಡೀಲ್‌ಗಳನ್ನು ನೀಡಲಾಗಿದೆ. ಯಾವ್ಯಾವ ಟಿವಿಗಳ ಮೇಲೆ ರಿಯಾಯಿತಿ ಲಭ್ಯವಿದೆ ಎಂದು ತಿಳಿಯೋಣ...
Sony Bravia 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ ಗೂಗಲ್ ಟಿವಿಯಲ್ಲಿ 42% ರಿಯಾಯಿತಿ ನೀಡಲಾಗುತ್ತಿದೆ. ಈ ಟಿವಿಯ ಮೂಲ ಬೆಲೆ ರೂ. 99,900 ಆದರೆ, ಅಮೆಜಾನ್ ಸೇಲ್‌ನಲ್ಲಿ ನೀವು ಇದನ್ನು ರೂ. 57,990ಕ್ಕೆ ಮನೆಗೆ ತರಬಹುದು.
ಸ್ಯಾಮ್‌ಸಂಗ್ 43-ಇಂಚಿನ ಟಿವಿ ಕ್ರಿಸ್ಟಲ್ 4K ಅಲ್ಟ್ರಾ HD ಸ್ಮಾರ್ಟ್ LED TVಯಲ್ಲಿ 28% ಡಿಸ್ಕೌಂಟ್ನೀಡಲಾಗುತ್ತಿದೆ. ಇದರ ಮೂಲಬೆಲೆ ರೂ. 49,900 ಆಗಿದ್ದು, ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಈ ಟಿವಿಯನ್ನು ರೂ. 35,990 ಕ್ಕೆ ಖರೀದಿಸಬಹುದು.
ರೂ. 24,999 MI 32-ಇಂಚಿನ ಎಚ್‌ಡಿ ರೆಡಿ ಸ್ಮಾರ್ಟ್ ಗೂಗಲ್ ಎಲ್‌ಈಡಿ ಟಿವಿಯನ್ನು ಅಮೆಜಾನ್ ಸೇಲ್‌ನಲ್ಲಿ ರೂ. 13,989 ಕ್ಕೆ ಮನೆಗೆ ತರಬಹುದು.
ಎಲ್‌ಜಿ 43-ಇಂಚಿನ 4K ಅಲ್ಟ್ರಾ ಎಚ್‌ಡಿ ಸ್ಮಾರ್ಟ್ ಎಲ್‌ಈಡಿ ಟಿವಿಯಲ್ಲೂ 34% ರಿಯಾಯಿತಿ ನೀಡಲಾಗುತ್ತಿದೆ. ರೂ. 49,900 ಮೂಲ ಬೆಲೆ ಹೊಂದಿರವ ಈ ಟಿವಿಯನ್ನು ಈಗ ಕೇವಲ ರೂ. 32,990ಕ್ಕೆ ನಿಮ್ಮದಾಗಿಸಬಹುದು.
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ 65-ಇಂಚಿನ ಸೋನಿ ಬ್ರವಿಯ 2 4ಕೆ ಅಲ್ಟ್ರಾ ಎಚ್‌ಡಿ ಸ್ಮಾರ್ಟ್ ಎಲ್‌ಈಡಿ ಗೂಗಲ್ ತಿವಿಯಲ್ಲಿ ಶೇ. 41 ರಷ್ಟು ರಿಯಾತೀತಿ ನೀಡಲಾಗಿದೆ. 1,39,900 ರೂ. ಮೌಲ್ಯದ ಈ ಟಿವಿಯನ್ನು 82,990 ಕ್ಕೆ ಖರೀದಿಸಬಹುದು.
ಆದಾಗ್ಯೂ, ಈ ಎಲ್ಲಾ ಟಿವಿಗಳಲ್ಲಿ ಕ್ರೆಡಿಟ್ ಕಾರ್ಡ್ ಆಫರ್ ಸೇರಿದಂತೆ ಹಲವು ವಿಶೇಷ ಕೊಡುಗೆಗಳು ಲಭ್ಯವಿದ್ದು, ಇವುಗಳ ಲಾಭ ಪಡೆಯುವ ಮೂಲಕ ಟಿವಿ ಖರೀದಿಯಲ್ಲಿ ಶೇ. 65ರಷ್ಟು ಹಣ ಉಳಿಸಬಹುದು.