Valentine Day Gift: ವ್ಯಾಲೆಂಟೈನ್ಸ್ ಡೇಯಲ್ಲಿ ಮಿಸ್ ಆಗಿಯೂ ನಿಮ್ಮ ಪ್ರೇಮಿಗೆ ಈ ರೀತಿ ಗಿಫ್ಟ್ ನೀಡಬೇಡಿ!
ವ್ಯಾಲೆಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನದಂದು ಪ್ರೇಮಿಗಳು/ಪತಿ-ಪತ್ನಿ ಪರಸ್ಪರರ ನಡುವೆ ಉಡುಗೊರೆಗಳನ್ನು ವಿನಿಯೋಗ ಮಾಡಿಕೊಳ್ಳುತ್ತಾರೆ. ಇದು ಇಬ್ಬರ ನಡುವೆ ಪ್ರೀತಿಯನ್ನು ಇನ್ನೂ ಗಾಢವಾಗಿಸುತ್ತದೆ ಎಂಬುದು ನಂಬಿಕೆ.
ಆದರೆ, ವ್ಯಾಲೆಂಟೈನ್ಸ್ ಡೇ/ಪ್ರೇಮಿಗಳ ದಿನ ನಿಮ್ಮ ಸಂಗಾತಿಗೆ ನೀಡುವ ಕೆಲವು ಉಡುಗೊರೆಗಳು ನಿಮ್ಮ ಸಂಬಂಧದಲ್ಲಿ ಬಿರುಕಿಗೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ?
ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರದ ಪ್ರಕಾರ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ಕೆಲವು ವಸ್ತುಗಳನ್ನು ನೀಡಲೇವಾರದು ಎಂದು ಹೇಳಲಾಗುತ್ತದೆ. ಈ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ಇದು ಪರಸ್ಪರರ ನಡುವೆ ಪ್ರೀತಿಯನ್ನು ಹೆಚ್ಚಿಸುವ ಬದಲಿಗೆ ಸಂಬಂಧದಲ್ಲಿ ಕಹಿಯನ್ನು ಉಂಟು ಮಾಡಬಹುದು ಎನ್ನಲಾಗುತ್ತದೆ. ಹಾಗಿದ್ದರೆ, ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ಯಾವ ವಸ್ತುಗಳನ್ನು ನೀಡಬಾರದು ಎಂದು ತಿಳಿಯೋಣ...
ಗಾಜಿನ ವಸ್ತುಗಳು ನೋಡಲು ಆಕರ್ಷಕವಾಗಿ ಕಂಡರೂ ಸಹ ಇದನ್ನು ನೀವು ಪ್ರೀತಿಸುವ ವ್ಯಕ್ತಿಗೆ ಗಿಫ್ಟ್ ಆಗಿ ನೀಡಬಾರದು. ವಾಸ್ತು ಶಾಸ್ತ್ರದ ಪ್ರಕಾರ, ಇದರಿಂದ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ, ಚೂಪಾದ ವಸ್ತುಗಳನ್ನು ನೀವು ಇಷ್ಟಪಡುವವರಿಗೆ ನೀಡುವುದರಿಂದ ಇದು ನಿಮ್ಮ ಸಂಬಂಧದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ.
ನೀವು ನಿಮ್ಮ ಸಂಗಾತಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬಹುದು. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಕಪ್ಪು ಬಣ್ಣದ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುವುದರಿಂದ ಇದು ನಿಮ್ಮ ಸಂಬಂಧದಲ್ಲಿ ನಕಾರಾತ್ಮಕ ಫಲಗಳನ್ನು ನೀಡಬಹುದು.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಲು ಆಕರ್ಷಕವಾದ ನಕಲಿ ಹೂವುಗಳು ಸಾಕಷ್ಟು ಲಭ್ಯವಿವೆ. ಆದರೆ, ನೀವು ನಿಮ್ಮ ಸಂಗಾತಿಗೆ ನಕಲಿ ಹೂವುಗಳನ್ನು ಉಡುಗೊರೆಯಾಗಿ ನೀಡುವುದುಯರಿಂದ ಇದು ಸಂಬಂಧದಲ್ಲಿ ಕಹಿಯ ಭಾವನೆಯನ್ನು ಸೃಷ್ಟಿಸಬಹುದು ಎನ್ನಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ಸಂದರ್ಭದಲ್ಲಿಯೂ ಸಹ ನಿಮ್ಮ ಪ್ರೀತಿ ಪಾತ್ರರಿಗೆ ನೀರಿಗೆ ಸಂಬಂಧಿಸಿದ ಉಡುಗೊರೆಗಳನ್ನು ನೀಡಬಾರದು. ಇದರಿಂದ ಅವರು ನಿಮ್ಮಿಂದ ದೂರವಾಗಬಹುದು ಎನ್ನಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.