ಮಹಿಳೆಯರೇ ಎಚ್ಚರ! ಎಂದಿಗೂ ಈ 5 ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
ಅನೇಕ ಆರೋಗ್ಯ ಸಮಸ್ಯೆಗಳು ಸಾಮಾನ್ಯ ಶೀತ, ನೆಗಡಿ, ವೈರಸ್‌ಗಳಂತೆ ಕಂಡರೂ ಕೂಡ ಮಹಿಳೆಯರಲ್ಲಿ ಇದು ಗಂಭೀರ ಆರೋಗ್ಯ ಸಮಸ್ಯೆಗಳ ಎಚ್ಚರಿಕೆಯ ಗಂಟೆಯೂ ಆಗಿರಬಹುದು. ಇವುಗಳನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ರಕ್ತಪರಿಚಲನೆ ಸರಿಯಾಗಿ ಆಗದಿದ್ದಾಗ, ಹೃದಯ ಸರಿಯಾಗಿ ರಕ್ತ ಸ್ವೀಕರಿಸದಿದ್ದಾಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಆಗಾಗ್ಗೆ ಉಸಿರಾಟದ ತೊಂದರೆ ಆಗುತ್ತಿದ್ದರೆ ಇದು ಹೃದಯಾಘಾತದ ಮುನ್ಸೂಚನೆಯೂ ಆಗಿರಬಹುದು.
ಇದ್ದಕ್ಕಿದ್ದಂತೆ ಅನುಭವಿಸುವ ಎದೆ ಬಡಿತ ಜೋರಾಗುವುದು, ಎದೆನೋವು, ಸದಾ ತೋಳು-ಭುಜಗಳಲ್ಲಿ ಕಂಡು ಬರುವ ನೋವು ಹೃದಯದ ಆರೋಗ್ಯದ ಸಮಸ್ಯೆಯ ಗಂಭೀರ ಲಕ್ಷಣಗಳಾಗಿವೆ.
ಪದೇ ಪದೇ ಹಠಾತ್ ದೃಷ್ಟಿ ಮಂದವಾಗುವುದು, ಅಸ್ಪಷ್ಟ ದೃಷ್ಟಿ ಸಮಸ್ಯೆ ಕಾಡುವುದು ಪಾರ್ಶ್ವವಾಯುವಿನ ಸಂಕೇತವಾಗಿದೆ.
ಮಹಿಳೆಯರಲ್ಲಿ ಕಂಡು ಬರುವ ದಿಢೀರ್ ತೂಕ ಬದಲಾವಣೆ ಅತಿಯಾದ ಥೈರಾಯ್ಡ್, ಬಿಪಿ, ಶುಗರ್, ಮಾನಸಿಕ ಅಸ್ವಸ್ಥೆಯ ಲಕ್ಷಣಗಳಾಗಿವೆ. ಮಹಿಳೆಯರಲ್ಲಿ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆಯುವುದು ಉತ್ತಮ.
ಫಾಸ್ಟ್ ಜೀವನಶೈಲಿಯಲ್ಲಿ ಅತಿಯಾದ ಒತ್ತಡ ಸಾಮಾನ್ಯವೆ ಆದರೂ ಇದು ಸಾಮಾನ್ಯಕ್ಕಿಂತ ಹೆಚ್ಚಾಗಿದ್ದರೆ ಮಾನಸಿಕ ಖಿನ್ನತೆ ಸೂಚನೆಯಾಗಿದೆ. ಮಹಿಳೆಯರಲ್ಲಿ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆಯುವುದು ಉತ್ತಮ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.