ಹಾರ್ಟ್ ಅಟ್ಯಾಕ್ ಮೊದಲು ದೇಹಕ್ಕೆ ಸಿಗುವ ಈ ಸಂಕೇತಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ
ಹೃದಯದ ಯಾವುದೇ ಸಮಸ್ಯೆಗೂ ಮೊದಲು ಎದೆ ನೋವು ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಪದೇ ಪದೇ ಕಾಣಿಸಿಕೊಳ್ಳುವ ಎದೆ ನೋವು ಹಾರ್ಟ್ ಅಟ್ಯಾಕ್ ನ ದೊಡ್ಡ ಎಚ್ಚರಿಕೆಯ ಸಂಕೇತ ಎಂದು ಹೇಳಲಾಗುತ್ತದೆ.
ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ದೇಹವು ಆಯಾಸಗೊಳ್ಳುವುದು, ದೌರ್ಬಲ್ಯ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ, ಯಾವುದೇ ದೈಹಿಕ ಚಟುವಟಿಕೆ ಇಲ್ಲದಿದ್ದರೂ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಈ ಓಡುವ ಒತ್ತಡ ಭರಿತ ಜೀವನ ಶೈಲಿಯಲ್ಲಿ ಆರೋಗ್ಯದ ಬಗ್ಗೆ ಗಮನಹರಿಸಲು ಸಮಯವೇ ಸಾಕಾಗುವುದಿಲ್ಲ. ಆದರೆ, ಸುಖಾ-ಸುಮ್ಮನೆ ಏನೂ ಇಲ್ಲದಿದ್ದರೂ ಕೂಡ ನೀವು ಆತಂಕಕ್ಕೆ ಒಳಗಾಗುತ್ತಿದ್ದರೆ, ಮನಸ್ಸಿಗೆ ಒಂದು ರೀತಿಯ ಭಯ ಕಾಡುತ್ತಿದ್ದರೆ ಇದನ್ನು ನಿರ್ಲಕ್ಷಿಸಬೇಡಿ.
ಕಾಲು ನೋವು ವಯೋಸಹಜ ಕಾಯಿಲೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಲ್ಲೂ ಹೆಚ್ಚಾಗಿ ಕಾಲು ನೋವು, ಅದರಲ್ಲೂ ಆಗಾಗ್ಗೆ ಪಾದಗಳಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ. ವಾಸ್ತವವಾಗಿ, ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಪಾದಕ್ಕೆ ಸರಿಯಾಗಿ ರಕ್ತಪರಿಚಲನೆ ಆಗುವುದಿಲ್ಲ. ಇದರಿಂದಲೂ ಕೂಡ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕಾರಣ ಏನೇ ಇರಲಿ ಪದೇ ಪದೇ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.
ಕೆಲವೊಮ್ಮೆ ಸುಮ್ಮನೆ ಕುಳಿತಿದ್ದರೂ ಕೂಡ ಹಠಾತ್ ಬೆವರುವಿಕೆ ಉಂಟಾಗುತ್ತದೆ. ಇದೂ ಕೂಡ ಹೃದಯದ ಅನಾರೋಗ್ಯದ ಎಚ್ಚರಿಕೆಯ ಗಂಟೆ ಆಗಿರಬಹುದು. ಇಂತಹ ಸಂದರ್ಭದಲ್ಲಿಯೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.