ಆಗಾಗ್ಗೆ ಮೂತ್ರ ವಿಸರ್ಜನೆ ಹೊರತುಪಡಿಸಿ ನಿಮಗೆ `Sugar` ಇದೇ ಎಂಬ ಎಚ್ಚರಿಕೆ ನೀಡುತ್ತೇ ಈ ಸಂಕೇತಗಳು! ನಿರ್ಲಕ್ಷಿಸಿದ್ರೆ ತಪ್ಪಿದ್ದಲ್ಲ ಅಪಾಯ...
ಇಡೀ ವಿಶ್ವದಲ್ಲಿ ಭಾರತದಲ್ಲಿ ಮಧುಮೆಹಿಗಳ ಸಂಖ್ಯೆ ಅಧಿಕವಾಗಿದೆ. ಮಧುಮೇಹ ಅಥವಾ ಡಯಾಬಿಟಿಸ್ ದೀರ್ಘಾವಧಿಯ ಕಾಯಿಲೆಯಾಗಿದ್ದು ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು.
ರಾತ್ರಿ ವೇಳೆ ಪದೇ ಪದೇ ಮೂತ್ರ ವಿಸರ್ಜನೆಗಾಗಿ ಏಳುವುದು ಸಕ್ಕರೆ ಕಾಯಿಲೆಯ ಸಾಮಾನ್ಯ ಲಕ್ಷಣವೇ ಆದರೂ, ಇದನ್ನು ಹೊರತುಪಡಿಸಿ ಇನ್ನೂ ಕೆಲ ಚಿಹ್ನೆಗಳು ಕೂಡ ದೇಹವು ಡಯಾಬಿಟಿಸ್ ಕಾಯಿಲೆಗೆ ಒಳಗಾಗಿರಬಹುದು ಎಂಬುದರ ಎಚ್ಚರಿಕೆಯ ಗಂಟೆಗಳಾಗಿವೆ. ಅಂತಹ ಲಕ್ಷಣಗಳೆಂದರೆ....
ಅತಿಯಾದ ಬಾಯಾರಿಕೆ ಅಥವಾ ಪಾಲಿಡಿಪ್ಸಿಯಾ ಕೂಡ ದೇಹದಲ್ಲಿ ಶುಗರ್ ಹೆಚ್ಚಾಗಿರುವುದನ್ನು ಸೂಚಿಸುತ್ತದೆ.
ರಾತ್ರಿ ವೇಳೆ ಅತಿಯಾದ ಆಯಾಸವನ್ನು ಅನುಭವಿಸುತ್ತಿದ್ದರೆ ದೇಹದಲ್ಲಿ ಗ್ಲೂಕೋಸ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ಶುಗರ್ ಏರುಪೇರಾಗಿರಬಹುದು ಎಂಬುದರ ಸಂಕೇತವಾಗಿದೆ.
ದೇಹದಲ್ಲಿ ಶುಗರ್ ಹೆಚ್ಚಾಗಿದ್ದರೆ ಆಗಾಗ್ಗೆ ಕಣ್ಣುಗಳಲ್ಲಿನ ಮಸೂರಗಳು ಊದಿಕೊಳ್ಳಬಹುದು. ಕೆಲವೊಮ್ಮೆ ದೃಷ್ಟಿಯೂ ಮಸುಕಾಗಬಹುದು.
ಉದ್ದೇಶಪೂರ್ವಕವಲ್ಲದ ಅತಿಯಾದ ತೂಕ ನಷ್ಟವು ಮಧುಮೇಹವನ್ನು ಸೂಚಿಸುತ್ತದೆ.
ಯಾವುದಾದರೂ ಸಣ್ಣ ಗಾಯವೂ ಕೂಡ ಬೇಗ ಗುಣಮುಖವಾಗದೆ ಇರುವುದು ಸಹ ಹೈ ಶುಗರ್ ಸಮಸ್ಯೆಯ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.