ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಡುವ ತಪ್ಪನ್ನು ಎಂದಿಗೂ ಮಾಡಬೇಡಿ, ಲಾಭದ ಬದಲು ನಷ್ಟವಾಗಬಹುದು
ಅನೇಕ ಬಾರಿ ಹಣ್ಣುಗಳನ್ನು ಹಾಳಾಗದಂತೆ ತಡೆಯುವ ದೃಷ್ಟಿಯಿಂದ ನಾವು ಅವುಗಳನ್ನು ಫ್ರಿಡ್ಜ್‌ನಲ್ಲಿ ಇಡುತ್ತೇವೆ, ಇದರಿಂದ ಅವು ಹಾಳಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ಫ್ರಿಡ್ಜ್‌ನಲ್ಲಿ ಹಣ್ಣುಗಳನ್ನು ಇಡುವುದರಿಂದ ನಿಮಗೆ ಹಾನಿಯಾಗಬಹುದು ಎಂದು ನಿಮಗೆ ತಿಳಿದಿದೆಯೇ? ಅನೇಕ ಸಲ ಹಣ್ಣುಗಳು ಫ್ರಿಡ್ಜ್‌ನ ತಂಪನ್ನು ಸಹಿಸಲು ಸಾಧ್ಯವಾಗುವುದಿಲ್ಲ ಮತ್ತು ಈ ಕಾರಣದಿಂದಾಗಿ ಹಣ್ಣುಗಳಲ್ಲಿ ಇರುವ ಪೋಷಕಾಂಶಗಳು ನಾಶವಾಗಲು ಆರಂಭವಾಗುತ್ತದೆ. ಕಲ್ಲಂಗಡಿ ಸೇರಿದಂತೆ ಮುಂತಾದ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅದರೊಳಗಿರುವ ಆ್ಯಂಟಿಆಕ್ಸಿಡೆಂಟ್‌ಗಳು ನಾಶವಾಗುತ್ತವೆ. ಒಂದು ನೀವು ಫ್ರಿಡ್ಜ್‌ನಲ್ಲಿ ಹಣ್ಣುಗಳನ್ನು ಇಡಲು ಬಯಸಿದರೆ ದೀರ್ಘಕಾಲದವರೆಗೆ ಅವುಗಳು ಫ್ರಿಡ್ಜ್‌ನಲ್ಲಿ ಇರದಂತೆ ನಿಗಾವಹಿಸಿ.
ಫ್ರಿಡ್ಜ್‌ನಲ್ಲಿ ಸಿಟ್ರಿಕ್ ಆಸಿಡ್ (Citrus Fruits) ಇರುವ ಹಣ್ಣುಗಳನ್ನು ಇಡುವುದರಿಂದ ಅವುಗಳ ಪೋಷಕಾಂಶಗಳು ಕಡಿಮೆಯಾಗುತ್ತವೆ. ಈ ಹಣ್ಣುಗಳ ರುಚಿಯೂ ಹಾಳಾಗುತ್ತದೆ.
ಫ್ರಿಡ್ಜ್‌ನಲ್ಲಿ ಮಾವನ್ನು (Mango) ಇಡುವುದರಿಂದ ಅದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಕಡಿಮೆಯಾಗುತ್ತದೆ. ಹಾಗಾಗಿ ಮಾವಿನ ಹಣ್ಣುಗಳನ್ನು ಫ್ರಿಡ್ಜ್‌ನ ಇಡದೆ ಇರುವುದು ಉತ್ತಮ
ಇದನ್ನೂ ಓದಿ- High Uric Acid: ಹೆಚ್ಚಾಗುತ್ತಿರುವ ಯುರಿಕ್ ಆಸಿಡ್ ಪ್ರಮಾಣ ಈ ರೀತಿ ನಿಯಂತ್ರಿಸಿ, ಕೀಲು ನೋವಿನಿಂದ ಈ ರೀತಿ ಪರಿಹಾರ ಪಡೆಯಿರಿ
ಲಿಚ್ಚಿಯನ್ನು (Litchi) ಫ್ರಿಡ್ಜ್‌ನಲ್ಲಿ ಇಟ್ಟರೆ ಅದರ ಸಿಪ್ಪೆ ತಾಜಾವಾಗಿ ಕಾಣುತ್ತದೆ, ಆದರೆ ಹಣ್ಣು ಒಳಗಿನಿಂದ ಹಾಳಾಗುತ್ತದೆ. ಫ್ರಿಡ್ಜ್‌ನ ಕೃತಕ ತಂಪಾಗಿಸುವಿಕೆಯು ಹಣ್ಣನ್ನು ಹಾನಿಗೊಳಿಸುತ್ತದೆ.
ಸೇಬು (Apple), ಪ್ಲಮ್ ಮತ್ತು ಚೆರ್ರಿಗಳಂತಹ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು. ಈ ಹಣ್ಣುಗಳು ಹೆಚ್ಚು ಸಕ್ರಿಯವಾದ ಕಿಣ್ವಗಳನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅವು ಬೇಗನೆ ಹಾಳಾಗುತ್ತವೆ.
ಇದನ್ನೂ ಓದಿ- Snoring Problem: ಮಲಗುವಾಗ ನೀವೂ ಗೊರಕೆ ಹೊಡೆಯುತ್ತೀರಾ? ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ತಿಳಿಯಿರಿ
ಬಾಳೆಹಣ್ಣಿನ ಕಾಂಡದಿಂದ ಎಥಿಲೀನ್ ಅನಿಲ ಬಿಡುಗಡೆಯಾಗುತ್ತದೆ, ಈ ಕಾರಣದಿಂದಾಗಿ ಬಾಳೆಹಣ್ಣನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿದಾಗ ಅದು ಬೇಗನೆ ಕಪ್ಪಾಗಲು ಆರಂಭವಾಗುತ್ತದೆ ಮತ್ತು ಹಾಳಾಗುತ್ತದೆ.
(ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.)