ಪವಿತ್ರ ತುಳಸಿ ಗಿಡದ ಬಳಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ; ಶ್ರೀಮಂತರೂ ಸಹ ಬಡವರಾಗ್ತಾರೆ ಎಚ್ಚರ!
ಹಿಂದೂಗಳಿಗೆ ಪವಿತ್ರವಾಗಿರುವ ತುಳಸಿ ಗಿಡವು ವಿಷ್ಣುದೇವನಿಗೆ ಇಷ್ಟವೆಂದು ನಂಬಲಾಗಿದೆ. ಈ ಪವಿತ್ರ ಸಸ್ಯದಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸಿದ್ದಾಳೆಂಬ ನಂಬಿಕೆಯೂ ಇದೆ. ಹೀಗಾಗಿಯೇ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಈ ಗಿಡದ ಬಳಿ ದೀಪ ಹಚ್ಚಿ ಭಕ್ತಿಯಿಂದ ಪೂಜೆ ಮಾಡಲಾಗುತ್ತದೆ.
ತುಳಸಿ ಪೂಜೆಗೆ ಪ್ರತಿಯೊಬ್ಬರೂ ಕೆಲವು ನಿಯಮಗಳನ್ನು ಪಾಲಿಸಬೇಕು. ಅವುಗಳನ್ನು ಅನುಸರಿಸಲು ವಿಫಲವಾದರೆ ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿಯೇ ತುಳಸಿಯನ್ನು ಪೂಜಿಸುವಾಗ ಕೆಲವು ವಿಷಯಗಳನ್ನು ಯಾವುದೇ ಕಾರಣಕ್ಕೂ ಮರೆಯಬಾರದು.
ತುಳಸಿಯು ತನ್ನ ಹಿಂದಿನ ಜನ್ಮದಲ್ಲಿ ಜಲಂಧರನ ಹೆಂಡತಿಯಾಗಿದ್ದಳು ಅಂತಾ ನಂಬಲಾಗಿದೆ. ಪರಮೇಶ್ವರನು ಜಲಂಧರನ ಹೆಂಡತಿಯನ್ನು ಕೊಲ್ಲುತ್ತಾನೆ. ಹೀಗಾಗಿ ತುಳಸಿ ಬಳಿ ಯಾವುದೇ ಕಾರಣಕ್ಕೂ ಶಿವಲಿಂಗವನ್ನು ಇಡಬಾರದು.
ತುಳಸಿ ಗಿಡದ ಬಳಿ ಯಾರೂ ಸಹ ಅಪ್ಪಿತಪ್ಪಿಯೂ ಚಪ್ಪಲಿಗಳನ್ನು ಇಡಬಾರದು. ಹೀಗೆ ಮಾಡಿದರೆ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ. ಈ ಕಾರಣದಿಂದ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡವನ್ನು ಮನೆಯ ಉತ್ತರ ಅಥವಾ ಪೂರ್ವ, ಈಶಾನ್ಯ ದಿಕ್ಕಿನಲ್ಲಿ ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ಬಾಲ್ಕನಿ ಅಥವಾ ಕಿಟಕಿಯ ಮೇಲೆ ನೆಟ್ಟರೆ ಅದನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಬೇಕು.