ತುಳಸಿ ಪಕ್ಕದಲ್ಲಿ ಈ ಒಂದು ಸಸ್ಯ ಇರಲೇಬಾರದು !ಶಾಶ್ವತವಾಗಿ ಮುನಿಸಿಕೊಂಡು ಹೊರ ನಡೆಯುತ್ತಾಳೆ ಲಕ್ಷ್ಮೀ
ತುಳಸಿ ಗಿಡವನ್ನು ಎಲ್ಲಿ ನೆಡಲಾಗುತ್ತದೆಯೋ ಅಲ್ಲಿ ಲಕ್ಷ್ಮೀದೇವಿಯೂ ನೆಲೆಸುತ್ತಾಳೆ ಎಂದು ವಾಸ್ತು ಶಾಸ್ತ್ರದ ತಜ್ಞರು ಹೇಳುತ್ತಾರೆ. ಅಲ್ಲದೆ ಲಕ್ಷ್ಮಿ ದೇವಿಯ ಕೃಪೆಯಿಂದ ಆ ಮನೆಯ ಬೊಕ್ಕಸ ತುಂಬಿರುತ್ತದೆ.
ತುಳಸಿ ಗಿಡ ಯಾವ ಮನೆಯ ಮುಂದೆ ಇರುವುದೋ ಆ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಇರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಮನೆ ಮುಂದೆ ತುಳಸಿ ಇದ್ದರೂ ಕೆಲವೊಮ್ಮೆ ಹಣಕಾಸಿನ ಸಮಸ್ಯೆ ತಪ್ಪುವುದೇ ಇಲ್ಲ.
ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡದ ಬಳಿ ಕೆಲವೊಂದು ಸಸ್ಯ ಮತ್ತು ಕೆಲವೊಂದು ವಸ್ತುಗಳನ್ನು ಇಡಲೇಬಾರದು. ಇದರಿಂದ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗಿ, ಹಣಕಾಸಿನ ತೊಂದರೆ ಎದುರಾಗುವುದು.
ತುಳಸಿ ಗಿಡದ ಬಳಿ ಶಮಿ ಗಿಡ ನೆಡುವುದು ಅಶುಭ.ಇದರಿಂದ ಋಣಾತ್ಮಕ ಪರಿಣಾಮ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಅಲ್ಲದೆ, ಮನೆಯ ಸಮೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ಇನ್ನು ತುಳಸಿ ಗಿಡದ ಬಳಿ ಚಪ್ಪಲಿ, ಪೊರಕೆ, ಕಸದ ಬುಟ್ಟಿಗಳನ್ನೂ ಕೂಡಾ ಇಡಬಾರದು. ಇದು ಕೂಡಾ ಮನೆಯವರ ಹಣಕಾಸಿನ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ.
ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಈ ಸುದ್ದಿಯನ್ನು ಖಚಿತಪಡಿಸುವುದಿಲ್ಲ.