ಮರೆತೂ ಕೂಡ ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ಸಂದೇಶಗಳನ್ನು ಕಳುಹಿಸಬೇಡಿ, ನಿರ್ಲಕ್ಷಿಸಿದರೆ ಜೈಲು ಸೇರಬೇಕಾದೀತು ಎಚ್ಚರ!
ತ್ವರಿತ ಮೆಸೇಜಿಂಗ್ ಪ್ಲಾಟ್ಫಾರ್ಮ್ ಎಂತಲೇ ಪ್ರಸಿದ್ದಿಯಾಗಿರುವ ವಾಟ್ಸಾಪ್ ನಲ್ಲಿ ಸಂದೇಶಗಳು ಬಲು ಬೇಗ ವೈರಲ್ ಆಗುತ್ತವೆ.
ಈ ತಂತ್ರಜ್ಞಾನ ಯುಗದಲ್ಲಿ ಯಾವುದೇ ವಿಚಾರದ ಬಗ್ಗೆ ಬೇರೆ ಪ್ಲಾಟ್ಫಾರ್ಮ್ ಗಳಿಗಿಂತ ಹೆಚ್ಚಾಗಿ ವಾಟ್ಸಾಪ್ ಗ್ರೂಪ್‌ಗಳಲ್ಲಿ ಚರ್ಚೆಗಳು ನಡೆಯುತ್ತವೆ.
ವಾಟ್ಸಾಪ್ ಗ್ರೂಪ್‌ಗಳಲ್ಲಿ ಸಂದೇಶ ಕಳುಹಿಸುವ ಮೊದಲು ಕೆಲವು ನಿಯಮಗಳ ಬಗ್ಗೆ ತಿಳಿದಿರುವುದು ಅಗತ್ಯವಾಗಿದೆ.
ವಾಟ್ಸಾಪ್‌ನಲ್ಲಿ ಅಪ್ಪಿತಪ್ಪಿಯೂ ಸಹ ಕೆಲವು ವಿಚಾರಗಳ ಬಗ್ಗೆ ಸಂದೇಶ ಕಳುಹಿಸುವುದು ಅಪರಾಧವಾಗಿದ್ದು, ಅಂತಹ ಅಪರಾಧಗಳಿಗೆ ಜೈಲು ಶಿಕ್ಷೆಯೂ ಆಗಬಹುದು. ಅಂತಹ 5 ಪ್ರಮುಖ ವಿಷಯಗಳೆಂದರೆ...
ಯಾವುದೇ ವಾಟ್ಸಾಪ್ ಗ್ರೂಪ್‌ಗಳಲ್ಲಿ ವಯಸ್ಕರ ವಿಚಾರಗಳನ್ನು ಕಳುಹಿಸಿದರೆ ಈ ಬಗ್ಗೆ ಗ್ರೂಪ್ ಸದಸ್ಯರ್ ಆಕ್ಷೇಪಣೆ ವ್ಯಕ್ತಪಡಿಸಿ ಅದರ ವಿರುದ್ಧ ಪೊಲೀಸ್ ದೂರು ದಾಖಲಿಸಬಹುದು.
ಯಾವುದೇ ಕಾರಣಕ್ಕೂ ಮಕ್ಕಳ ಅಪರಾಧಕ್ಕೆ ಸಂಬಂಧಿಸಿದ ಪಠ್ಯ, ಫೋಟೋ ಅಥವಾ ವೀಡಿಯೊಗಳನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳುವುದರಿಂದ ಪೊಲೀಸರು ದೂರು ದಾಖಲಿಸಿ, ಜೈಲು ಶಿಕ್ಷೆಗೂ ಒಳಪಡಿಸಬಹುದು.
ಯಾವುದೇ ವಾಟ್ಸಾಪ್ ಸಂದೇಶದಲ್ಲಿ ದೇಶವಿರೋಧಿ ಸಂದೇಶವನ್ನು ಒಳಗೊಂಡ ಪಠ್ಯ, ಫೋಟೋ ಅಥವಾ ವಿಡಿಯೋ ಶೇರ್ ಮಾಡುವುದು ಕೂಡ ಅಪರಾಧವಾಗಿದೆ. ಇದೂ ಕೂಡ ನಿಮ್ಮನ್ನು ಜೈಲು ಪಾಲಾಗುವಂತೆ ಮಾಡಬಹುದು.
ವಾಟ್ಸಾಪ್‌ನಲ್ಲಿ/ ವಾಟ್ಸಾಪ್ ಗ್ರೂಪ್‌ಗಳಲ್ಲಿ ಯಾವುದೇ ರೀತಿಯಿಂದಲೂ ಹಿಂಸೆಯನ್ನು ಪ್ರಚೋದಿಸುವ, ಉತ್ತೇಜಿಸುವಂತಹ ಸಂದೇಶಗಳನ್ನು ಕಳುಹಿಸಬಾರದು. ಗ್ರೂಪ್ ಸದಸ್ಯರು ಈ ಬಗ್ಗೆಯೂ ದೂರು ದಾಖಲಿಸಬಹುದು.
ವಾಟ್ಸಾಪ್‌ನಲ್ಲಿ ನೀವು ಯಾವುದೇ ಎಮ್‌ಎಮ್‌ಎಸ್ ಸ್ವೀಕರಿಸಿದ್ದರೆ ಅವುಗಳನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುವುದರಿಂದಲೂ ನೀವು ತೊಂದರೆಗೆ ಸಿಲುಕಬಹುದು. ಹಾಗಾಗಿ, ವಾಟ್ಸಾಪ್‌ನಲ್ಲಿ ಇಂತಹ ಸಂದೇಶಗಳನ್ನು ಕಳುಹಿಸುವಾಗ ಎಚ್ಚರಿಕೆಯಿಂದ ಇರಿ.