Vastu Tips: ಈ ಆಹಾರ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಯಾರಿಂದಲೂ ಉಚಿತವಾಗಿ ತೆಗೆದುಕೊಳ್ಳಬೇಡಿ!
ವಾಸ್ತುಶಾಸ್ತ್ರದಲ್ಲಿ ಯಾರಿಂದಲೂ ಸಾಲ ಅಥವಾ ಉಚಿತವಾಗಿ ತೆಗೆದುಕೊಳ್ಳುವುದು ಅತ್ಯಂತ ಅಶುಭಕರವೆಂದು ಪರಿಗಣಿಸಲಾದ ಆಹಾರದ ಪ್ರಮುಖ ಅಂಶವಿದೆ. ಈ ಆಹಾರ ಪದಾರ್ಥವನ್ನು ಸಾಲವಾಗಿ ಅಥವಾ ಅದನ್ನು ಉಚಿತವಾಗಿ ತೆಗೆದುಕೊಳ್ಳುವುದರಿಂದ ವ್ಯಕ್ತಿಯು ಆರ್ಥಿಕ ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಾನೆ.
ವಾಸ್ತುಶಾಸ್ತ್ರದ ಪ್ರಕಾರ ಯಾರಿಂದಲೂ ಉಪ್ಪನ್ನು ಉಚಿತವಾಗಿ ತೆಗೆದುಕೊಳ್ಳಬೇಡಿ. ಹಾಗೆಯೇ ಉಪ್ಪನ್ನು ಸಾಲವಾಗಿ ಕೇಳಬಾರದಂತೆ. ಹೀಗೆ ಮಾಡುವುದರಿಂದ ವ್ಯಕ್ತಿಯು ಅನೇಕ ತಲೆಮಾರುಗಳವರೆಗೆ ಸಾಲದ ಹೊರೆಯಲ್ಲಿ ಮುಳುಗಿರುತ್ತಾನೆ. ಆತನು ಬಡವನಾಗುತ್ತಾನೆ ಮತ್ತು ಹಣಕಾಸಿನ ಸಮಸ್ಯೆಗಳಿಂದ ಕಷ್ಟಪಡುತ್ತಾನೆ.
ವಾಸ್ತುಶಾಸ್ತ್ರದಲ್ಲಿ ಉಪ್ಪನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಮನೆಯಲ್ಲಿನ ವಾಸ್ತು ದೋಷಗಳನ್ನು ಹೋಗಲಾಡಿಸಲು, ಹಣಕಾಸಿನ ತೊಂದರೆಗಳು ಮತ್ತು ನಕಾರಾತ್ಮಕತೆಯನ್ನು ತೊಡೆದುಹಾಕಲು ಉಪ್ಪಿನ ಅನೇಕ ಪರಿಹಾರಗಳು ಬಹಳ ಪರಿಣಾಮಕಾರಿ. ಅದೇ ರೀತಿ ಉಪ್ಪಿಗೆ ಸಂಬಂಧಿಸಿದ ತಪ್ಪುಗಳು ಸಹ ವ್ಯಕ್ತಿಯನ್ನು ಬಡವಾಗಿಸಬಹುದು.
ಉಪ್ಪನ್ನು ಉಚಿತವಾಗಿ ತೆಗೆದುಕೊಳ್ಳದೇ ಇರುವುದರ ಜೊತೆಗೆ ಅದಕ್ಕೆ ಸಂಬಂಧಿಸಿದ ಇನ್ನೊಂದು ತಪ್ಪನ್ನೂ ಆದಷ್ಟು ತಪ್ಪಿಸಿ. ನಿಮ್ಮ ಅಡುಗೆಮನೆಯಲ್ಲಿ ಉಪ್ಪು ಖಾಲಿಯಾಗಲು ಬಿಡಬೇಡಿ. ಮನೆಯಲ್ಲಿ ಉಪ್ಪಿನ ಕೊರತೆಯು ಆರ್ಥಿಕ ನಷ್ಟ ಮತ್ತು ಖ್ಯಾತಿಯನ್ನು ಕಳೆದುಕೊಳ್ಳುತ್ತದಂತೆ. ಆದ್ದರಿಂದ ಉಪ್ಪು ಸಂಪೂರ್ಣವಾಗಿ ಖಾಲಿಯಾಗುವ ಮೊದಲೇ ಅದನ್ನು ತರಬೇಕು.
ವಾಸ್ತುಶಾಸ್ತ್ರದಲ್ಲಿ ಉಪ್ಪು ನ್ಯಾಯದ ದೇವರು ಶನಿದೇವನಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಆದ್ದರಿಂದ ಉಚಿತ ಉಪ್ಪನ್ನು ತಿನ್ನುವುದು ವ್ಯಕ್ತಿಯನ್ನು ತೊಂದರೆಗೆ ಸಿಲುಕಿಸುತ್ತದೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)